ದುಬೈ: (ABD Congratulates Virat Kohli ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ಎದುರಿಸುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಶತಕ ಬಾರಿಸಿದ್ದಾರೆ. ಆದರೆ ಬ್ಯಾಟಿಂಗ್’ ನಲ್ಲಲ್ಲ, ಪಂದ್ಯದಲ್ಲಿ. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯ (India Vs Pakistan Asia Cup 2022) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ (Virat Kohli) ಪಾಲಿಗೆ 100ನೇ ಪಂದ್ಯ. ಸಾಂಪ್ರದಾಯಿಕ ಎದುರಾಳಿ ವಿರುದ್ಧವೇ 100ನೇ ಟಿ20 ಪಂದ್ಯವಾಡುತ್ತಿರುವುದು ಮತ್ತಷ್ಟು ವಿಶೇಷ. ಈ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20… ಹೀಗೆ ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ 100 ಪಂದ್ಯವಾಡಿದ ಭಾರತದ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಈ ಮಹೋನ್ನತ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಗೆ, ಅವರ ಆಪ್ತಮಿತ್ರ ಎಬಿ ಡಿ’ವಿಲಿಯರ್ಸ್ (AB de Villiers) ವಿಶೇಷ ವೀಡಿಯೊ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. “ಅಂತಹ ಅದ್ಭುತ ಸಾಧನೆ.. ವಿರಾಟ್, ನಿನ್ನ ಈ ಸಾಧನೆ ನಾವೆಲ್ಲಾ ಹೆಮ್ಮೆ ಪಡುವಂತೆ ಮಾಡಿದೆ. 100ನೇ ಟಿ20 ಪಂದ್ಯದಲ್ಲಿ ನಿನ್ನ ಆಟವನ್ನು ನಾನು ಖಂಡಿತಾ ವೀಕ್ಷಿಸುತ್ತೇನೆ” ಎಂದು ವೀಡಿಯೋ ಸಂದೇಶದಲ್ಲಿ ಎಬಿ ಡಿ’ವಿಲಿಯರ್ಸ್, ವಿರಾಟ್ ಕೊಹ್ಲಿಗೆ ಅಭಿನಂದನೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ’ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 11 ವರ್ಷ ಜೊತೆಯಾಗಿ ಆಡಿದ್ದರು. ಇವರಿಬ್ಬರ ಮಧ್ಯೆ ವಿಶೇಷ ಬಾಂಧವ್ಯವಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ 102 ಟೆಸ್ಟ್, 262 ಏಕದಿನ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದ ಮೂಲಕ 100 ಟಿ20 ಪಂದ್ಯವಾಡಿದ್ದಾರೆ. ಹೀಗೆ ಒಟ್ಟು 464 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ 70 ಶತಕಗಳು ಹಾಗೂ 122 ಅರ್ಧಶತಕಗಳ ಸಹಿತ 23 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ.
India Vs Pakistan Asia Cup 2022 ABD Congratulates Virat Kohli For Hitting Century In T20