Glenn Maxwell- IPL 2025 : ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (Royal Challengers Bengaluru – RCB) ಅನುಭವಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್’ವೆಲ್ (Glenn Maxwell) ಮುಂದಿನ ಐಪಿಎಲ್’ನಲ್ಲಿ ಆರ್’ಸಿಬಿ ಪರ ಆಡುವುದು ಅನುಮಾನ. ಸ್ವತಃ ಮ್ಯಾಕ್ಸ್’ವೆಲ್ ಅವರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರ ನಡೆಯುವ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್-2024 ಟೂರ್ನಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದ ಗ್ಲೆನ್ ಮ್ಯಾಕ್ಸ್’ವೆಲ್ ಆಡಿದ ಹತ್ತು ಪಂದ್ಯಗಳಿಂದ ಕೇವಲ 5.77ರ ಸರಾಸರಿಯಲ್ಲಿ 52 ರನ್ ಗಳಿಸಿದ್ದರು. ಬೌಲಿಂಗ್’ನಲ್ಲಿ 6 ವಿಕೆಟ್ ಕಬಳಿಸಿದ್ದರು. ಹೀಗಾಗಿ ಮುಂಬರುವ ಐಪಿಎಲ್’ನಲ್ಲಿ ಆರ್’ಸಿಬಿ ಫ್ರಾಂಚೈಸಿ ಆಸೀಸ್ ಸ್ಟಾರ್ ಮ್ಯಾಕ್ಸ್’ವೆಲ್ ಅವರನ್ನು ತಂಡದಲ್ಲಿ ರೀಟೇನ್ ಮಾಡಿಕೊಳ್ಳುವ ಸಾಧ್ಯತೆಗಳು ಕಡಿಮೆ.
ಇದನ್ನೂ ಓದಿ : Rahul Dravid Paris Olympics 2024 : ಬಾಲ್ಯದಲ್ಲಿ ಆಡಿದ ಕ್ರೀಡೆಯನ್ನು ಒಲಿಂಪಿಕ್ಸ್’ನಲ್ಲಿ ವೀಕ್ಷಿಸಿದ ರಾಹುಲ್ ದ್ರಾವಿಡ್
ಈ ಸುಳಿವು ಸಿಕ್ಕಿರುವ ಕಾರಣದಿಂದಲೋ ಏನೋ, ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್ಸ್’ಟಾಗ್ರಾಂನಲ್ಲಿ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡವನ್ನು ಗ್ಲೆನ್ ಮ್ಯಾಕ್ಸ್’ವೆಲ್ ಅನ್ ಫಾಲೋ ಮಾಡಿದ್ದಾರೆ. ಅದು ಆರ್’ಸಿಬಿ ಮತ್ತು ಮ್ಯಾಕ್ಸ್’ವೆಲ್ ಬಾಂಧವ್ಯ ಕಡಿದುಕೊಂಡಿರುವ ಸೂಚನೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
ಈ ಹಿಂದೆ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್’ವೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2021ರಲ್ಲಿ ಖರೀದಿ ಮಾಡಿತ್ತು. 36 ವರ್ಷದ ಮ್ಯಾಕ್ಸ್’ವೆಲ್ 2008ರಿಂದಲೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದುವರೆಗೆ ಮ್ಯಾಕ್ಸ್’ವೆಲ್ ಐಪಿಎಲ್’ನಲ್ಲಿ 4 ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್’ನಲ್ಲಿ ಗ್ಲೆನ್ ಮ್ಯಾಕ್ಸ್’ವೆಲ್ ಪ್ರತಿನಿಧಿಸಿರುವ ತಂಡಗಳು:
-ಡೆಲ್ಲಿ ಡೇರ್ ಡೆವಿಲ್ಸ್
-ಕಿಂಗ್ಸ್ ಇಲೆವೆನ್ ಪಂಜಾಬ್ -ಮುಂಬೈ ಇಂಡಿಯನ್ಸ್
-ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇದನ್ನೂ ಓದಿ : MS Dhoni IPL 2025 : ಐಪಿಎಲ್-2025ರಲ್ಲಿ ಆಡಲಿದ್ದಾರೆ ‘ತಲಾ’ ಧೋನಿ, ಆದರೆ ಕಂಡಿಷನ್ ಅಪ್ಲೈ
ಐಪಿಎಲ್ ಆಟಗಾರರ ಮೆಗಾ ಹರಾಜು ಇದೇ ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆಗಳಿದ್ದು, ಎಲ್ಲಾ ಹತ್ತು ತಂಡಗಳಿಗೆ ತಲಾ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡುವ ಸಾಧ್ಯತೆಯಿದೆ. ಉಳಿದ ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಕಳೆದ ಮೂರು ವರ್ಷಗಳಿಂದ ತಂಡದ ನಾಯಕರಾಗಿದ್ದ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ, 40 ವರ್ಷದ ಫಾಫ್ ಡುಪ್ಲೆಸಿಸ್ ಅವರನ್ನೂ ತಂಡದಿಂದ ಕೈ ಬಿಡಲು ನಿರ್ಧರಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆ.ಎಲ್ ರಾಹುಲ್ ಅವರನ್ನು ಆರ್’ಸಿಬಿಗೆ ಕರೆ ತಂದು ತಂಡದ ನಾಯಕತ್ವ ವಹಿಸುವ ಸಾಧ್ಯತೆಯಿದೆ.
Glenn Maxwell exit from the RCB for IPL 2025