icc t20 world cup 2024 : ನ್ಯೂ ಯಾರ್ಕ್: ಆತ ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್. ಆದರೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಆತನ ಆಟ ಮಾತ್ರ ತೀರಾ ಕಳಪೆ. ಮೊದಲ ಪಂದ್ಯದಲ್ಲಿ 2 ರನ್, ಎರಡನೇ ಪಂದ್ಯದಲ್ಲಿ 7 ರನ್. ಇದೀಗ ಸೂರ್ಯಕುಮಾರ್ ಯಾದವ್ (Surya Kumar Yadav) ಮುಂದೆ ಮೂರನೇ ಚಾಲೆಂಜ್. ಟಿ20 ಕ್ರಿಕೆಟ್’ನ ನಂ.1 ದಾಂಡಿಗ, ಭಾರತದ ಎಬಿ ಡಿ’ವಿಲಿಯರ್ಸ್ ಖ್ಯಾತಿಯ ಸೂರ್ಯಕುಮಾರ್ ಯಾದವ್, ಅಮೆರಿಕದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್’ನ ಮೊದಲೆರಡೂ ಪಂದ್ಯಗಳಲ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ.

ಐರ್ಲೆಂಡ್ ವಿರುದ್ಧ 4 ಎಸೆತಗಳನ್ನೆದುರಿಸಿ ಕೇವಲ 2 ರನ್ನಿಗೆ ಔಟಾಗಿದ್ದ ಸೂರ್ಯ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 8 ಎಸೆತಗಳಲ್ಲಿ 7 ರನ್ ಗಳಿಸಿ ವೇಗಿ ಹ್ಯಾರಿಸ್ ರೌಫ್’ಗೆ ವಿಕೆಟ್ ಒಪ್ಪಿಸಿದ್ದರು. ಭಾರತ ತಂಡ ನಾಳೆ (ಬುಧವಾರ) ನ್ಯೂ ಯಾರ್ಕ್’ನಲ್ಲಿ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದೆ.
ಈ ಪಂದ್ಯ ಸೂರ್ಯಕುಮಾರ್ ಯಾದವ್ ಪಾಲಿಗೆ ಮಹತ್ವದ್ದಾಗಿದೆ. ಈ ಪಂದ್ಯದಲ್ಲಾದರೂ ಸೂರ್ಯ ಫಾರ್ಮ್’ಗೆ ಮರಳಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಜೊತೆ ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ಕೂಡ ಆರಂಭಿಕ ಎರಡು ಪಂದ್ಯಗಳಲ್ಲೂ ಮುಗ್ಗರಿಸಿದ್ದಾರೆ.
ಇದನ್ನೂ ಓದಿ : Jasprit Bumrah Net Worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !
ಐರ್ಲೆಂಡ್ ವಿರುದ್ಧ ಕೇವಲ 1 ರನ್ ಗಳಿಸಿ ಔಟಾಗಿದ್ದ ವಿರಾಟ್, ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಯುವ ವೇಗಿ ನಸೀಮ್ ಶಾ ದಾಳಿಯಲ್ಲಿ ಔಟಾಗಿದ್ದರು. ಹೀಗಾಗಿ ಯುಎಎಸ್ ವಿರುದ್ಧದ ಪಂದ್ಯದಲ್ಲಿ ಎಲ್ಲರ ಗಮನ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ’ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ, ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಭಾನುವಾರ ನಡೆದ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ನಾಳೆ ನಡೆಯಲಿರುವ ಪಂದ್ಯದಲ್ಲಿ ಅಮೆರಿಕ ವಿರುದ್ಧ ಗೆದ್ದರೆ, ಭಾರತ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ : ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್: ರಾಯ್ಪುರ ರೈನೋಸ್ ತಂಡಕ್ಕೆ ಕನ್ನಡಿಗ ಮುಕುಂದ್ ಗೌಡ ಕೋಚ್!
ಅಮೆರಿಕ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಸಂಜು ಸ್ಯಾಮ್ಸನ್
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರೀತ್ ಬುಮ್ರಾ
11. ಮೊಹಮ್ಮದ್ ಸಿರಾಜ್

ಇದನ್ನೂ ಓದಿ : Exclusive: ಕುಕ್ಕೆ ಸುಬ್ರಮಣ್ಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್
ಭಾರತ Vs ಅಮೆರಿಕ ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂ, ನ್ಯೂ ಯಾರ್ಕ್.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್
icc t20 world cup 2024 india vs usa will suryakumar yadav perform well