ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಪೋಟ : ಕೆಂಪೇಗೌಡ ಜಯಂತಿಗೆ ಆರ್.ಅಶೋಕ್‌ ಗೈರು

ಬೆಂಗಳೂರು : ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಪೋಟ ಗೊಂಡಿದೆ. ತಾವೇ ಹುಟ್ಟು ಹಾಕಿದ್ದ ಕೆಂಪೇಗೌಡ ಜಯಂತಿ ಆಚರಣೆಗೆ ಹಿರಿಯ ಸಚಿವ ಆರ್.ಅಶೋಕ್ ಗೈರು ಹಾಜರಾಗಿದ್ದಾರೆ‌‌.

ಬಿಜೆಪಿ‌ ಸರಕಾರಕ್ಕೆ ಅಧಿಕಾರಕ್ಕೆ ಬಂದ ವೇಳೆಯಲ್ಲಿ ರಾಜ್ಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಣೆಯನ್ನು ಆರ್.ಅಶೋಕ್ ಆರಂಭಿಸಿದ್ದರು. ತಾವೇ ಮುಂದೆ ನಿಂತು ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ.

ಒಂದೆಡೆ ಆರ್‌.ಅಶೋಕ್ ಕೈಯಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಲಾಗಿತ್ತು. ಇದು ಸಚಿವ ಆರ್‌. ಅಶೋಕ್ ಮುನಿಸಿಕೊಂಡಿದ್ದರು. ಜೊತೆಗೆ ಈ ಬಾರಿಯ ಕೆಂಪೇಗೌಡ ಜಯಂತಿಯನ್ನು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಇದು ಅಶೋಕ್ ಸರಕಾರದ ವಿರುದ್ದ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.

ಕೇವಲ‌ ಅಶೋಕ್ ಮಾತ್ರವಲ್ಲದೇ ಸಚಿವ ಎಸ್.ಟಿ. ಸೋಮ ಶೇಖರ್ ಅವರು ಕೂಡ ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ದ್ದಾರೆ‌. ಇದೀಗ ಹಿರಿಯ ಸಚಿವ ಅಶೋಕ್ ಸರಕಾರದ ವಿರುದ್ದ ಅಸಮಾಧಾನಗೊಂಡಿರುವುದು ಸರಕಾರವನ್ನು ಪೇಚಿಗೆ ಸಿಲುಕಿಸಿದೆ.

Comments are closed.