KL Rahul & Monank Patel: ಟಿ20 ವಿಶ್ವಕಪ್: ಅಮೆರಿಕ ತಂಡದ ನಾಯಕ ನಮ್ಮ ಕನ್ನಡಿಗ ರಾಹುಲ್ ಅಭಿಮಾನಿಯಂತೆ !

ಬೆಂಗಳೂರು: ಟಿ20 ವಿಶ್ವಕಪ್’ನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ (ICC t20 world cup 2024) ಆಡುತ್ತಿರುವ ಆತಿಥೇಯ ಅಮೆರಿಕ ತಂಡ (USA cricket team) ಸತತ ಎರಡು ಗೆಲುವುಗಳೊಂದಿಗೆ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದೆ.

ಬೆಂಗಳೂರು: ಟಿ20 ವಿಶ್ವಕಪ್’ನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ (ICC t20 world cup 2024) ಆಡುತ್ತಿರುವ ಆತಿಥೇಯ ಅಮೆರಿಕ ತಂಡ (USA cricket team) ಸತತ ಎರಡು ಗೆಲುವುಗಳೊಂದಿಗೆ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದಿದ್ದ ಯುಎಸ್ಎ ತಂಡ, 2ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೂಪರ್ ಓವರ್’ನಲ್ಲಿ ಶಾಕ್ ಕೊಟ್ಟಿತ್ತು.

ICC T20 World Cup 2024 American team captain Monank Patel is like a fan of our Kannadiga KL Rahul
Image Credit to Original Source

ಅಮೆರಿಕ ತಂಡದ ಯಶಸ್ಸಿನಲ್ಲಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊನಾಂಕ್ ಪಟೇಲ್ ಅವರ ಪಾತ್ರ ತುಂಬಾ ದೊಡ್ಡದು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ್ದ ಮೊನಾಂಕ್ ಪಟೇಲ್, ಅಮೆರಿಕ ಗೆಲುವಿಗೆ ಕಾರಣರಾಗಿದ್ದರು. ಅಂದ ಹಾಗೆ ಮೊನಾಂಕ್ ಪಟೇಲ್ (Monank Patel), ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ದೊಡ್ಡ ಅಭಿಮಾನಿಯಂತೆ. ಸಂದರ್ಶನವೊಂದರಲ್ಲಿ ಸ್ವತಃ ಮೊನಾಂಕ್ ಪಟೇಲ್ ಅವರ ಈ ಮಾಹಿತಿ ನೀಡಿದ್ದಾರೆ.

ಆ ಸಂದರ್ಶನದಲ್ಲಿ ಮೊನಾಂಕ್ ಪಟೇಲ್ ಹಾಗೂ ಸಂದರ್ಶಕನ ಮಧ್ಯೆ ನಡೆದ ಮಾತುಕತೆ ಹೀಗಿದೆ:

ಸಂದರ್ಶಕ: ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್’ಗಳಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್. ಇವರಲ್ಲಿ ಯಾರನ್ನು ನೀವು ಇಷ್ಟ ಪಡುತ್ತೀರಿ ?

ಇದನ್ನೂ ಓದಿ : Rishabh Pant Played Golf: ಹೋಟೆಲ್ ಕಾರಿಡಾರ್‌ನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಗಾಲ್ಫ್ ಆಡಿದ ರಿಷಭ್ ಪಂತ್ !

ಮೊನಾಂಕ್ ಪಟೇಲ್: ಇಬ್ಬರೂ ಅಲ್ಲ. ನನ್ನ ನೆಚ್ಚಿನ ಆಟಗಾರ ಕೆ.ಎಲ್ ರಾಹುಲ್. ಅವರ ಆಟವನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನನ್ನ ಆಟವೂ ಕೆ.ಎಲ್ ರಾಹುಲ್ ಆಟದಂತೆಯೇ ಇದೆ ಎಂದು ನಾನು ಭಾವಿಸುತ್ತೇನೆ.

ICC T20 World Cup 2024 American team captain Monank Patel is like a fan of our Kannadiga KL Rahul
Image Credit to Original Source

ಬಲಗೈ ಬ್ಯಾಟ್ಸ್’ಮನ್ ಮೊನಾಂಕ್ ಪಟೇಲ್ ಜೂನ್ ಆರರಂದು ಢಲ್ಲಾಸ್’ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ 38 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚಿದ್ದರು. ಆ ಪಂದ್ಯವನ್ನು ಸೂಪರ್ ಓವರ್’ನಲ್ಲಿ 5 ರನ್’ಗಳಿಂದ ಗೆದ್ದುಕೊಂಡಿದ್ದ ಅಮೆರಿಕ ಇತಿಹಾಸ ನಿರ್ಮಿಸಿತ್ತು.

31 ವರ್ಷದ ಮೊನಾಂಕ್ ಪಟೇಲ್ ಗುಜರಾತ್’ನ ಆನಂದ್’ನವರು. ಅವರ ಪೂರ್ಣ ಹೆಸರು ಮೊನಾಂಕ್ ದಿಲೀಪ್ ಭಾಯ್ ಪಟೇಲ್. ಗುಜರಾತ್”ನಲ್ಲಿ ಕಿರಿಯರ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ್ದ ಮೊನಾಂಕ್ ಪಟೇಲ್ 2016ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. 2018-19ನೇ ಸಾಲಿನ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಅಮೆರಿಕ ಪರ ಆಡಿದ್ದ ಮೊನಾಂಕ್ ಪಟೇಲ್ 6 ಪಂದ್ಯಗಳಲ್ಲಿ 208 ರನ್ ಕಲೆ ಹಾಕಿದ್ದರು.

ಇದನ್ನೂ ಓದಿ : Afghanistan Beat New Zealand: ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಬಿಗ್ ಶಾಕ್, ಕಿವೀಸ್ ಕಿವಿ ಹಿಂಡಿದ ಆಫ್ಘನ್ ಪಡೆ !

2019ರಲ್ಲಿ ಅಮೆರಿಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಮೊನಾಂಕ್ ಪಟೇಲ್, ಇಲ್ಲಿವರೆಗೆ ಅಮೆರಿಕ ಪರ 47 ಏಕದಿನ ಪಂದ್ಯಗಳ ನ್ನಾಡಿದ್ದು, 2 ಶತಕ ಹಾಗೂ 10 ಅರ್ಧಶತಕಗಳ ನೆರವಿನಿಂದ 1446 ರನ್ ಕಲೆ ಹಾಕಿದ್ದಾರೆ. ಅಮೆರಿಕ ಪರ 27 ಟಿ20 ಪಂದ್ಯಗಳನ್ನೂ ಆಡಿರುವ ಮೊನಾಂಕ್ ಪಟೇಲ್, 3 ಅರ್ಧಶತಕಗಳ ಸಹಿತ 129.66ರ ಸ್ಟ್ರೈಕ್’ರೇಟ್’ನಲ್ಲಿ 507 ರನ್ ಗಳಿಸಿದ್ದಾರೆ. 2021ರಲ್ಲಿ ನಡೆದ ಟಿ20 ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಗೂ ಮುನ್ನ ಮೊನಾಂಕ್ ಪಟೇಲ್, ಅಮೆರಿಕ ತಂಡದ ನಾಯಕರಾಗಿ ನೇಮಕಗೊಂಡಿದ್ದರು.

ICC T20 World Cup 2024 American team captain Monank Patel is like a fan of our Kannadiga KL Rahul

Comments are closed.