ಗಯಾನ: ಟಿ20 ವಿಶ್ವಕಪ್ (ICC T20 World Cup) ಕಿರೀಟದ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಗುರುವಾರ ಮಹತ್ವದ ದಿನ. ಗುರುವಾರ ಗಯಾನದಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ (India Vs England) ತಂಡವನ್ನು ಎದುರಿಸಲಿದೆ. ಸೂಪರ್-8 ಹಂತದಲ್ಲಿ ಆಡಿರುವ ಮೂರೂ ಪಂದ್ಯಗಳನ್ನುಗೆದ್ದಿರುವ ಭಾರತ ಕ್ರಿಕೆಟ್ ತಂಡ (Indian Cricket Team) , ಅಜೇಯವಾಗಿ ಸೆಮಿಫೈನಲ್ ತಲುಪಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡ ಮೂರಲ್ಲಿ ಎರಡು ಪಂದ್ಯಗಳನ್ನು ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

ಭಾರತ Vs ಇಂಗ್ಲೆಂಡ್ ನಡುವಿನ ರೋಚಕ ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿರುವುದು ಗಯಾನದ ಪ್ರಾವಿಡೆನ್ಸ್ ಮೈದಾನ. ಗುರುವಾರ ಗಯಾನದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 89% ಮಳೆಯಾಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ, ಫೈನಲ್ ಸ್ಪರ್ಧಿಯನ್ನು ನಿರ್ಧರಿಸುವುದು ಹೇಗೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ, ಆಗ ಸೂಪರ್-8 ಹಂತದ ಸೋಲು-ಗೆಲುವಿನ ಲೆಕ್ಕಾಚಾರ ಗಣನೆಗೆ ಬರಲಿದೆ. ಸೂಪರ್-8 ಹಂತದಲ್ಲಿ ಯಾರು ಎಷ್ಟು ಪಂದ್ಯ ಗೆದ್ದಿದ್ದಾರೆ, ಎಷ್ಟು ಅಂಕ ಗಳಿಸಿದ್ದಾರೆ ಎಂಬುದರ ಮೇಲೆ ಫೈನಲ್ ಟಿಕೆಟ್ ಯಾರಿಗೆ ಎಂಬುದು ನಿರ್ಧಾರವಾಗಲಿದೆ.
ಇದನ್ನೂ ಓದಿ : T20 ವಿಶ್ವಕಪ್: ಆಸ್ಟ್ರೇಲಿಯಾ ಔಟ್, ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ
ಭಾರತ ತಂಡ ಸೂಪರ್-8 ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಆರು ಅಂಕಗಳೊಂದಿಗೆ ಅಜೇಯವಾಗಿ ಸೆಮಿಫೈನಲ್ ತಲುಪಿದೆ. ಇಂಗ್ಲೆಂಡ್ ತಂಡ ಆಡಿದ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದು ನಾಲ್ಕು ಅಂಕಗಳೊಂದಿಗೆ ಸೆಮೀಸ್ ಹಂತಕ್ಕೆ ಲಗ್ಗೆ ಇಟ್ಟಿದೆ. ಹೀಗಾಗಿ ಸೂಪರ್-8ನಲ್ಲಿ ಭಾರತವೇ ಮುಂದಿರುವ ಕಾರಣ, ಸೆಮಿಫೈನಲ್ ಮಳೆಯಿಂದ ರದ್ದಾದರೆ ಭಾರತ ತಂಡ ಫೈನಲ್ ಪ್ರವೇಶಿಸಲಿದೆ.

ಗಯಾನ ಕ್ರೀಡಾಂಗಣದ ಅಂಕಿ ಅಂಶ:
ಒಟ್ಟು ಟಿ20 ಪಂದ್ಯಗಳು: 18
ಮೊದಲು ಬ್ಯಾಟಿಂಗ್ ಮಾಡಿ ಗೆಲುವು: 06
ಚೇಸಿಂಗ್ ಮಾಡಿ ಗೆಲುವು: 09
ನೋ ರಿಸಲ್ಟ್: 03
ಇದನ್ನೂ ಓದಿ : India Vs Australia T20 World Cup 2024 : ಕಾಂಗರೂ ವಿರುದ್ಧ ಸೇಡು ಸಮಾಪ್ತಿ, ಭಾರತಕ್ಕೆ ಇಂಗ್ಲೆಂಡ್ ಸೆಮೀಸ್ ಎದುರಾಳಿ
ಗರಿಷ್ಠ ಟೋಟಲ್: 191/5, ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ (2010)
ಕನಿಷ್ಠ ಟೋಟಲ್: 39/10, ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡ (2024)
ಪ್ರಥಮ ಇನ್ನಿಂಗ್ಸ್’ನ ಸರಾಸರಿ ಟೋಟಲ್: 133
ಹೈಯೆಸ್ಟ್ ಸಕ್ಸಸ್’ಫುಲ್ ಚೇಸ್: 18.2 ಓವರ್’ಗಳಲ್ಲಿ 169/8, ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ (2022)
ಒಟ್ಟು ಸಿಕ್ಸರ್ಸ್: 147
ಒಟ್ಟು ಬೌಂಡರಿಗಳು: 259
ಒಟ್ಟು ಶತಕ: 01
ಒಟ್ಟು ಅರ್ಧಶತಕ: 17
ಇದನ್ನೂ ಓದಿ : Gautam Gambhir- Amit Shah: ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಮೊದಲು ಅಮಿತ್ ಶಾ ಭೇಟಿಯಾಗಿದ್ದೇಕೆ ?
India Vs England ICC T20 World Cup 2024 semi-final match does not take place, India will go to the final How do you know
News Next Digital ವಾಹಿನಿಯನ್ನು Subscribe ಮಾಡಿ :