2006ರಲ್ಲಿ ಪದಾರ್ಪಣೆ.. 2022ರಲ್ಲಿ ಮೊದಲ ಅರ್ಧಶತಕ.. ಡಿಕೆ, ಒಂದು ಅದ್ಭುತ ಯಶೋಗಾಥೆ

ರಾಜ್’ಕೋಟ್: ಇದು ಕ್ರಿಕೆಟ್’ನ ಅದ್ಭುತಗಳಲ್ಲೊಂದು. 2006ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟು, 16 ವರ್ಷಗಳ ನಂತರ ಅಂತಾರಾಷ್ಟ್ರೀಯ ಟಿ20ಯಲ್ಲಿ ಮೊದಲ ಅರ್ಧಶತಕ. ಇದು ಟೀಮ್ ಇಂಡಿಯಾದ ಫಿನಿಷರ್ ದಿನೇಶ್ ಕಾರ್ತಿಕ್ (Dinesh Karthik) ಅವರ ಯಶೋಗಾಥೆ.

ರಾಜ್’ಕೋಟ್’ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ (India Vs South Africa T20 series) ವಿರುದ್ಧದ 4ನೇ ಟಿ20 ಪಂದ್ಯವನ್ನು ಭಾರತ 82 ರನ್’ಗಳಿಂದ ಗೆದ್ದುಕೊಂಡಿದೆ. ಆ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಡು ಆರ್ ಡೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ತಂದು ಕೊಟ್ಟದ್ದು ದಿನೇಶ್ ಕಾರ್ತಿಕ್ (Dinesh Karthik) ಅವರ ಸಿಡಿಲಬ್ಬರದ ಆಟ. 6ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಹರಿಣಗಳ ದಾಳಿಯನ್ನು ಚಿಂದಿ ಉಡಾಯಿಸಿದ ಡಿಕೆ ಕೇವಲ 27 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ ಸ್ಫೋಟಕ 55 ರನ್ ಬಾರಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಡಿಕೆ ಬಾರಿಸಿದ ಚೊಚ್ಚಲ ಅರ್ಧಶತಕವೂ ಹೌದು.

ಭಾರತ ತಂಡ ತನ್ನ ಮೊದಲ ಟಿ20 ಪಂದ್ಯವಾಡಿದ್ದು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ. ಆ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ (Dinesh Karthik) ಕೂಡ ಅಂತಾರಾಷ್ಟ್ರೀಯ ಟಿ20ಗೆ ಕಾಲಿಟ್ಟಿದ್ದರು. ಭಾರತದ ಚೊಚ್ಚಲ ಟಿ20 ಪಂದ್ಯ ಡಿಕೆ ಪಾಲಿಗೆ ಸ್ಮರಣೀಯವಾಗಿತ್ತು. ಯಾಕಂದ್ರೆ ಆ ಪಂದ್ಯದಲ್ಲಿ 48 ರನ್ ಬಾರಿಸಿದ್ದ ಡಿಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ : ರಣಜಿ ಸೆಮಿಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಾನಿಪುರಿ ಹುಡುಗ

ಭಾರತದ ಚೊಚ್ಚಲ ಟಿ20 ಪಂದ್ಯವಾಡಿ 16 ವರ್ಷಗಳೇ ಕಳೆದು ಹೋಗಿವೆ. ಅಂದಿನಿಂದ ಇಂದಿನವರೆಗೆ ಕ್ರಿಕೆಟ್ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ 37 ವರ್ಷದ ಡಿಕೆ, 16 ವರ್ಷಗಳ ನಂತರ ಅಂತಾರಾಷ್ಟ್ರೀಯ ಟಿ20ಯಲ್ಲಿ ಮೊದಲ ಅರ್ಧಶತಕ ಬಾರಿಸಿದ್ದಾರೆ.

ಇದನ್ನೂ ಓದಿ : England World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

ಇದನ್ನೂ ಓದಿ : ತಪ್ಪುಗಳಿಂದ ಪಾಠ ಕಲಿಯದ ಬೇಜವಾಬ್ದಾರಿ ಹುಡುಗ

Dinesh Karthik wonderful success story: debut in 2006, half century in 2022

Comments are closed.