Hardik Pandya Vs Shubman Gill : ನ್ಯೂ ಯಾರ್ಕ್: ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತನ್ನ ಸಹ ಆಟಗಾರನ ಜೊತೆ ಮೈದಾನದಲ್ಲಿ ನಡೆದುಕೊಂಡ ರೀತಿಗೆ ಸುದ್ದಿಯಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಭಾನುವಾರ ನಡೆದ ಪಂದ್ಯದಲ್ಲಿ ಭಾರತ, ಐರ್ಲೆಂಡ್ ತಂಡವನ್ನು 8 ವಿಕೆಟ್’ಗಳಿಂದ ಮಣಿಸಿ ಶುಭಾರಂಭ ಮಾಡಿತ್ತು. ಆ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಹಾರ್ದಿಕ್ ಪಾಂಡ್ಯನ ನಡವಳಿಕೆ ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ಅಲ್ಲಿ ಆಗಿದ್ದೇನೆಂದರೆ.., ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ನಡೆಸುತ್ತಿರುವ ಸಂದರ್ಭದಲ್ಲಿ ಕುಡಿಯಲು ನೀರು ಕೇಳಿದ್ದಾರೆ. ಮೀಸಲು ಆಟಗಾರನಾಗಿ ತಂಡದಲ್ಲಿರುವ ಶುಭಮನ್ ಗಿಲ್, ಪಾಂಡ್ಯಗೆ ಕುಡಿಯಲು ನೀರಿನ ಬಾಟಲ್ ನೀಡಿದ್ದಾರೆ. ನೀರು ಕುಡಿದ ಪಾಂಡ್ಯ, ಖಾಲಿ ಬಾಟಲಿಯನ್ನು ಪಕ್ಕದಲ್ಲೇ ಇದ್ದ ಗಿಲ್ ಕೈಗೆ ನೀಡುವ ಬದಲು ನೆಲಕ್ಕೆ ಎಸೆದಿದ್ದಾರೆ. ಅಷ್ಟೇ ಅಲ್ಲ, ಬಾಟಲ್ ಅನ್ನು ಅಲ್ಲಿಂದಲೇ ಎತ್ತಿಕೋ ಎಂಬ ರೀತಿಯಲ್ಲಿ ಕೈ ಸನ್ನೆ ಮಾಡಿ ತೋರಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾರ್ದಿಕ್ ಪಾಂಡ್ಯನ ವರ್ತನೆಗೆ ಕ್ರಿಕೆಟ್ ಪ್ರಿಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!
https://x.com/ImHydro45/status/1798768505279664490
ಆದರೆ ಅಸಲಿ ವಿಚಾರ ಬೇರೆಯೇ ಇದೆ ಎನ್ನುತ್ತಿದೆ ಮತ್ತೊಂದು ವೀಡಿಯೊ. ಬಾಟಲಿಯನ್ನು ನೆಲಕ್ಕೆ ಹಾಕುವ ಪಾಂಡ್ಯ ಅದನ್ನು ಅಲ್ಲಿಯೇ ಬಿಡು, ನನಗೆ ಮತ್ತೆ ನೀರು ಬೇಕಾದಾಗ ಎತ್ತಿಕೊಂಡು ಕುಡಿಯುತ್ತೇನೆ ಎಂಬುದಾಗಿ ಸನ್ನೆ ಮಾಡುತ್ತಿರುವ ಮತ್ತೊಂದು ವೀಡಿಯೊ ವೈರಲ್ ಆಗಿದೆ. ಬುಧವಾರ ನಡೆದ ಐರ್ಲೆಂಡ್ ವಿರುದ್ಧದ (India Vs Ireland) ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 8 ವಿಕೆಟ್’ಗಳ ಸುಲಭ ಗೆಲುವು ದಾಖಲಿಸಿ ಟಿ20 ವಿಶ್ವಕಪ್’ನಲ್ಲಿ ಶುಭಾರಂಭ ಮಾಡಿತ್ತು.
ಇದನ್ನೂ ಓದಿ : Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !
https://x.com/Slayer_33_/status/1798935385281802300
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಐರ್ಲೆಂಡ್, ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ (2/6), ಅರ್ಷದೀಪ್ ಸಿಂಗ್ (2/35) ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (3/27) ಅವರ ಮಾರಕ ದಾಳಿಗೆ ತತ್ತರಿಸಿ 16 ಓವರ್’ಗಳಲ್ಲಿ ಕೇವಲ 96 ರನ್’ಗಳಿಗೆ ಆಲೌಟಾಗಿತ್ತು. ನಂತರ ಸುಲಭ ಗುರಿ ಬೆನ್ನಟ್ಟಿದ್ದ ಭಾರತ 12.2 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿ ಸುಲಭ ಜಯ ದಾಖಲಿಸಿತ್ತು.

ಭಾರತ ಪರ ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 52 ರನ್ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ವಿಕೆಟ್ ಕೀಪರ್ ರಿಷಭ್ ಪಂತ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದ್ದರು. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !
Hardik Pandya Vs Shubman Gill ICC T20 World Cup Pandya Insults Gill