ಮಂಗಳವಾರ, ಏಪ್ರಿಲ್ 29, 2025
HomeSportsIndia vs New Zealand, 2nd Test : ಭಾರತೀಯ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿದ ನ್ಯೂಜಿಲೆಂಡ್‌...

India vs New Zealand, 2nd Test : ಭಾರತೀಯ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿದ ನ್ಯೂಜಿಲೆಂಡ್‌ : ಟೀಂ ಇಂಡಿಯಾಕ್ಕೆ ಟೆಸ್ಟ್‌ ಸರಣಿ

- Advertisement -

ಮುಂಬೈ : ನ್ಯೂಜಿಲೆಂಡ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ 372 ರನ್ ಗಳ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಪೇಟಿಎಂ ಟೆಸ್ಟ್ ಸರಣಿಯನ್ನು (India vs New Zealand, 2nd Test) 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಅಧಿಕಾರವಹಿಸಿಕೊಂಡ ಮೊದಲ ಸರಣಿಯನ್ನೇ ರಾಹುಲ್‌ ರಾಹುಲ್‌ ದ್ರಾವಿಡ್‌ ಅವರು ಜಯಿಸುವ ಮೂಲಕ ಸ್ಮರಣೀಯ ವಾಗಿಸಿಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಟೀಂ ಇಂಡಿಯಾ ಪರ ಮಯಾಂಕ್‌ ಅಗರ್‌ವಾಲ್‌ ಅದ್ವುತ ಶತಕ (150) ಹಾಗೂ ಅಕ್ಷರ್‌ ಪಟೇಲ್‌ ಆಕರ್ಷದ ಅರ್ಧ ಶತಕದ ನೆರವಿನಿಂದ 325 ರನ್‌ ಗಳಿಗೆ ಆಲೌಟಾಗಿತ್ತು. ನ್ಯೂಜಿಲೆಂಡ್‌ ಬೌಲರ್‌ ಅಜಾಜ್‌ ಪಟೇಲ್‌ 199 ರನ್‌ ನೀಡಿ ಭಾರತದ ಎಲ್ಲಾ10 ವಿಕೆಟ್‌ ಪಡೆಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯನ್ನು ಬರೆದಿದ್ದರು.

ನಂತರ ಭಾರತ ನೀಡಿದ್ದ 326 ರನ್‌ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್‌ ತಂಡಕ್ಕೆ ಭಾರತೀಯ ಬೌಲರ್‌ಗಳು ಆಘಾತ ನೀಡಿದ್ರು. ಆರ್.ಅಶ್ವಿನ್‌, ಮೊಹ್ಮದ್‌ ಸಿರಾಜ್‌ ಹಾಗೂ ಅಕ್ಷರ್‌ ಪಟೇಲ್‌ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌ ತಂಡ ಕೇವಲ 62 ರನ್‌ಗಳಿಗೆ ಆಲೌಟಾಗಿದೆ. ನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಟೀಂ ಇಂಡಿಯಾ ಪರ ಮಯಾಂಕ್‌ ಅಗರ್‌ವಾಲ್‌ (62 ), ಚೇತೇಶ್ವರ ಪೂಜಾರ (47), ಶುಭಮನ್‌ ಗಿಲ್‌ (47), ಅಕ್ಷರ್‌ ಪಟೇಲ್‌ (41), ಕೊಯ್ಲಿ (36) ಅವರ ಆಟದ ನೆರವಿನಿಂದ ಭಾರತ 7 ವಿಕೆಟ್‌ ಕಳೆದುಕೊಂಡು 276 ರನ್‌ ಗಳಿಸಿದ್ದ ವೇಳೆಯಲ್ಲಿ ಡಿಕ್ಲೇರ್‌ ಮಾಡಿಕೊಂಡಿತ್ತು.

ನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಭಾರತ ತಂಡಕ್ಕೆ ಆರ್.ಅಶ್ವಿನ್‌ ಹಾಗೂ ಜಯಂತ್‌ ಯಾದವ್‌ ಮಾರಕವಾಗಿ ಪರಿಣಮಿಸಿದ್ರು. ಡ್ಯಾರೆಲ್‌ ಮಿಚೆಲ್‌ (60), ಹೆನ್ರಿ ನಿಕೋಲಸ್‌ (44 ) ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ನ್ಯೂಜಿಲೆಂಡ್‌ ತಂಡ ಕೇವಲ 167 ರನ್‌ ಗಳಿಗೆ ಆಲೌಟ್‌ ಆಗುವ ಮೂಲಕ ಭಾರತದ ಎದುರಲ್ಲಿ ಸೋಲನ್ನು ಕಂಡಿತ್ತು. ಈ ಮೂಲಕ ಭಾರತ ಎರಡನೇ ಟೆಸ್ಟ್‌ ಪಂದ್ಯವನ್ನು 377 ರನ್‌ ಅಂತರದಿಂದ ಗೆಲ್ಲುವ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಿಂದ ಜಯಿಸುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ.

ಭಾರತ ತಂಡ : ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆ), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶ್ರೀಕರ್ ಕೃಷ್ಣ ಭರತ್, ಪ್ರಸೀದ್

ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ಸಿ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಾಕ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೊಮರ್ವಿಲ್ಲೆ, ಅಜಾಜ್ ಪಟೇಲ್, ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್.

ಇದನ್ನು ಓದಿ : Ajaz Patel : ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಜಾಜ್‌ ಪಟೇಲ್‌ ವಿಶ್ವದಾಖಲೆ : ಕುಂಬ್ಳೆ, ಜಿಮ್‌ ಲೇಕರ್‌ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ ಸ್ಪಿನ್ನರ್‌

ಇದನ್ನೂ ಓದಿ : AB De Villiers : RCB ತಂಡಕ್ಕೆ ಮರಳಿದ್ದಾರೆ ಎಬಿ ಡಿವಿಲಿಯರ್ಸ್

( India vs New Zealand, 2nd Test, Day 4 Highlights: India win by 372 runs, clinch series 1-0 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular