ಭಾನುವಾರ, ಜೂನ್ 15, 2025
HomeSportsCricketHardik Pandya Ravindra Jadeja : 2017ರಲ್ಲಿ ಮೈದಾನದಲ್ಲೇ ಗಲಾಟೆ, 2022ರಲ್ಲಿ ಮ್ಯಾಚ್ ವಿನ್ನರ್ಸ್; ಇದು...

Hardik Pandya Ravindra Jadeja : 2017ರಲ್ಲಿ ಮೈದಾನದಲ್ಲೇ ಗಲಾಟೆ, 2022ರಲ್ಲಿ ಮ್ಯಾಚ್ ವಿನ್ನರ್ಸ್; ಇದು ಪಾಂಡ್ಯ-ಜಡ್ಡು ಸಕ್ಸಸ್ ಸ್ಟೋರಿ

- Advertisement -

ದುಬೈ: (Hardik Pandya Ravindra Jadeja ) ಕ್ರಿಕೆಟ್ ಜಗತ್ತಿನಲ್ಲಿ ಆಗಾಗ ಕೆಲವೊಂದು ಅಚ್ಚರಿಗಳು ನಡೆಯುತ್ತಿರುತ್ತವೆ. ಹಳೆಯ ಕಹಿ ಘಟನೆಗಳನ್ನು ಮರೆಯುವಂತಹ ಹೊಸ ನೆನಪುಗಳಿಗೆ ಕ್ರಿಕೆಟ್ ಸಾಕ್ಷಿಯಾಗುತ್ತಾ ಇರುತ್ತವೆ. ಐದು ವರ್ಷಗಳ ಹಿಂದೆ ತಮ್ಮನ್ನು ರನೌಟ್ ಮಾಡಿದ ರವೀಂದ್ರ ಜಡೇಜ ವಿರುದ್ಧ ಮೈದಾನದಲ್ಲೇ ಆಕ್ರೋಶ ಹೊರ ಹಾಕಿದ್ದ ಹಾರ್ದಿಕ್ ಪಾಂಡ್ಯ, ಈಗ ಅದೇ ಜಡೇಜ ಜೊತೆ ಸೇರಿಕೊಂಡು (Pandya Jaddu success story) ಭಾರತವನ್ನು ಗೆಲ್ಲಿಸಿದ್ದಾರೆ.

ಐದು ವರ್ಷಗಳ ಹಿಂದೆ ಪಾಂಡ್ಯ ಮತ್ತು ಜಡೇಜ ಮಧ್ಯೆ ಆ ಘಟನೆ ನಡೆದದ್ದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ. ಈಗ ಪಾಂಡ್ಯ ಮತ್ತು ಜಡೇಜ ಭಾರತವನ್ನು ಗೆಲ್ಲಿಸಿದ್ದೂ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ.

2017ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ (ICC Champions Trophy Final 2017) ಪಂದ್ಯ. ಗೆಲ್ಲಲು ಪಾಕಿಸ್ತಾನ ಒಡ್ಡಿದ 339 ರನ್’ಗಳ ಕಠಿಣ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತ, 72 ರನ್ನಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆಗ 7ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದಿದ್ದ ಪಾಂಡ್ಯ, ಪಾಕಿಸ್ತಾನ ದಾಳಿಯನ್ನು ಪುಡಿಗಟ್ಟಲು ಶುರು ಮಾಡಿದ್ರು. ಬೌಂಡರಿ, ಸಿಕ್ಸರ್’ಗಳ ಸುರಿಮಳೆಗೈದಿದ್ದ ಪಾಂಡ್ಯ ಭಾರತದ ಪಾಳೆಯದಲ್ಲಿ ಗೆಲುವಿನ ಸಣ್ಣ ಆಸೆಯೊಂದನ್ನು ಚಿಗುರಿಸಿದ್ದರು. ಹಾರ್ದಿಕ್ ಪಾಂಡ್ಯ ಜೊತೆ ರವೀಂದ್ರ ಜಡೇಜಾ 8ನೇ ವಿಕೆಟ್’ಗೆ 80 ರನ್’ಗಳ ಜೊತೆಯಾಟವಾಡಿದ್ದರು. ಆದರೆ ಕೇವಲ 43 ಎಸೆತಗಳಲ್ಲಿ 6 ಸಿಕ್ಸರ್’ಗಳ ನೆರವಿನಿಂದ 76 ರನ್ ಗಳಿಸಿದ್ದಾಗ ರವೀಂದ್ರ ಜಡೇಜ ಮಾಡಿದ ತಪ್ಪಿನಿಂದಾಗಿ ಪಾಂಡ್ಯ ರನೌಟಾಗಿದ್ದರು. ಸಿಟ್ಟಿಗೆದ್ದಿದ್ದ ಪಾಂಡ್ಯ, ಜಡೇಜ ವಿರುದ್ಧ ಆಕ್ರೋಶ ಹೊರ ಹಾಕುತ್ತಲೇ ಪೆವಿಲಿಯನ್’ನತ್ತ ಹೆಜ್ಜೆ ಹಾಕಿದ್ದರು. ಪಾಂಡ್ಯ ಔಟಾದ ಕೆಲವೇ ನಿಮಿಷಗಳಲ್ಲಿ 158ರನ್ನಿಗೆ ಆಲೌಟಾದ ಭಾರತ 180 ರನ್’ಗಳಿಂದ ಹೀನಾಯ ಸೋಲು ಕಂಡಿತ್ತು.

