ಸೋಮವಾರ, ಏಪ್ರಿಲ್ 28, 2025
HomeSportsCricketRCB coach Sridharan Sriram : ಆರ್‌ಸಿಬಿ ಮಾಜಿ ಕೋಚ್ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸೇರ್ಪಡೆ

RCB coach Sridharan Sriram : ಆರ್‌ಸಿಬಿ ಮಾಜಿ ಕೋಚ್ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸೇರ್ಪಡೆ

- Advertisement -

RCB coach Sridharan Sriram : ಏಷ್ಯಾ ಕಪ್ 2022 ಪಂದ್ಯಾವಳಿಗೆ ತಂಡಗಳು ಸಜ್ಜಾಗುತ್ತಿವೆ. ಆಗಸ್ಟ್ 27 ರಂದು ಪ್ರಾರಂಭವಾಗಲಿರುವ ಏಷ್ಯಾ ಕಪ್‌ ಸೆಪ್ಟೆಂಬರ್ 11 ರಂದು ಮುಕ್ತಾಯವಾಗಲಿದೆ. ಈ ನಡುವಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ಕೋಚ್ ಏಷ್ಯಾ ಕಪ್ 2022 ಆರಂಭಕ್ಕೆ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಸೇರಿಕೊಂಡಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಏಷ್ಯಾ ಕಪ್ ಮತ್ತು ರಾಷ್ಟ್ರೀಯ ತಂಡದ ತಾಂತ್ರಿಕ ಸಲಹೆಗಾರರಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ನೇಮಕ ಮಾಡಿದೆ.

ಏಷ್ಯಾ ಕಪ್ 2022 ರ ಕ್ರಿಕೆಟ್ ಟೂರ್ನಮೆಂಟ್‌ನ ಒಟ್ಟು 6 ತಂಡಗಳು ಭಾಗವಾಗಲಿವೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಈಗಾಗಲೇ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿವೆ. ಹಾಂಕಾಂಗ್, ಕುವೈತ್, ಸಿಂಗಾಪುರ್ ಮತ್ತು ಯುಎಇಯ ಒಂದು ತಂಡ 6 ನೇ ಸ್ಥಾನವನ್ನು ಪಡೆಯಲಿದೆ. ಪಂದ್ಯಾವಳಿಯ ಮೊದಲು ಅರ್ಹತಾ ಸುತ್ತು ನಡೆಯುತ್ತದೆ ಮತ್ತು ವಿಜೇತರು 6 ನೇ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ಶ್ರೀರಾಮ್ ಅವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆಯೇ ಹೊರತು ತರಬೇತುದಾರರಾಗಿಲ್ಲ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪಪೋನ್ ಸ್ಪೋರ್ಟ್‌ಸ್ಟಾರ್‌ಗೆ ದೃಢಪಡಿಸಿದ್ದಾರೆ. ಅವರ ಅಧಿಕಾರಾವಧಿಯು ಏಷ್ಯಾಕಪ್‌ನಿಂದ ಟಿ20 ವಿಶ್ವಕಪ್‌ವರೆಗೆ ಇರುತ್ತದೆ. RCB ಮಾಜಿ ಕೋಚ್ ಶ್ರೀಧರನ್ ಶ್ರೀರಾಮ್ ಅವರು 2016 ರಿಂದ ಆರು ವರ್ಷಗಳ ಕಾಲ ಆಸ್ಟ್ರೇಲಿಯನ್ ತಂಡದೊಂದಿಗೆ ಸಹಾಯಕ ಕೋಚ್ ಮತ್ತು ಸ್ಪಿನ್-ಬೌಲಿಂಗ್ ತರಬೇತುದಾರರಾಗಿ ಕೆಲಸ ಮಾಡಿದರು ಮತ್ತು IPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಪಾತ್ರವನ್ನು ಹೊಂದಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಆಡಂ ಜಂಪಾ ಮತ್ತು ಆಷ್ಟನ್ ಅಗರ್ ಹಾಗೂ RCB ಜೊತೆಗಿನ ಸಮಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು T20 ಸ್ಪಿನ್ನರ್ ಆಗಿ ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದ್ದಾರೆ. ಇದು ಆಸ್ಟ್ರೇಲಿಯಾದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಅಡಿಯಲ್ಲಿ, ಶ್ರೀರಾಮ್ ಅವರಿಗೆ 2016 ರಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಲಾಯಿತು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ತನ್ನ ಪಾತ್ರವನ್ನು ಕೇಂದ್ರೀಕರಿಸಲು 46 ವರ್ಷ ವಯಸ್ಸಿನವರು ಇತ್ತೀಚೆಗೆ ಆ ಸ್ಥಾನದಿಂದ ಕೆಳಗಿಳಿದರು. RCB ಮಾಜಿ ತರಬೇತುದಾರ ಶ್ರೀಧರನ್ ಶ್ರೀರಾಮ್ ಅವರು 2000 ಮತ್ತು 2004 ರ ನಡುವೆ ಭಾರತಕ್ಕಾಗಿ ಎಂಟು ODIಗಳನ್ನು ಆಡಿದರು, ಒಂದು ಅರ್ಧಶತಕ ಮತ್ತು ಒಂಬತ್ತು ವಿಕೆಟ್‌ ಗಳಿಸಿದ ಸಾಧನೆಯನ್ನು ಮಾಡಿದ್ದಾರೆ.

ಇದನ್ನೂ ಒದಿ : Jasprit Bumrah : ಬೆಂಗಳೂರಲ್ಲಿ ಜಸ್’ಪ್ರೀತ್ ಬುಮ್ರಾ, ಆತ್ಮೀಯ ಗೆಳೆಯನನ್ನು ಭೇಟಿ ಮಾಡಿದ ಕರ್ನಾಟಕ ಕ್ರಿಕೆಟರ್

ಇದನ್ನೂ ಓದಿ : Mohammad Shami : ಕೆಂಪು ಸುಂದರಿಯ ಜೊತೆ ಲವ್ವಲ್ಲಿ ಬಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ

Former RCB coach Sridharan Sriram joins Bangladesh cricket team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular