ಬೆಂಗಳೂರು : ICC World Cup 2023 : ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಟ್ಟು 5 ಪಂದ್ಯಗಳ ಆತಿಥ್ಯ ಸಿಕ್ಕಿದೆ. ಈ ಪೈಕಿ ಭಾರತದ ಒಂದೇ ಒಂದು ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ. ಚಿನ್ನಸ್ವಾಮಿಯಲ್ಲಿ ನವೆಂಬರ್ 11ರಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಕ್ವಾಲಿಫೈಯರ್-2 ತಂಡವನ್ನು ಎದುರಿಸಲಿದೆ ಎಂದು ಐಸಿಸಿ ಪ್ರಕಟಿಸಿದ್ದ ವಿಶ್ವಕಪ್ ವೇಳಾಪಟ್ಟಿಯಲ್ಲಿ ತಿಳಿಸಲಾಗಿತ್ತು. ಆ ಕ್ವಾಲಿಫೈಯರ್-2 ತಂಡ ಯಾವುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಪಡೆದಿರುವ ನೆದರ್ಲೆಂಡ್ಸ್ ತಂಡ, ಬೆಂಗಳೂರಿನಲ್ಲಿ ನವೆಂಬರ್ 11ರಂದು ನಡೆಯುವ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿ.
ಐಸಿಸಿ ವಿಶ್ವಕಪ್ 2023: ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳು
ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ
ಅಕ್ಟೋಬರ್ 26: ಇಂಗ್ಲೆಂಡ್ Vs ಶ್ರೀಲಂಕಾ
ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್
ನವೆಂಬರ್ 9: ನ್ಯೂಜಿಲೆಂಡ್ Vs ಶ್ರೀಲಂಕಾ
ನವೆಂಬರ್ 11: ಭಾರತ Vs ನೆದರ್ಲೆಂಡ್ಸ್
ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದಲ್ಲಿ ಆಡಿರುವ 5 ಪಂದ್ಯಗಳಿಂದ ನೆದರ್ಲೆಂಡ್ಸ್ 3 ಗೆಲುವು ಹಾಗೂ 2 ಸೋಲಿನೊಂದಿಗೆ 6 ಪಾಯಿಂಟ್ಸ್ ಗಳಿಸಿದ್ದು, 2ನೇ ಸ್ಥಾನ ಪಡೆದಿದೆ. ಆಡಿರುವ ನಾಲ್ಕೂ ಪಂದ್ಯಗಳನ್ನು ಗೆದ್ದು 8 ಅಂಕ ಸಂಪಾದಿಸಿರುವ ಶ್ರೀಲಂಕಾ ಅಗ್ರಸ್ಥಾನದೊಂದಿಗೆ ವಿಶ್ವಕಪ್ ಪ್ರಮುಖ ಸುತ್ತಿಗೆ ಅರ್ಹತೆ ಪಡೆದಿದೆ. 2 ಬಾರಿಯ ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಇದೇ ಮೊದಲ ಬಾರಿ ಐಸಿಸಿ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ತಲಾ 9 ಪಂದ್ಯಗಳನ್ನಾಡಲಿದ್ದು, ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ನವೆಂಬರ್ 19ರಂದು ನಡೆಯುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಅಕ್ಟೋಬರ್ 5ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 15ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ (India Vs Pakistan) ಪಂದ್ಯಕ್ಕೂ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಅಕ್ಟೋಬರ್ 8ರದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯದ ಮೂಲಕ 2 ಬಾರಿಯ ಚಾಂಪಿಯನ್ ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.
ಇದನ್ನೂ ಓದಿ : World Cup 2023 : ಏಕದಿನ ವಿಶ್ವಕಪ್ 2023ಕ್ಕೆ ಅರ್ಹತೆ ಪಡೆದ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ
ಇದನ್ನೂ ಓದಿ : Yashasvi Jaiswal: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಜೈಸ್ವಾಲ್, ಪ್ರಥಮ ಟೆಸ್ಟ್‌ನಲ್ಲಿ ರೋಹಿತ್ ಜೊತೆ ಪಾನಿಪೂರಿ ಹುಡುಗನೇ ಓಪನರ್?
ಐಸಿಸಿ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ (ICC World Cup 2023 Schedule) :
- ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
- ಅಕ್ಟೋಬರ್ 6: ಪಾಕಿಸ್ತಾನ Vs ನೆದರ್ಲೆಂಡ್ಸ್ (ಹೈದರಾಬಾದ್)
- ಅಕ್ಟೋಬರ್ 7: ಬಾಂಗ್ಲಾದೇಶ Vs ಅಫ್ಘಾನಿಸ್ತಾನ (ಧರ್ಮಶಾಲಾ)
- ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಶ್ರೀಲಂಕಾ (ದೆಹಲಿ)
- ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
- ಅಕ್ಟೋಬರ್ 9: ನ್ಯೂಜಿಲೆಂಡ್ Vs ನೆದರ್ಲೆಂಡ್ಸ್ (ಹೈದರಾಬಾದ್)
- ಅಕ್ಟೋಬರ್ 10: ಇಂಗ್ಲೆಂಡ್ Vs ಬಾಂಗ್ಲಾದೇಶ (ಧರ್ಮಶಾಲಾ)
- ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
- ಅಕ್ಟೋಬರ್ 12: ಪಾಕಿಸ್ತಾನ Vs ಶ್ರೀಲಂಕಾ (ಹೈದರಾಬಾದ್)
- ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
- ಅಕ್ಟೋಬರ್ 14: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ದೆಹಲಿ)
- ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
- ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
- ಅಕ್ಟೋಬರ್ 16: ಆಸ್ಟ್ರೇಲಿಯಾ Vs ಶ್ರೀಲಂಕಾ (ಲಕ್ನೋ)
- ಅಕ್ಟೋಬರ್ 17: ದಕ್ಷಿಣ ಆಫ್ರಿಕಾ Vs ನೆದರ್ಲೆಂಡ್ಸ್ (ಧರ್ಮಶಾಲಾ)
- ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
- ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
- ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)
- ಅಕ್ಟೋಬರ್ 21: ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಮುಂಬೈ)
- ಅಕ್ಟೋಬರ್ 21: ಶ್ರೀಲಂಕಾ Vs ನೆದರ್ಲೆಂಡ್ಸ್ (ಲಕ್ನೋ)
- ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
- ಅಕ್ಟೋಬರ್ 23: ಪಾಕಿಸ್ತಾನ Vs ಅಫ್ಘಾನಿಸ್ತಾನ (ಚೆನ್ನೈ)
- ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ (ಮುಂಬೈ)
- ಅಕ್ಟೋಬರ್ 25: ಆಸ್ಟ್ರೇಲಿಯಾ Vs ನೆದರ್ಲೆಂಡ್ಸ್ (ದೆಹಲಿ)
- ಅಕ್ಟೋಬರ್ 26: ಇಂಗ್ಲೆಂಡ್ Vs ಶ್ರೀಲಂಕಾ (ಬೆಂಗಳೂರು)
- ಅಕ್ಟೋಬರ್ 27: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಚೆನ್ನೈ)
- ಅಕ್ಟೋಬರ್ 28: ನೆದರ್ಲೆಂಡ್ಸ್ Vs ಬಾಂಗ್ಲಾದೇಶ (ಕೋಲ್ಕತಾ)
- ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
- ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
- ಅಕ್ಟೋಬರ್ 30: ಅಫ್ಘಾನಿಸ್ತಾನ Vs ಶ್ರೀಲಂಕಾ (ಪುಣೆ)
- ಅಕ್ಟೋಬರ್ 31: ಪಾಕಿಸ್ತಾನ Vs ಬಾಂಗ್ಲಾದೇಶ (ಕೋಲ್ಕತಾ)
- ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
- ನವೆಂಬರ್ 2: ಭಾರತ Vs ಶ್ರೀಲಂಕಾ (ಮುಂಬೈ)
- ನವೆಂಬರ್ 3: ನೆದರ್ಲೆಂಡ್ಸ್ Vs ಅಫ್ಘಾನಿಸ್ತಾನ (ಲಕ್ನೋ)
- ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)
- ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
- ನವೆಂಬರ್ 5: ದಕ್ಷಿಣ ಆಫ್ರಿಕಾ Vs ಭಾರತ (ಕೋಲ್ಕತಾ)
- ನವೆಂಬರ್ 6: ಬಾಂಗ್ಲಾದೇಶ Vs ಶ್ರೀಲಂಕಾ (ದೆಹಲಿ)
- ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
- ನವೆಂಬರ್ 8: ಇಂಗ್ಲೆಂಡ್ Vs ನೆದರ್ಲೆಂಡ್ಸ್ (ಪುಣೆ)
- ನವೆಂಬರ್ 9: ನ್ಯೂಜಿಲೆಂಡ್ Vs ಶ್ರೀಲಂಕಾ (ಬೆಂಗಳೂರು)
- ನವೆಂಬರ್ 10: ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ಅಹ್ಮದಾಬಾದ್)
- ನವೆಂಬರ್ 11: ಭಾರತ Vs ನೆದರ್ಲೆಂಡ್ಸ್ (ಬೆಂಗಳೂರು)
- ನವೆಂಬರ್ 12: ಇಂಗ್ಲೆಂಡ್ Vs ಪಾಕಿಸ್ತಾನ (ಕೋಲ್ಕತಾ)
- ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
- ನವೆಂಬರ್ 15: ಸೆಮಿಫೈನಲ್-1 (ಮುಂಬೈ)
- ನವೆಂಬರ್ 16: ಸೆಮಿಫೈನಲ್-2 (ಕೋಲ್ಕತಾ)
- ನವೆಂಬರ್ 19: ಫೈನಲ್ (ಅಹ್ಮದಾಬಾದ್)
ICC World Cup 2023: Team India to face Netherlands in Bengaluru on November 11