ಆ ಘಟನೆ ನಡೆದು ಐದು ವರ್ಷಗಳ ನಂತರ ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್ ಪಂದ್ಯದಲ್ಲಿ (India Vs Pakistan Asia Cup 2022) ರವೀಂದ್ರ ಜಡೇಜಾ ಜೊತೆ ಸೇರಿಕೊಂಡು ಭಾರತವನ್ನು ಗೆಲ್ಲಿಸಿದ್ದಾರೆ. ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ 148 ರನ್’ಗಳ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 14.2 ಓವರ್’ಗಳಲ್ಲಿ 89 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಜೊತೆಯಾಗಿದ್ದ ಜಡೇಜ-ಪಾಂಡ್ಯ ಜೋಡಿ 5ನೇ ವಿಕೆಟ್’ಗೆ 33 ಎಸೆತಗಳಲ್ಲಿ 52 ರನ್’ಗಳ ಜೊತೆಯಾಟವಾಡಿ ಭಾರತಕ್ಕೆ 5 ವಿಕೆಟ್’ಗಳ ರೋಚಕ ಗೆಲುವು ತಂದುಕೊಟ್ಟಿತ್ತು.

4ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿಂದ ಜಡೇಜ 29 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್’ಗಳ ನೆರವಿನಿಂದ 35 ರನ್ ಗಳಿಸಿದ್ರೆ, ಕೊನೆಯ ಓವರ್’ನಲ್ಲಿ ಸಿಕ್ಸರ್ ಸಿಡಿಸಿ ಮ್ಯಾಚ್ ಫಿನಿಷ್ ಮಾಡಿದ ಪಾಂಡ್ಯ ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 33 ರನ್ ಸಿಡಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಬೌಲಿಂಗ್’ನಲ್ಲೂ ಮಿಂಚಿದ್ದ ಪಾಂಡ್ಯ 4 ಓವರ್’ಗಳಲ್ಲಿ 25 ರನ್ನಿತ್ತು 3 ವಿಕೆಟ್ ಪಡೆದಿದ್ದರು. ಈ ಅಮೋಘ ಆಲ್ರೌಂಡ್ ಆಟಕ್ಕೆ ಹಾರ್ದಿಕ್ ಪಾಂಡ್ಯ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತ್ತು.

ಇದನ್ನೂ ಓದಿ : Ind vs Pak : ಏಷ್ಯಾ ಕಪ್‌ : ಪಾಕಿಸ್ತಾನ ವಿರುದ್ದ ಭಾರತಕ್ಕೆ 5 ವಿಕೆಟ್‌ ಗೆಲುವು

ಇದನ್ನೂ ಓದಿ : Match Winner Hardik Pandya: 2018ರಲ್ಲಿ ಸ್ಟ್ರೆಚರ್, 2022ರಲ್ಲಿ ಫಿನಿಷರ್, ಮ್ಯಾಚ್ ವಿನ್ನರ್ ; ಭಲೇ ಹಾರ್ದಿಕ್ ಪಾಂಡ್ಯ

Hardik Pandya Ravindra Jadeja On-field riots in 2017 match winners in 2022 Pandya Jaddu success story

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular