ವಿಶ್ಚ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ (World Test Championship) ಗೆಲುವಿನ ಅಭಿಯಾನ ಮುಂದುವರಿಸಿರುವ ಭಾರತ ಕ್ರಿಕೆಟ್ ತಂಡ ( Indian Cricket team) ಕ್ಕೆ ಇಂದು ನ್ಯೂಜಿಲೆಂಡ್ ಸವಾಲು ಒಡ್ಡಲಿದೆ ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ವಿರುದ್ದದ ಟೆಸ್ಟ್ ಸರಣಿ ಇಂದಿನಿಂದ ಆರಂಭಗೊಳ್ಳಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು,ಮಳೆಯ ಆತಂಕ ಎದುರಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಎರಡೂ ತಂಡಗಳು ಈಗಾಗಲೇ ದೈಹಿಕ ಕಸರತ್ತು ನಡೆಸಿವೆ. ಭಾರತ ಬಲಿಷ್ಠ ತಂಡವನ್ನೇ ನ್ಯೂಜಿಲೆಂಡ್ ವಿರುದ್ದ ಕಣಕ್ಕೆ ಇಳಿಸುತ್ತಿದೆ. ಹಾಗಾದ್ರೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಬಲಾಬಲ ಹೇಗಿದೆ. ಯಾವ ತಂಡ ಬಲಿಷ್ಠ, ಹಿಂದಿನ ಸೋಲು- ಗೆಲುವಿನ ದಾಖಲೆಗಳು ಏನು ಹೇಳುತ್ತವೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
IND vs NZ ಟೆಸ್ಟ್‌ನಲ್ಲಿ ಎರಡೂ ತಂಡಗಳ ಬಲಾಬಲ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಖಾಮುಖಿ ದಾಖಲೆಗಳನ್ನು ನೋಡೋದಾದ್ರೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಒಟ್ಟು 62 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 22 ಬಾರಿ ಗೆಲುವು ದಾಖಲಿಸಿದೆ. ಇನ್ನು ನ್ಯೂಜಿಲೆಂಡ್ 13 ಬಾರಿ ಗೆಲುವು ಸಾಧಿಸಿದ್ದರೆ, 27 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಆದರೆ 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೇರಿದಂತೆ ಅವರ ಕೊನೆಯ ಐದು ಪಂದ್ಯಗಳಲ್ಲಿ ಭಾರತ ವಿರುದ್ದ ನ್ಯೂಜಿಲೆಂಡ್ 3-1 ರ ದಾಖಲೆ ಹೊಂದಿದೆ.

ಆಡಿದ ಪಂದ್ಯಗಳು 62
ಗೆದ್ದ ಪಂದ್ಯಗಳು (ಭಾರತ) 22
ಗೆದ್ದ ಪಂದ್ಯಗಳು (ನ್ಯೂಜಿಲೆಂಡ್) 13
ಡ್ರಾಗಳು 27
ಟೈ 0
ಗೆಲುವು % (ಭಾರತ) 35.48
ಗೆಲುವು % (ನ್ಯೂಜಿಲೆಂಡ್) 20.96
IND vs NZ ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಹೆಡ್ ಟು ಹೆಡ್
ನ್ಯೂಜಿಲೆಂಡ್ ವಿರುದ್ಧ ಭಾರತ 17 ಸ್ವದೇಶಿ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ 17 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ತಮ್ಮ ಕೊನೆಯ ತವರು ಸರಣಿಯಲ್ಲಿ ಭಾರತವು ನ್ಯೂಜಿಲೆಂಡ್‌ಗೆ ಕಾನ್ಪುರ ಮತ್ತು ಮುಂಬೈನಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ನಾಲ್ಕನೇ ಬಾರಿ ಮುಖಾಮುಖಿಯಾಗಲಿವೆ.
ಇದನ್ನು ಓದಿ : ಆರ್‌ಸಿಬಿ ಮುಂದಿನ ನಾಯಕ ಯಾರು ? ವಿರಾಟ್ ಕೊಹ್ಲಿ Vs ಕೆಎಲ್ ರಾಹುಲ್ ನಡುವೆ ಬಿಗ್‌ಫೈಟ್

ಭಾರತದ ಅಂಕಿಅಂಶಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಆತಿಥೇಯ ತಂಡ 9 ಗೆಲುವು ಸಾಧಿಸಿದೆ. ಹೆಚ್ಚುವರಿಯಾಗಿ, ಅವರು ಈ ಸ್ಥಳದಲ್ಲಿ 6 ಸೋಲುಗಳು ಮತ್ತು 9 ಡ್ರಾಗಳ ದಾಖಲೆಯನ್ನು ಹೊಂದಿದ್ದಾರೆ, ಅಲ್ಲಿ ಅವರ ಇತ್ತೀಚಿನ ಮುಖಾಮುಖಿ ಶ್ರೀಲಂಕಾ ವಿರುದ್ಧ ಮಾರ್ಚ್ 2022 ರಲ್ಲಿ ನಡೆಯಿತು, ಇದು ಆತಿಥೇಯರಿಗೆ 238 ರನ್‌ಗಳ ವಿಜಯದೊಂದಿಗೆ ಕೊನೆಗೊಂಡಿತು.
ಭಾರತ vs ನ್ಯೂಜಿಲೆಂಡ್ ಟೆಸ್ಟ್ ಸರಣಿ: ತಂಡಗಳು
3 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಆಕಾಶ್ ದೀಪ್
ಮೀಸಲು ಆಟಗಾರರು : ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ಯಾದವ್ ಮತ್ತು ಪ್ರಸಿಧ್ದ ಕೃಷ್ಣ
ಇದನ್ನು ಓದಿ : IPL 2025 : ಐಪಿಎಲ್ ಹರಾಜಿಗೆ ಹೊಸ ರೂಲ್ಸ್ : ಏನಿದು 3+1 ನಿಯಮ ?
ನ್ಯೂಜಿಲೆಂಡ್ 3 ಟೆಸ್ಟ್‌ಗಳ ತಂಡ:
ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಮಾರ್ಕ್ ಚಾಪ್‌ಮನ್, ವಿಲ್ ಯಂಗ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಟಾಮ್ ಬ್ಲಂಡೆಲ್, ಅಜಾಜ್ ಪಟೇಲ್, ಬೆನ್ ಸಿಯರ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ವಿಲಿಯಮ್ ಓ’
india vs newzeland test series 1st match at chinnaswamy stadium bangalore