ಲಂಡನ್ : ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೊಹ್ಲಿ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳೂ ಇದ್ದಾರೆ. ಸಾಕಷ್ಟು ಮಹಿಳಾ ಅಭಿಮಾನಿಗಳು ಕೊಹ್ಲಿಗೆ ‘’ಐ ಲವ್ ಯೂ ವಿರಾಟ್’’ (I love Virat) ಅಂದಿದ್ದೂ ಇದೆ. ಅಚ್ಚರಿಯ ಸಂಗತಿ ಏನಂದ್ರೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್, ಬ್ಯಾಟಿಂಗ್ ಮಾಸ್ಟರ್ ಕೊಹ್ಲಿಗೆ ‘’ಐ ಲವ್ ವಿರಾಟ್’’ ಎಂದಿದ್ದಾರೆ.
ಹಾಗಾದ್ರೆ ವಿರಾಟ್ ಕೊಹ್ಲಿಗೆ ಬೆನ್ ಸ್ಟೋಕ್ಸ್ ಹೀಗಂದಿದ್ಯಾಕೆ ? ಇದಕ್ಕೂ ಒಂದು ಕಾರಣವಿದೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೋಮವಾರವಷ್ಟೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದರು. ಸ್ಟೋಕ್ಸ್ ವಿದಾಯಕ್ಕೆ ಪ್ರತಿಕ್ರಿಯಿಸಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಬೆನ್ ಸ್ಟೋಕ್ಸ್ ಬಗ್ಗೆ ಮೆಚ್ಚುಗೆಯ ಸಾಲುಗಳನ್ನು ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ರು.
‘’ನೀವು ನಾನು ಎದುರಿಸಿದ ಅತ್ಯಂತ ಪ್ರಬಲ ಹಾಗೂ ಕಠಿಣ ಪ್ರತಿಸ್ಪರ್ಧಿ’’ ಎಂದು ಬೆನ್ ಸ್ಟೋಕ್ಸ್ ಬಗ್ಗೆ ಕೊಹ್ಲಿ ಮೆಚ್ಚುಗೆಯ ನುಡಿಗಳನ್ನಾಡಿದ್ದರುೆ ಕೊಹ್ಲಿ ಮೆಚ್ಚುಗೆಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಸ್ಟೋಕ್ಸ್, ವಿರಾಟ್ ಕೊಹ್ಲಿ ಸರ್ವಶ್ರೇಷ್ಠ ಕ್ರಿಕೆಟಿಗ ಎಂದಿದ್ದಾರೆ. ‘’ಐ ಲವ್ ವಿರಾಟ್. ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ವಿರಾಟ್ ಕೊಹ್ಲಿ ಸರ್ವಶ್ರೇಷ್ಠ ಆಟಗಾರನಾಗಿ ಇತಿಹಾಸದ ಪುಟಗಳಲ್ಲಿ ವಿರಾಟ್ ಕೊಹ್ಲಿ ದಾಖಲಾಗಲಿದ್ದಾರೆ. ಅವರೊಬ್ಬ ಅತ್ಯದ್ಭುತ ಕ್ರಿಕೆಟಿಗ. ಅವರ ಅವಧಿಯಲ್ಲಿ ನಾನು ಅವರ ವಿರುದ್ಧ ಆಡಿದ್ದೇ ನನ್ನ ಪಾಲಿಗೆ ದೊಡ್ಡ ಗೌರವ. ವಿರಾಟ್ ಕೊಹ್ಲಿ ಅವರ ಎನರ್ಜಿ ಮತ್ತು ಕಮಿಟ್ಮೆಂಟ್ ಎಲ್ಲರಿಗೂ ಪ್ರೇರಣೆ. ಈ ವಿಚಾರದಲ್ಲಿ ಕೊಹ್ಲಿ ವಿರುದ್ಧ ಆಡುವ ಮೊದಲೇ ನಾನು ಅವರ ಅಭಿಮಾನಿಯಾಗಿದ್ದೆ’’.
⁃ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ.
ಇದನ್ನೂ ಓದಿ : Team India arrives in Trinidad : ಏಕದಿನ, ಟಿ20 ಸರಣಿಗಾಗಿ ಕೆರಿಬಿಯನ್ನರ ನಾಡಿಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು
I love Virat, Why England test captain Ben Stokes is like this?