ಸೋಮವಾರ, ಏಪ್ರಿಲ್ 28, 2025
HomeSportsCricketHardik Pandya Dinesh Karthik : ದಿನೇಶ್ ಕಾರ್ತಿಕ್ ಬಗ್ಗೆ ಕೊನೆಗೂ ಮೌನ ಮುರಿದ ಹಾರ್ದಿಕ್...

Hardik Pandya Dinesh Karthik : ದಿನೇಶ್ ಕಾರ್ತಿಕ್ ಬಗ್ಗೆ ಕೊನೆಗೂ ಮೌನ ಮುರಿದ ಹಾರ್ದಿಕ್ ಪಾಂಡ್ಯ

- Advertisement -

ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಟೀಂ ಇಂಡಿಯಾ ಕೊನೆಗೂ ಉತ್ತಮ ಪ್ರದರ್ಶನ ನೀಡಿದೆ. ಈಗಾಗಲೇ T20 ಸರಣಿಯಲ್ಲಿ ಭಾರತ ಸಮಬಲ ಸಾಧಿಸಿದೆ. ಅದ್ರಲ್ಲೂ ಸರಣಿಯುದ್ದಕ್ಕೂ ಹೆಚ್ಚು ಖ್ಯಾತಿ ಗಳಿಸಿದ್ದು, ದಿನೇಶ್‌ ಕಾರ್ತಿಕ್.‌ ಮ್ಯಾಚ್‌ ಫಿನಿಶರ್‌ ಅನ್ನೋ ಖ್ಯಾತಿಗೆ ಪಾತ್ರರಾಗಿರುವ ದಿನೇಶ್ ಕಾರ್ತಿಕ್ 27 ಎಸೆತಗಳಲ್ಲಿ 55 ರನ್ ಬಾರಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ರು. ಆದ್ರೀಗ ದಿನೇಶ್‌ ಕಾರ್ತಿಕ್‌ ವಿಚಾರದಲ್ಲಿ ಕೊನೆಗೂ ಟೀ ಇಂಡಿಯಾದ ನೂತನ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya Dinesh Karthik) ಮೌನ ಮುರಿದಿದ್ದಾರೆ.

ಐಪಿಎಲ್‌ ಪಂದ್ಯಾವಳಿಯಲ್ಲಿ ಅದ್ಬುತ ಆಟವನ್ನು ಪ್ರದರ್ಶಿಸಿದ್ದ ದಿನೇಶ್‌ ಕಾರ್ತಿಕ್.‌ ಇದೀಗ ದಕ್ಷಿಣ ಆಫ್ರಿಕಾ ಸರಣಿಯಲ್ಲಿಯೂ ತಮ್ಮ ಫಾರ್ಮ್‌ ಮುಂದುವರಿಸಿದ್ದಾರೆ. ಅದ್ರಲ್ಲೂ ರಾಜ್‌ ಕೋಟ್‌ನಲ್ಲಿ ನಡೆದ ನಿರ್ಣಾಯಕ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಗೆಲುವನ್ನು ತಂದುಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು, ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್.‌ ಚುಟುಕು ಕ್ರಿಕೆಟ್‌ನಲ್ಲಿ ದಿನೇಶ್‌ ಕಾರ್ತಿಕ್‌ ಚೊಚ್ಚಲ ಅರ್ಧ ಶತಕ ಸಿಡಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ಹಾರ್ದಿಕ್‌ ಪಾಂಡ್ಯ ಜೊತೆಯಲ್ಲಿ ಇನ್ನಿಂಗ್ಸ್‌ ಆರಂಭಿಸಿದ್ದ ದಿನೇಶ್‌ ಕಾರ್ತಿಕ್‌, ಪಂದ್ಯದ ನಂತರದಲ್ಲಿ ಹಾರ್ದಿಕ್‌ ಎಲ್ಲರಿಗೂ ಸ್ಪೂರ್ತಿಯಾಗುತ್ತಿದ್ದಾರೆ ಎಂದು ದಿನೇಶ್‌ ಕಾರ್ತಿಕ್‌ ಗುಣಗಾನ ಮಾಡಿದ್ದಾರೆ. ಅಲ್ಲದೇ ಹಾರ್ದಿಕ್‌ ಪಾಂಡ್ಯ ಕೂಡ ದಿನೇಶ್‌ ಕಾರ್ತಿಕ್‌ ವಿಚಾರದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. “ನಾನು ನಿಮಗೆ ಇದನ್ನು ಹೇಳಬೇಕಾಗಿದೆ. ನಿಜವಾಗಿ ನಾನು ಇದನ್ನು ನಿಮಗೆ ಹೇಳಲು ಬಯಸುತ್ತೇನೆ, ನೀವು ಅವರ ಜೀವನದಲ್ಲಿ ಅನೇಕ ಹುಡುಗರಿಗೆ ಸಾಕಷ್ಟು ಸ್ಫೂರ್ತಿ ನೀಡಿದ್ದೀರಿ. ನೀವು ವಿಷಯಗಳ ಯೋಜನೆಯಲ್ಲಿ ಇಲ್ಲದಿದ್ದಾಗ ನೀವು ನಡೆಸಿದ ಸಂಭಾಷಣೆ ನನಗೆ ನೆನಪಿದೆ, ಬಹಳಷ್ಟು ಜನರು ನಿಮ್ಮನ್ನು ಎಣಿಸಿದ್ದಾರೆ, ”ಎಂದು ಹಾರ್ದಿಕ್ ಬಿಸಿಸಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ದಿನೇಶ್ ಕಾರ್ತಿಕ್‌ಗೆ ತಿಳಿಸಿದರು.

