ನವದೆಹಲಿ : ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ ಗೆ ಭಾರತೀಯ ಈಜುಪಟು ಸಾಜನ್ ಪ್ರಕಾಶ್ ಅರ್ಹತೆ ಪಡೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಕೇರಳ ಮೂಲದ 27 ವರ್ಷದ ಸಾಜನ್ ಪ್ರಕಾಶ್ ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ 200 ಮೀಟರ್ ಬೆನಾಗ್ರೇಡ್ ಟ್ರೋಫಿ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ರೋಮ್ ನಲ್ಲಿ ನಡೆದ ಸೆಸ್ಟೆ ಕೊಲ್ಲಿ ಟ್ರೋಫಿಯಲ್ಲಿ ಪುರುಷರ 200 ಮೀಟರ್ ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. 200 ಮೀಟರ್ ಸ್ಪರ್ಧೆಯನ್ನು 1:56:38 ನಿಮಿಷದಲ್ಲಿ ಕ್ರಮಿಸುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಗಿಟ್ಟಿಸಿ ಕೊಂಡಿದ್ದಾರೆ.

ಇನ್ನು 200 ಮೀಟರ್ ಬಟರ್ ಪ್ಲೈ ವಿಭಾಗದಲ್ಲಿಯೂ ಪ್ರಕಾಶ್ ಸಾಜನ್ 1:56:96 ನಿನಿಷಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದೀಗ ಪ್ರಕಾಶ್ ಅವರ ಸಾಧನೆಗೆ ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದೆ.
Many congratulations to @swim_sajan who becomes the 1st Indian #swimmer ?♂️ to qualify for #Tokyo2020 as he clocks 1:56:38 in men’s 200m butterfly at the Sette Colli Trophy in Rome.
— SAIMedia (@Media_SAI) June 26, 2021
The qualification cut-off was 1:56:48.
Way to go champ! pic.twitter.com/G4KMcM8DKH