same-sex marriage : ಸಲಿಂಗ ವಿವಾಹ ಬೆಂಬಲಿಸುವ ಮಸೂದೆಗೆ ಅಮೆರಿಕದಲ್ಲಿ ಅಂಗೀಕಾರ

ಅಮೆರಿಕ : same-sex marriage : ಮಹಿಳೆಯರಿಗೆ ಗರ್ಭಪಾತವನ್ನು ಮಾಡಿಸಿಕೊಳ್ಳುವ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿರುವ ಅಮೆರಿಕ ಸುಪ್ರೀಂಕೋರ್ಟ್​ ಸಲಿಂಗ ಕಾಮದ ವಿವಾಹದ ಮಾನ್ಯತೆಯನ್ನೂ ರದ್ದುಗೊಳಿಸಬಹುದು ಎಂಬ ಆತಂಕದ ನಡುವೆಯೇ ಯುಎಸ್ ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​​ ಮಂಗಳವಾರದಂದು ಸಲಿಂಗ ವಿವಾಹದ ಸಮಾನತೆಯನ್ನು ರಕ್ಷಿಸುವ ಮಸೂದೆಗೆ ಹಸಿರು ನಿಶಾನೆ ತೋರಿದೆ.

ರೆಸ್ಪೆಕ್ಟ್ ಫಾರ್​ ಮ್ಯಾರೇಜ್​ ಆ್ಯಕ್ಟ್​ನ ಅಡಿಯಲ್ಲಿ ಸಲಿಂಗ ಕಾಮ ವಿವಾಹದ ಮಾನ್ಯತೆಯನ್ನು 157 ಮತಗಳ ಮೂಲಕ ಅಂಗೀಕರಿಸಲಾಗಿದೆ. ಸಲಿಂಗಕಾಮ ವಿವಾಹಕ್ಕೆ 47 ರಿಪಬ್ಲಿಕನ್​ ನಾಯಕರು ಬೆಂಬಲ ಸೂಚಿಸಿದ್ದಾರೆ. ಒಟ್ಟು 100 ಸದಸ್ಯರಿರುವ ಸೆನೆಟ್​ನಲ್ಲಿ 50 ಸ್ಥಾನಗಳನ್ನು ಡೆಮೋಕ್ರಾಟ್​ಗಳು ಹೊಂದಿದ್ದಾರೆ. ಹೀಗಾಗಿ ಈ ಮಸೂದೆ ಅಂಗಿಕಾರಗೊಳ್ಳಲು ಸೆನೆಟ್​ನಲ್ಲಿ 10 ಮಂದಿ ರಿಪಬ್ಲಿಕನ್​ ನಾಯಕರ ಮತಗಳ ಅವಶ್ಯಕತೆ ಇದೆ.

ಈ ವಿಚಾರವಾಗಿ ನಡೆದ ಚರ್ಚೆಯಲ್ಲಿ ಫೆಡರಲ್​ ಕಾನೂನಿನ ಅಡಿಯಲ್ಲಿ ಸಲಿಂಗ ಕಾಮಿ ವಿವಾಹದ ಸಮಾನತೆಯನ್ನು ಪ್ರತಿಪಾದಿಸುತ್ತಾ ಡೆಮೋಕ್ರಾಟ್​ಗಳು ವಾದವನ್ನು ಮಂಡಿಸಿದರು. ಆದರೆ ರಿಪಬ್ಲಿಕ್ ನಾಯಕರು ಸಲಿಂಗಕಾಮಿ ವಿವಾಹಕ್ಕೆ ಬಹಿರಂಗವಾಗಿ ತಿರಸ್ಕಾರವನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳಿದ್ದು ಇಂತಹ ಸಂದರ್ಭದಲ್ಲಿ ಈ ಮಸೂದೆಯ ಬಗ್ಗೆ ಚರ್ಚೆ ಮಾಡುವುದು ಅನಗತ್ಯವಾಗಿದೆ ಎಂದು ರಿಪಬ್ಲಿಕನ್​ ನಾಯಕರು ಅಭಿಪ್ರಾಯ ಪಟ್ಟಿದ್ದರು.

ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್ ಎಂಬ ಮಸೂದೆಯು ಅಮೆರಿಕದಲ್ಲಿ ಅಂತಾರಾಜ್ಯ ವಿವಾಹಗಳಿಗೆ ಮಾನ್ಯತೆ ನೀಡುವುದರ ಜೊತೆಯಲ್ಲಿ LGBTQ ಸಮುದಾಯದ ವಿವಾಹಗಳಿಗೂ ರಕ್ಷಣೆಯನ್ನು ನೀಡುತ್ತದೆ. ಅಲ್ಲದೇ ಈ ಮಸೂದೆಯು 1996 ಮದುವೆ ರಕ್ಷಣಾ ಕಾಯ್ದೆಯನ್ನು ಅಮಾನ್ಯಗೊಳಿಸುತ್ತದೆ. ಏಕೆಂದರೆ 1996ರ ಮದುವೆ ರಕ್ಷಣಾ ಕಾಯಿದೆಯು ಮದುವೆ ಎಂದರೆ ಅದು ಪುರುಷ ಹಾಗೂ ಮಹಿಳೆ ನಡುವಿನ ಸಂಬಂಧ ಎಂದು ವ್ಯಾಖ್ಯಾನವನ್ನು ಹೊಂದಿದೆ.

ಇದನ್ನು ಓದಿ : dangerous apps : ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ : ನಿಮ್ಮ ಹಣವನ್ನು ಕದಿಯುತ್ತವೆ ಈ ಆ್ಯಪ್​ಗಳು

ಇದನ್ನೂ ಓದಿ : I love Virat .. ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಯಾಕೆ ಹೀಗಂದ್ರು ?

ಇದನ್ನೂ ಓದಿ : dangerous apps : ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ : ನಿಮ್ಮ ಹಣವನ್ನು ಕದಿಯುತ್ತವೆ ಈ ಆ್ಯಪ್​ಗಳು

ಇದನ್ನೂ ಓದಿ : Monkey Pox : ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆ; ದಕ್ಷಿಣ ಕನ್ನಡದಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ

US: House passes same-sex marriage bill in retort to high court

Comments are closed.