Vikrant Rona : ಸುದೀಪ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : ವಿಕ್ರಾಂತ್‌ ರೋಣಾ ಕುತೂಹಲಕ್ಕೆ ನಾಳೆ ತೆರೆ

ಕೊರೋನಾ ಎರಡನೇ ಅಲೆ ತಣ್ಣಗಾಗುತ್ತಿದ್ದಂತೆ ಚಲನಚಿತ್ರ ಮಂದಿರಗಳು ನೂರಕ್ಕೆ ನೂರಕ್ಕೆ ಪ್ರವೇಶಾವಕಾಶ ನೀಡಲಾರಂಭಿಸಿವೆ. ಇದರ ಜೊತೆ ಜೊತೆಗೆ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಾರಂಭಿಸಿದೆ. ಈಗ ಈ ಸಾಲಿಗೆ ಕನ್ನಡದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ (Vikrant Rona) ಹೊಸ ಸೇರ್ಪಡೆ. ಕಿಚ್ಚ ಸುದೀಪ್ ಅಭಿನಯದ ಹೊಸ ಸಿನಿಮಾ ವಿಕ್ರಾಂತ್ ರೋಣ ಕೊನೆಗೂ ತೆರೆ ಮೇಲೆ ಬರಲು ಸಿದ್ಧವಾಗಿದೆ. ಸಿನಿಮಾದ ರಿಲೀಸ್ ಡೇಟ್ ಡಿಸೆಂಬರ್ 7 ರಂದು ಬೆಳಗ್ಗೆ 11.05 ಗಂಟೆಗೆ ಅನೌನ್ಸ್ ಆಗಲಿದೆ. ನಿಮಾ ರಿಲೀಸ್ ಬಗ್ಗೆ ಸುದೀಪ್ ( Sudeep ) ಅಧಿಕೃತ ಮಾಹಿತಿ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ನಾಳೆ ಬೆಳಗ್ಗೆ 11.05 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ ಎಂಬ ಪೋಸ್ಟ್ ಹಾಕಿದ್ದಾರೆ.

ಫ್ಯಾಂಟಮ್ ಎಂಬ ಹೆಸರಿನಲ್ಲಿ ಚಿತ್ರೀಕರಣ ಆರಂಭಿಸಿದ್ದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ವಿಕ್ರಾಂತ್ ರೋಣ ಎಂಬ ಪಾತ್ರವಿತ್ತು. ಆದರೆ ಕೊನೆಗೆ ಈ ಪಾತ್ರ ಗಳಿಸಿಕೊಂಡ ಜನಪ್ರಿಯತೆ ಮೇಲೆ ಚಿತ್ರದ ಹೆಸರನ್ನು ವಿಕ್ರಾಂತ್ ರೋಣ ಎಂದು ಬದಲಾಯಿಸಲಾಗಿತ್ತು. ಇನ್ನು ಸಿನಿಮಾ ಟೈಟಲ್ ನ್ನು ಕೂಡ ಸಖತ್ ಢಿಪೆರೆಂಟಾಗಿ ಲಾಂಚ್ ಮಾಡಲು ಬಯಸಿದ್ದ ಚಿತ್ರತಂಡ ವಿಶ್ವದ ಅತಿ ಎತ್ತರದ ಕಟ್ಟಡ ಖ್ಯಾತಿಯ ದುಬೈದ ಬುರ್ಜಾ ಖಲೀಫಾ ಮೇಲೆ ಟೈಟಲ್ ಲಾಂಚ್ ಮಾಡಿ ಗಮನ ಸೆಳೆದಿತ್ತು.

ಈಗಾಗಲೇ ಸಿನಿಮಾ ರಿಲೀಸ್ ಆಗಬೇಕಾಗಿತ್ತಾದರೂ ಕೊರೋನಾ ಎರಡು ಅಲೆಗಳ ಪ್ರಭಾವದಿಂದ ಸಿನಿಮಾ ರಿಲೀಸ್ ಮುಂದೂಡಿಕೆ ಆಗುತ್ತಲೇ ಇದೆ. ಇದೀಗ ಕೊನೆಗೂ ಚಿತ್ರತಂಡ ಸಿನಿಮಾ ರಿಲೀಸ್ ಗೆ ಡೇಟ್ ಫೈನಲ್ ಮಾಡಿದ್ದು ನಾಳೆ ಬೆಳಗ್ಗೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ,ಪ್ಯಾನ್ ಇಂಡಿಯಾ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಸಿನಿಮಾದ ಇನ್ನೊಂದು ಆಕರ್ಷಣೆ ಎಂದರೇ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ವಿಶೇಷ ಪಾತ್ರ ಹಾಗೂ ಐಟಂ ಸಾಂಗ್ ವೊಂದರಲ್ಲಿ ಸೊಂಟ ಬಳುಕಿಸಿದ್ದಾರೆ.

ಬರೋಬ್ಬರಿ ಮೂರು ಕೋಟಿ ವೆಚ್ಚದಲ್ಲಿ ಚಿತ್ರಿಸಲಾಗಿರುವ ಈ ಐಟಂ ಸಾಂಗ್ ನಲ್ಲಿ ಜಾಕ್ವಲಿನ್ ಫರ್ನಾಂಡೀಸ್ ಗಡಂಗ ರುಕ್ಕಮ್ಮ್ ನ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ಸುದೀಪ್ ಅಭಿಮಾನಿಗಳು ಸಿಹಿ ಸುದ್ದಿಗಾಗಿ‌ ಕಾದಿದ್ದು ನಾಳೆ ಎಲ್ಲ ಕುತೂಹಲಗಳಿಗೆ ಉತ್ತರ ಸಿಗಲಿದೆ. ಮೂಲಗಳ ಮಾಹಿತಿ ಪ್ರಕಾರ ಯುಗಾದಿ ಹಬ್ಬದ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Gandhada Gudi Title Teaser : ಪುನೀತ್ ರಾಜ್‌ಕುಮಾರ್ ಕನಸಿನ ಸಾಕ್ಷ್ಯಚಿತ್ರ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆ; ಇಲ್ಲಿ ವೀಕ್ಷಿಸಿ

ಇದನ್ನೂ ಓದಿ : ಕಿಚ್ಚನ ‘ಫ್ಯಾಂಟಮ್​’ಫಸ್ಟ್​ಲುಕ್​ಗೆ ಅಭಿಮಾನಿಗಳ ಕಾತರ

ಇದನ್ನೂ ಓದಿ : ಕಿಚ್ಚನ ಖದರ್​ಗೆ ಅಭಿಮಾನಿಗಳು ಪುಲ್ ಫಿದಾ: ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ

( Good news for Sudeep fans: Vikrant Rona opens curiosity tomorrow )

Comments are closed.