BMRCL ನೇಮಕಾತಿ 2023 : ಅಗ್ನಿಶಾಮಕ ಇನ್ಸ್‌ಪೆಕ್ಟರ್, ಅಸೆಂಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL Recruitment 2023) ನೇಮಕಾತಿಗೆ ಅಧಿಕೃತ ಅಧಿಸೂಚನೆ ಫೆಬ್ರವರಿ 2023 ರ ಮೂಲಕ ಫೈರ್ ಇನ್ಸ್‌ಪೆಕ್ಟರ್, ಅಸೆಂಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಖಾಲಿ ಇರುವ ಹುದ್ದೆಗಳಿಗಾಗಿ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
ಹುದ್ದೆಗಳ ಸಂಖ್ಯೆ : 10 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು : ಫೈರ್ ಇನ್ಸ್‌ಪೆಕ್ಟರ್, ಅಸೆಂಟ್ ಇಂಜಿನಿಯರ್
ವೇತನ : ರೂ.50000-140000/-

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
ಅಗ್ನಿಶಾಮಕ ನಿರೀಕ್ಷಕ : 4 ಹುದ್ದೆಗಳು
ಡೈ. ಮುಖ್ಯ ಇಂಜಿನಿಯರ್ (ಸುರಕ್ಷತೆ ಮತ್ತು ಹೀತ್) : 1 ಹುದ್ದೆ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸುರಕ್ಷತೆ ಮತ್ತು ಆರೋಗ್ಯ) : 2 ಹುದ್ದೆಗಳು
ಸಹಾಯಕ ಇಂಜಿನಿಯರ್ (ಸುರಕ್ಷತೆ ಮತ್ತು ಆರೋಗ್ಯ) : 3 ಹುದ್ದೆಗಳು

ಶೈಕ್ಷಣಿಕ ಅರ್ಹತೆ :
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಡಿಪ್ಲೊಮಾ ಮೆಕ್ಯಾನಿಕಲ್, ಬಿಇ / ಬಿ. ಟೆಕ್ (ಸಿವಿಲ್ / ಮೆಕ್ಯಾನಿಕಲ್ / ಎನ್ವಿರಾನ್ಮೆಂಟ್) ಪೂರ್ಣಗೊಳಿಸಿರಬೇಕು.

ವಯೋಮಿತಿ:
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಗರಿಷ್ಠ ವಯಸ್ಸು 55 ವರ್ಷ ವಯಸ್ಸು ಮೀರಿರಬಾರದು.

ಆಯ್ಕೆ ಪ್ರಕ್ರಿಯೆ:
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

BMRCL ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ :
ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ನಗರ ನಿಯಮಗಳ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್ (HR),ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, III ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ, ಶಾಂತಿನಗರ, ಬೆಂಗಳೂರು 560027 ಗೆ ಸ್ಪೀಡ್ ಪೋಸ್ಟ್ / ಕೊರಿಯರ್ ಮೂಲಕ ಕಳುಹಿಸಬೇಕು. ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಮಾರ್ಚ್‌ 14, 2023 ಮತ್ತು ಪೋಷಕ ದಾಖಲೆಗಳೊಂದಿಗೆ ಸಹಿ ಮಾಡಿದ ಮುದ್ರಣವನ್ನು ಸ್ವೀಕರಿಸಲು ಮಾರ್ಚ್‌ 18, 2023 ರಂದು ಸಂಜೆ 04 ಗಂಟೆ ಒಳಗೆ ಕಳುಹಿಸಬೇಕಾಗಿದೆ.

ಇದನ್ನೂ ಓದಿ : ಕೆನರಾ ಬ್ಯಾಂಕ್ ನೇಮಕಾತಿ 2023 : ವಿವಿಧ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : SAI ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ರೂ 1 ಲಕ್ಷದವರೆಗೆ ವೇತನ

ಇದನ್ನೂ ಓದಿ : KSFC ನೇಮಕಾತಿ 2023 : ವಿವಿಧ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16 ಫೆಬ್ರವರಿ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಮಾರ್ಚ್ 2023
ಪೋಷಕ ದಾಖಲೆಗಳೊಂದಿಗೆ ಸಹಿ ಮಾಡಿದ ಮುದ್ರಣವನ್ನು ಕಳುಹಿಸಲು ಕೊನೆಯ ದಿನಾಂಕ: 18 ಮಾರ್ಚ್‌ 2023

ಅಭ್ಯರ್ಥಿಗಳ ಗಮನಕ್ಕೆ : ಅವರು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಸಂದರ್ಶನಕ್ಕೆ ಹಾಜರಾಗಲು ಇಮೇಲ್ / SMS ಮೂಲಕ ತಿಳಿಸಲಾಗುವುದು.

BMRCL Recruitment 2023 : Application Invitation for Fire Inspector, Asst Engineer Posts

Comments are closed.