Hardik Pandya Divorce: ಸಾಮಾಜಿಕ ಜಾಲತಾಣಗಳಲ್ಲಿ ಈಗ ಟೀಮ್ ಇಂಡಿಯಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya) ಡಿವೋರ್ಸ್’ನದ್ದೇ ಸದ್ದು ಮತ್ತು ಸುದ್ದಿ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದು, ಪತಿಯಿಂದ ಸರ್ಬಿಯಾ ನಟಿ ನತಾಶಾ ಸ್ಟಾಂಕೋವಿಕ್ (Natasa Stankovic) ದೂರವಾಗಿದ್ದಾಳೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಡಿವೋರ್ಸ್ ಬಗ್ಗೆ ಎದ್ದಿರುವ ಊಹಾಪೋಹ ನಿಜವಾಗಿದ್ದೇ ಹೌದಾದಲ್ಲಿ ಹಾರ್ದಿಕ್ ಪಾಂಡ್ಯ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಐಪಿಎಲ್-2024 ಟೂರ್ನಿಯಲ್ಲಿ (IPL 2024) ಹಾರ್ದಿಕ್ ಪಾಂಡ್ಯ ನಾಯಕನಾಗಿ ಮತ್ತು ಆಟಗಾರನಾಗಿ ಭಾರೀ ವೈಫಲ್ಯ ಎದುರಿಸಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಈಗ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಾಂಡ್ಯ, ನಾಯಕತ್ವದಲ್ಲಿ ದಯನೀಯ ವೈಫಲ್ಯ ಕಂಡಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆದ್ದು 10 ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020ರ ಮೇ ತಿಂಗಳಲ್ಲಿ ಕೊರೊನಾ ಸಂದರ್ಭದಲ್ಲಿ ಮದುವೆಯಾಗಿದ್ದರು. ಅದೇ ವರ್ಷದ ಜುಲೈ ತಿಂಗಳಲ್ಲಿ ಪಾಂಡ್ಯ-ನತಾಶಾ ದಂಪತಿಗೆ ಗಂಡು ಮಗು ಜನಿಸಿತ್ತು. ನಾಲ್ಕು ವರ್ಷಗಳ ದಾಂಪತ್ಯದಲ್ಲೀಗ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಬಿಯಾ ಮೂಲದ ಮಾಡೆಲ್-ನಟಿ ನತಾಶಾ ಸ್ಟಾಂಕೋವಿಕ್ ಇನ್ಸ್’ಟಾಗ್ರಾಂ ಪ್ರೊಫೈಲ್’ನಲ್ಲಿರುವ ತಮ್ಮ ಹೆಸರಿನಿಂದ ಪಾಂಡ್ಯ ಸರ್’ನೇಮನ್ನು ತೆಗೆದು ಹಾಕಿದ್ದಾಳೆ.
ಇದು ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ಪಾಂಡ್ಯ ಸರ್’ನೇಮ್ ಅನ್ನು ತೆಗೆದು ಹಾಕಿರುವುದಷ್ಟೇ ಅಲ್ಲದೆ, ಪತಿಯ ಜೊತೆಗಿರುವ ಕೆಲ ಫೋಟೋಗಳನ್ನೂ ತಮ್ಮ ಇನ್ಸ್’ಟಾಗ್ರಾಂ ಅಕೌಂಟ್’ನಿಂದ ತೆಗೆದು ಹಾಕಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯ ವೇಳೆಯೂ ನತಾಶಾ ಸ್ಟಾಂಕೋವಿಕ್ ಕಾಣಿಸಿಕೊಳ್ಳದೇ ಇರುವುದು ಇಬ್ಬರೂ ದೂರವಾಗಿದ್ದಾರೆ ಎಂಬ ಊಹಾಪೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.

ಮಾರ್ಚ್ 4ರಂದು ನತಾಶಾ ಸ್ಟಾಂಕೋವಿಕ್ ಅವರ ಹುಟ್ಟುಹಬ್ಬ. ಪ್ರೀತಿಸಿ ಮದುವೆಯಾದ ಪತ್ನಿಯ ಹುಟ್ಟುಹಬ್ಬಕ್ಕೂ ಹಾರ್ದಿಕ್ ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿರಲಿಲ್ಲ. ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ದಾಂಪತ್ಯ ಮುರಿದು ಬಿದ್ದು, ಡೈವೋರ್ಸ್ ಕೊಟ್ಟರೆ ತನ್ನ ಆಸ್ತಿಯಲ್ಲಿ 70% ಆಸ್ತಿಯನ್ನು ಪಾಂಡ್ಯ ತನ್ನ ಪತ್ನಿಗೆ ನೀಡಬೇಕಿದೆ.
ಇದನ್ನೂ ಓದಿ : CSK Honoured Dinesh Karthik : ವಿಶೇಷ ಪೋಸ್ಟರ್’ನೊಂದಿಗೆ ದಿನೇಶ್ ಕಾರ್ತಿಕ್’ಗೆ ವಿದಾಯದ ಗೌರವ ಸಲ್ಲಿಸಿದ ಸಿಎಸ್’ಕೆ!
ಕೆಲ ತಿಂಗಳುಗಳ ಹಿಂದಷ್ಟೇ ತನ್ನ ಮಲತಾಯಿಯ ಮಗ ವೈಭವ್ ಪಾಂಡ್ಯನಿಂದ ಹಾರ್ದಿಕ್ ಪಾಂಡ್ಯ ಉದ್ಯಮಕ್ಕೆ ಸಂಬಂಧ ಪಟ್ಟಂತೆ ಮೋಸಕ್ಕೊಳ ಗಾಗಿದ್ದರು. ಈ ಪ್ರಕರಣದಲ್ಲಿ ವೈಭವ್ ಪಾಂಡ್ಯ ಅರೆಸ್ಟ್ ಕೂಡ ಆಗಿದ್ದಾನೆ. ಹಾರ್ದಿಕ್ ಪಾಂಡ್ಯಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪ ವೈಭವ್ಯ ಪಾಂಡ್ಯ ಮೇಲಿದೆ.
Hardik Pandya Divorce but owes 70% of property to wife natasa stankovic Hardik Pandya