Hardik Pandya played for West Indies : ಆತಿಥೇಯ ವೆಸ್ಟ್ ಇಂಡೀಸ್ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಶುಭಾರಂಭ ಮಾಡಿದೆ. ಗಯಾನದಲ್ಲಿ ನಡೆದ ಕನ್ನ ಆರಂಭಿಕ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ಸ್ ವಿಂಡೀಸ್ ಪಡೆ, ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿ (PNG) ತಂಡವನ್ನು 5 ವಿಕೆಟ್’ಗಳಿಂದ ಸೋಲಿಸಿ ಪ್ರಯಾಸದ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಪಿಎನ್’ಜಿ ತಂಡ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದರೆ, ನಂತರ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 19 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಗೆಲುವು ಸಾಧಿಸಿತು. ರನ್ ಚೇಸಿಂಗ್ ವೇಳೆ ವಿಂಡಿಸ್ ಪರ ಆಲ್ರೌಂಡರ್ ರಾಸ್ಟನ್ ಚೇಸ್ 27 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ವೆಸ್ಟ್ ಇಂಡೀಸ್ ಮತ್ತು ಪಪುವಾ ನ್ಯೂಗಿನಿ ಪಂದ್ಯದ ವೇಳೆ ಟೂರ್ನಿಯ ಲೈವ್ ಸ್ಟ್ರೀಮಿಂಗ್ ಹಕ್ಕು ಹೊಂದಿರುವ ಡಿಸ್ನಿ+ ಹಾಟ್ ಸ್ಟಾರ್ ಪ್ರಮಾದ ವೊಂದನ್ನು ಮಾಡಿದೆ. ವಿಂಡೀಸ್ ಸ್ಕೋರ್ ಕಾರ್ಡ್’ನಲ್ಲಿ ರಾಸ್ಟನ್ ಚೇಸ್ ಫೋಟೋ ಹಾಕುವ ಬದಲು, ಹಾರ್ದಿಕ್ ಪಾಂಡ್ಯ (Hardik Pandya) ಫೋಟೋ ಹಾಕಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.
ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’
https://x.com/mufaddal_vohra/status/1797482820736258062?s=4
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ. 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡ ನಿರಂತರ 11 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ನಿರೀಕ್ಷೆಗಳು ಮತ್ತೆ ಗರಿಗೆದರಿದ್ದು, 17 ವರ್ಷಗಳ ನಂತರ ಭಾರತಕ್ಕೆ ಟಿ20 ವಿಶ್ವಕಪ್ ಒಲಿಯಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.
ICC t20 World Cup 2024 Hardik Pandya played for West Indies