Gautam Gambhir- Amit Shah : ಬೆಂಗಳೂರು: ಭಾರತ ಕ್ರಿಕೆಟ್ ತಂಡ ಮಾಜಿ ಎಡಗೈ ಆಟಗಾರ, ವಿಶ್ವಕಪ್ ಹೀರೋ, ಐಪಿಎಲ್ ಪ್ರಶಸ್ತಿ ವಿಜೇತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಗೌತಮ್ ಗಂಭೀರ್ (Gautam Gambhir) ಭಾರತ ತಂಡದ ನೂತನ ಹೆಡ್ ಕೋಚ್ (Team India Head Coach) ಆಗಿ ನೇಮಕಗೊಳ್ಳುವುದು ಖಚಿತವಾಗಿದೆ.

ಟೀಮ್ ಇಂಡಿಯಾ ಕೋಚ್ ಆಗಿ ಗಂಭೀರ್ ನೇಮಕದ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ. ಮುಂದಿನ ವಾರ ಬಿಸಿಸಿಐ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ಭಾರತ ತಂಡದ ಕೋಚ್ ಹುದ್ದೆಗೇರಲು ಸಜ್ಜಾಗಿರುವ ಗೌತಮ್ ಗಂಭೀರ್, ಅದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಅಮಿತ್ ಶಾ ಅವರ ಪುತ್ರ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿಯ ಮಾಜಿ ಸಂಸದರಾಗಿರುವ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾ ಕೋಚ್ ಹುದ್ದೆಗೆ ನೇಮಕ ಮಾಡಲು ಜಯ್ ಶಾ ಉತ್ಸುಕರಾಗಿದ್ದಾರೆ. ಅಮಿತ್ ಶಾ ಭೇಟಿಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆ ‘ಎಕ್ಸ್’ನಲ್ಲಿ ಮಾಹಿತಿ ನೀಡಿರುವ ಗೌತಮ್ ಗಂಭೀರ್, ಚುನಾವಣಾ ಯಶಸ್ಸಿನ ಬಗ್ಗೆ ಅಭಿನಂದಿಸಲು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ ಎಂದಿದ್ದಾರೆ.
https://x.com/GautamGambhir/status/1802613244768498050
“ಇತ್ತೀಚಿನ ಚುನಾವಣಾ ಯಶಸ್ಸಿನ ಬಗ್ಗೆ ಅಭಿನಂದಿಸಲು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಗೃಹ ಸಚಿವರಾಗಿ ಅವರ ನಾಯಕತ್ವ ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸಲಿದೆ” ಎಂದು ಗೌತಮ್ ಗಂಭೀರ್ ಬರೆದಿದ್ದಾರೆ.
ಇದನ್ನೂ ಓದಿ : CCPL 2024 : ಕನ್ನಡಿಗ ಮುಕುಂದ್ ಗೌಡ ಮಾರ್ಗದರ್ಶನದ ರಾಯ್ಪುರ ರೈನೋಸ್ ಚೊಚ್ಚಲ ಚಾಂಪಿಯನ್
ಐಪಿಎಲ್-2024 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ತಂಡದ ಮೆಂಟರ್ ಗೌತಮ್ ಗಂಭೀರ್ ನಿರ್ಣಾಯಕ ಪಾತ್ರ ವಹಿಸಿರು. 2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಭಾರತದ ಗೆಲುವಿನ ಹಿಂದೆ ಗಂಭೀರ್ ವಹಿಸಿದ್ದ ಪಾತ್ರ ಮಹತ್ವದ್ದಾಗಿತ್ತು.

ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಕೆಲ ದಿನಗಳ ಹಿಂದೆ ಸುಳಿವು ಬಿಟ್ಟುಕೊಟ್ಟಿದ್ದರು. “ನಾನು ಭಾರತ ತಂಡಕ್ಕೆ ಕೋಚಿಂಗ್ ನೀಡುವುದನ್ನು ನಿಜಕ್ಕೂ ಇಷ್ಟ ಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ” ಎಂದು ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಗೌತಮ್ ಗಂಭೀರ್ ಹೇಳಿದ್ದರು.
ಇದನ್ನೂ ಓದಿ : India Women Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ ಆರ್’ಸಿಬಿ ಸ್ಟಾರ್ ಆಶಾ ಶೋಭನ !
ಭಾರತ ತಂಡದ ನೂತನ ಮುಖ್ಯ ಕೋಚ್ ಮೂರೂವರೆ ವರ್ಷಗಳ ಅವಧಿ ಆಗಿದ್ದು, ಜುಲೈ 1 2024ಕ್ಕೆ ಆರಂಭವಾಗಿ 2027ರ ಡಿಸೆಂಬರ್ 31ಕ್ಕೆ ಕೋಚ್ ಹುದ್ದೆ ಅವಧಿ ಕೊನೆಗೊಳ್ಳಲಿದೆ. ಟೀಂ ಇಂಡಿಯಾದ ಆಟಗಾರರ ಪ್ರದರ್ಶನ ಮತ್ತು ಆಡಳಿತ ನಡೆಸುವ ಜವಾಬ್ದಾರಿಯು ಮುಖ್ಯ ತರಬೇತುದಾರ ನದ್ದಾಗಿರುತ್ತದೆ.
ಇದನ್ನೂ ಓದಿ : Gautam Gambhir India Coach: ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್, ತಿಂಗಳ ಅಂತ್ಯದಲ್ಲಿ ಘೋಷಣೆ !
Gautam Gambhir- Amit Shah: Did Gautam Gambhir meet Amit Shah before Team India coach ?