“ನನಗೆ ಆ ಸಂಭಾಷಣೆಗಳು ನೆನಪಿದೆ, ನೀವು ನನಗೆ ಹೇಳಿದ್ದೀರಿ, ಭಾರತಕ್ಕಾಗಿ ಮತ್ತೊಮ್ಮೆ ಆಡುವುದು ನನ್ನ ಗುರಿ ಮತ್ತು ಈ ವಿಶ್ವಕಪ್ ಆಡುವುದು ಗುರಿಯಾಗಿದೆ, ನಾನು ಅದಕ್ಕೆ ನನ್ನ ಎಲ್ಲವನ್ನೂ ನೀಡಲಿದ್ದೇನೆ ಮತ್ತು ನೀವು ಅದನ್ನು ಸಾಧಿಸುವುದನ್ನು ನೋಡುವುದು ತುಂಬಾ ಸ್ಫೂರ್ತಿದಾಯಕವಾಗಿದೆ. ಬಹಳಷ್ಟು ಜನರು ಹೊಸ ವಿಷಯಗಳನ್ನು ಕಲಿಯಲು ಹೋಗುತ್ತಾರೆ. ಚೆನ್ನಾಗಿದೆ ನನ್ನ ಸಹೋದರ, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ. ನಾಲ್ಕನೇ T20I ನಲ್ಲಿ ಟೀಮ್ ಇಂಡಿಯಾ ಸುಲಭವಾಗಿ 169 ರನ್ ಗಳಿಸಿತು, ಅವರು ದಕ್ಷಿಣ ಆಫ್ರಿಕಾವನ್ನು 87 ರನ್‌ಗಳಿಗೆ ಆಲೌಟ್ ಮಾಡಿದರು. ಅವೇಶ್ ಖಾನ್ ಅವರು ನಾಲ್ಕು ವಿಕೆಟ್‌ ಗಳೊಂದಿಗೆ ಹಿಂದಿರುಗಿದ ಬೌಲರ್‌ಗಳ ಆಯ್ಕೆಯಾಗಿದ್ದರು. ಭಾನುವಾರ ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದೆ.

ಇದನ್ನೂ ಓದಿ : England World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

ಇದನ್ನೂ ಓದಿ : ಪತ್ನಿಯಿಂದ ಮೋಸ, ಗೆಳೆಯನಿಂದ ದೋಖಾ : ಸೋತು ಗೆದ್ದ ದಿನೇಶ್‌ ಕಾರ್ತಿಕ್‌

Hardik Pandya finally breaks silence on Dinesh Karthik

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular