ಭಾನುವಾರ, ಏಪ್ರಿಲ್ 27, 2025
HomeSportsCricketAxar Patel : ಟೀಮ್ ಇಂಡಿಯಾಗೆ ಆಪದ್ಬಾಂಧವನಾದ ಅಕ್ಷರ್, ರೋಚಕ ಘಟ್ಟದಲ್ಲಿ ದೆಹಲಿ ಟೆಸ್ಟ್; 2ನೇ...

Axar Patel : ಟೀಮ್ ಇಂಡಿಯಾಗೆ ಆಪದ್ಬಾಂಧವನಾದ ಅಕ್ಷರ್, ರೋಚಕ ಘಟ್ಟದಲ್ಲಿ ದೆಹಲಿ ಟೆಸ್ಟ್; 2ನೇ ದಿನ ಆಸೀಸ್ ಮೇಲುಗೈ

- Advertisement -

ದೆಹಲಿ: (Axar Patel ) ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India vs Australia Border-Gavaskar test series) 2ನೇ ಪಂದ್ಯದಲ್ಲಿ 2ನೇ ದಿನ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.

ಆಸ್ಟ್ರೇಲಿಯಾದ ಪ್ರಥಮ ಇನ್ನಿಂಗ್ಸ್ ಮೊತ್ತವಾದ 263 ರನ್’ಗಳಿಗೆ ಪ್ರತಿಯಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ 262 ರನ್’ಗಳಿಗೆ ಆಲೌಟಾಗಿ ಆಸೀಸ್’ಗೆ 1 ರನ್ ಮುನ್ನಡೆ ಬಿಟ್ಟುಕೊಟ್ಟಿತು. ವಿಕೆಟ್ ನಷ್ಟವಿಲ್ಲದೆ 21 ರನ್’ಗಳಿಂದ ದ್ವಿತೀಯ ದಿನದಾಟ ಆರಂಭಿಸಿದ ಭಾರತ, ಆರಂಭಕಾರ ಕೆ.ಎಲ್ ರಾಹುಲ್ ಅವರನ್ನು 17 ರನ್ನಿಗೆ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 32 ರನ್ ಗಳಿಸಿ ಔಟಾದ್ರೆ, ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಶೂನ್ಯಕ್ಕೆ ಔಟಾದ್ರು. ಮಾಜಿ ನಾಯಕ ವಿರಾಟ್ ಕೊಹ್ಲಿ 44 ರನ್ ಬಾರಿಸಿದ್ರೆ, ಶ್ರೇಯಸ್ ಅಯ್ಯರ್ ಗಳಿಕೆ ಕೇವಲ 4 ರನ್. ವಿಕೆಟ್ ಕೀಪರ್ ಕೆ.ಎಸ್ ಭರತ್ 6 ರನ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜ 26 ರನ್ ಗಳಿಸಿ ಔಟಾದಾಗ ಭಾರತ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ ಕೇವಲ 139.

ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ಆಲ್ರೌಂಡರ್’ಗಳಾದ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಆಸರೆಯಾದರು. ಈ ಜೋಡಿ 8ನೇ ವಿಕೆಟ್’ಗೆ ಅತ್ಯಮೂಲ್ಯ 114 ರನ್’ಗಳ ಜೊತೆಯಾಟವಾಡಿ ಭಾರತವನ್ನು ಅಪಾಯದಿಂದ ಪಾರು ಮಾಡಿತು. 8ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಜವಾಬ್ದಾರಿಯುತ ಆಟವಾಡಿದ ಅಕ್ಷರ್ 74 ರನ್ ಬಾರಿಸಿದ್ರೆ, ಅಶ್ವಿನ್ 37 ರನ್ ಗಳಿಸಿದ್ರು. ಅಂತಿಮವಾಗಿ ಭಾರತ 262 ರನ್’ಗಳಿಗೆ ಆಲೌಟಾಯಿತು.

ಒಂದು ರನ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 23 ರನ್ನಿಗೆ ಉಸ್ಮಾನ್ ಖವಾಜ (6) ವಿಕೆಟ್ ಕಳೆದುಕೊಂಡಿತು. ಆದರೆ ಗಾಯಾಳು ಡೇವಿಡ್ ವಾರ್ನರ್ ಬದಲು ಇನ್ನಿಂಗ್ಸ್ ಆರಂಭಿಸಿದ ಟ್ವಾವಿಸ್ ಹೆಡ್ 40 ಎಸೆತಗಳಲ್ಲಿ ಅಜೇಯ 39 ರನ್ ಸಿಡಿಸಿ ಮಾರ್ನಸ್ ಲಬುಶೇನ್ (ಅಜೇಯ 16) ಜೊತೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 2ನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿರುವ ಆಸೀಸ್ ಒಟ್ಟಾರೆ 62 ರನ್’ಗಳ ಮುನ್ನಡೆಯಲ್ಲಿದೆ.

ಇದನ್ನೂ ಓದಿ : Sandeep Lamichhane : ಅತ್ಯಾಚಾರ ಆರೋಪಿ ಸಂದೀಪ್ ಲಾಮಿಚಾನೆ ಕೈಕುಲುಕಲು ನಿರಾಕರಿಸಿದ ಸ್ಕಾಟ್ಲೆಂಡ್ ಆಟಗಾರರು

ಇದನ್ನೂ ಓದಿ : KL Rahul – Mayank Agarwal : ಆಸೀಸ್ ವಿರುದ್ಧ ಕೆ.ಎಲ್ ರಾಹುಲ್ ಮತ್ತೆ ಫೇಲ್, ಗೆಳೆಯನ ಸ್ಥಾನವನ್ನು ಆಕ್ರಮಿಸಿಕೊಳ್ತಾರಾ ಮತ್ತೊಬ್ಬ ಕನ್ನಡಿಗ ?

IND vs AUS 2nd Test Axar Patel Show Lights Delhi Test

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular