ದುಬೈ : ಟಿ 20 ವಿಶ್ವಕಪ್‌ನಲ್ಲಿಂದು ಹೈವೋಲ್ಟೇಜ್ ಪಂದ್ಯ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ವಿಶ್ವವೇ ಕುತೂಹಲ ಭರಿತವಾಗಿದೆ. ಪಾಕಿಸ್ತಾನದ ವಿರುದ್ದ ಗೆಲುವು ಸಾಧಿಸಲು ಭಾರತ ತುದಿಗಾಲಲ್ಲಿ ನಿಂತಿದೆ. ಇತಿಹಾಸದ ಪುಟಗಳತ್ತ ಕಣ್ಣು ಹಾಯಿಸಿದ್ರೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಭಾರತದ ವಿರುದ್ದ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಭಾರತ ಇಂದು ಸೆಣೆಸಾಟ ನಡೆಸಲಿದೆ. ಅಭ್ಯಾಸ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡಿರುವ ವಿರಾಟ್ ಕೊಯ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿಯೂ ಅದ್ಬುತ ಗೆಲುವಿನ ಕನಸು ಕಾಣುತ್ತಿದೆ. ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಬಲಿಷ್ಟವಾಗಿರುವ ಭಾರತದ ತಂಡ ಆಟಗಾರರು ಐಪಿಎಲ್ ಪಂದ್ಯಾವಳಿಯಲ್ಲಿಯೂ ಭರ್ಜರಿ ಆಟದ ಪ್ರದರ್ಶನ ನೀಡಿದ್ದಾರೆ.

ಪಾಕಿಸ್ತಾನ ತಂಡಕ್ಕೆ ದುಬೈ ಸ್ಟೇಡಿಯಂ ಅಚ್ಚುಮೆಚ್ಚಿನ ಮೈದಾನ. ಇತರ ತಂಡಗಳ ವಿರುದ್ದ ಪಾಕಿಸ್ತಾನ ಭರ್ಜರಿ ಆಟದ ಪ್ರದರ್ಶನವನ್ನೂ ನೀಡಿದೆ. ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ಸ್ಥಗಿತವಾದ ಬೆನ್ನಲ್ಲೇ ಪಾಕಿಸ್ತಾನ ಯುಎಜಿಯ ಅಂಗಳದಲ್ಲಿಯೇ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದೆ. ಹೀಗಾಗಿ ಪಾಕಿಸ್ತಾನಿಯರ ಪಾಲಿಗೆ ದುಬೈ ಸ್ಟೇಡಿಯಂ ಅಚ್ಚುಮೆಚ್ಚಿನ ಕ್ರೀಡಾಂಗಣ.

ಭಾರತ ಹಾಗೂ ಪಾಕಿಸ್ತಾನ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಒಟ್ಟು ಐದು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಐದು ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ, ಪಾಕಿಸ್ತಾನ ಭಾರತ ವಿರುದ್ದ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. 2007ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ 14 ಸೆಪ್ಟೆಂಬರ್ ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಟೈ ಆಗಿತ್ತು. ಈ ವೇಳೆಯಲ್ಲಿ ಬಾಲ್‌ಔಟ್ ಅವಕಾಶ ಪಡೆದ ಭಾರತ ಉತ್ತಮ ಆಟದ ಪ್ರದರ್ಶನವನ್ನು ನೀಡಿ ಗೆಲುವು ದಾಖಲಿಸಿತ್ತು. ಅಲ್ಲದೇ ಇದೇ ವಿಶ್ವಕಪ್‌ನ ಫೈನಲ್ ಪಂದ್ಯದ ಸಪ್ಟೆಂಬರ್ 24ರಂದು ನಡೆದಿತ್ತು. ಈ ವೇಳೆಯಲ್ಲಿಯೂ ಭಾರತ ಪಾಕಿಸ್ತಾನದ ವಿರುದ್ದ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು.

ನಂತರ 2012ರ ವಿಶ್ವಕಪ್ ನಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ವೇಳೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ದ 8 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ನಂತರ 2014ರ ವಿಶ್ವಕಪ್ ನಲ್ಲಿ ಭಾರತ 7 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದ್ರೆ, 2016ರ ವಿಶ್ವಕಪ್ ನಲ್ಲಿ ಪಾಕಿಸ್ತಾನ 6 ವಿಕೆಟ್‌ಗಳಿಂದ ಭಾರತ ವಿರುದ್ದ ಸೋಲನ್ನು ಕಂಡಿತ್ತು.

ಹಿಂದಿನ ದಾಖಲೆಗಳನ್ನು ನೋಡಿದ್ರೆ ಭಾರತ ತಂಡ ಪಾಕಿಸ್ತಾನದ ವಿರುದ್ದ ಗೆಲ್ಲು ಹಾಟ್ ಫೇವರೇಟ್ ತಂಡವಾಗಿದೆ. ಭಾರತ ತಂಡದಲ್ಲಿ ಬಲಿಷ್ಟ ಆಟಗಾರರಿದ್ದರೂ ಕೂಡ ಪಾಕಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಭಾರತದ ಆರಂಭಿಕರಾದ ರಾಹುಲ್ ಹಾಗೂ ರೋಹಿತ್ ಶರ್ಮಾ ಆರ್ಭಟಿಸಿದ್ರೆ ಭಾರತದ ಗೆಲುವು ಸುಲಭವಾಗಲಿದೆ.
India vs Pakistan Head to Head record in T20 World Cup history