Duleep trophy 2024 : ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ತಂಡದ ವಿರುದ್ದ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತ ಕ್ರಿಕೆಟ್ ತಂಡದ (Indian Cricket team) ಬಹುತೇಕ ಆಟಗಾರರು ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದ್ರಲ್ಲೂ ತಂಡದಿಂದ ದೂರ ಉಳಿದಿರುವ ಕೆಲವು ಆಟಗಾರರಿಗೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ ಆಗಲು ಇದೊಂದು ಸುವರ್ಣಾವಕಾಶ. ಇದೇ ಕಾರಣದಿಂದಲೇ ಯುವ ಪ್ರತಿಭೆಗಳು, ಟೀಂ ಇಂಡಿಯಾ ಸೇರಲು ಕಾತರರಾಗಿದ್ದಾರೆ.
ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಬಿಸಿಸಿಐ ದುಲೀಪ್ ಟ್ರೋಫಿಯಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಬಾಂಗ್ಲಾ ವಿರುದ್ದದ ಸರಣಿಗೆ ಟೀಂ ಇಂಡಿಯಾ ಆಯ್ಕೆಗೆ ಮುಂದಾಗಿದೆ. ಟೀಂ ಇಂಡಿಯಾದಿಂದ ದೂರ ಉಳಿದಿರುವ ಈ ಮೂವರು ಆಟಗಾರರು ಟೀಂ ಇಂಡಿಯಾ ಸೇರ್ಪಡೆ ಆಗೋದು ಬಹುತೇಕ ಖಚಿತ ಎನ್ನಲಾಗುತ್ತಾದೆ. ಹಾಗಾದ್ರೆ ಆಟಗಾರರು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಪ್ರಸಿದ್ದ ಕೃಷ್ಣ
ಕರ್ನಾಟಕದ ಯುವ ಕ್ರಿಕೆಟಿಗ ಪ್ರಸಿದ್ದ ಕೃಷ್ಣ ಗಾಯದ ಕಾರಣದಿಂದಾಗಿ ದೂರ ಉಳಿದಿದ್ದಾರೆ. ಆದರೆ ಇದೀಗ ಪ್ರಸಿದ್ದ ಕೃಷ್ಣ ಚೇತರಿಸಿ ಕೊಂಡಿದ್ದು, ದುಲೀಪ್ ಟ್ರೋಫಿಯ ಮೂಲಕ ಕ್ರಿಕೆಟ್‌ಗೆ ವಾಪಾಸಾಗಲು ಸಿದ್ದತೆ ನಡೆಸಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಪ್ರಸಿದ್ದ ಕೃಷ್ಣ ತೋರುವ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ತಂಡಕ್ಕೆ ವಾಪಾಸಾತಿ ನಿರ್ಧಾರವಾಗಲಿದೆ. ಪ್ರಸಿದ್ದ ಕೃಷ್ಣ ಅವರ ಆಟದ ಮೇಲೆ ರಾಷ್ಟ್ರೀಯ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಕಳೆದ ಬಾರಿಯ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಪಂದ್ಯದಲ್ಲಿ ಪ್ರಸಿದ್ದ ಕೃಷ್ಣ ಅವರು ಕೊನೆಯ ಬಾರಿಗೆ ತಂಡವನ್ನು ಪ್ರತಿನಿಧಿಸಿದ್ದರು. ಗಾಯದ ಕಾರಣದಿಂದಲೇ ಅವರು ಕಳೆದ ಬಾರಿಯ ಐಪಿಎಲ್ ಹಾಗೂ ಟಿ೨೦ ವಿಶ್ವಕಪ್ ಪಂದ್ಯಾವಳಿಯಿಂದ ದೂರ ಉಳಿದಿದ್ದರು.
ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್

ನವದೀಪ್ ಸೈನಿ
ಅನಾರೋಗ್ಯದ ಕಾರಣದಿಂದಲೇ ಮೊಹಮ್ಮದ್ ಸಿರಾಜ್ ಸದ್ಯ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಮೊಹಮ್ಮದ್ ಸಿರಾಜ್ ಸ್ಥಾನಕ್ಕೆ ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಲಾಗಿದೆ. ನವದೀಪ್ ಸೈನಿ ಕೂಡ ಪ್ರಸಿದ್ದ ಕೃಷ್ಣ ರೀತಿಯಲ್ಲಿಯೇ ರಾಷ್ಟ್ರೀಯ ತಂಡಕ್ಕೆ ಮರು ಆಯ್ಕೆ ಆಗಲು ಕಾಯುತ್ತಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ರೆ ಮಾತ್ರವೇ ಸೈನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿದ್ದಾರೆ.
ಇದನ್ನೂ ಓದಿ : ಕೆಎಲ್ ರಾಹುಲ್ ನಿವೃತ್ತಿ : ಏನಿದು ಹೊಸ ಸಂಚು ?

ದೇವದತ್ ಪಡಿಕ್ಕಲ್
ಕರ್ನಾಟಕ ತಂಡದ ಮತ್ತೋರ್ವ ಯುವ ಆಟಗಾರ ದೇವದತ್ ಪಡಿಕ್ಕಲ್. ದೇಶೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ದೇವದತ್ ಪಡಿಕ್ಕಲ್ ಭವಿಷ್ಯದ ಟೆಸ್ಟ್ ಆಟಗಾರ ಅನ್ನೋದನ್ನು ಈಗಾಗಲೇ ನಿರೂಪಿಸಿದ್ದಾರೆ. ಪಡಿಕ್ಕಲ್ ಈಗಾಗಲೇ ಟೆಸ್ಟ್ ಪಂದ್ಯಗಳಲ್ಲಿ 6 ಶತಕ ಮತ್ತು 13 ಅರ್ಧಶತಕಗಳಿಸಿದ್ದು, 44.94 ಸರಾಸರಿಯಲ್ಲಿ ರನ್ ಕಾಯ್ದುಕೊಂಡಿದ್ದಾರೆ. ಟೆಸ್ಟ್ ತಂಡದ ಸಂಭಾವ್ಯ ಆಟಗಾರರು ಆಗಿರೋ ಕಾರಣದಿಂದಲೇ ದೇವದತ್ ಪಡಿಕ್ಕಲ್ ಅವರ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದಾರೆ.
IND vs BAN: These 3 players will enter Indian Cricket Team from Duleep trophy 2024