Amit Shah : ಕಾಶ್ಮೀರದಲ್ಲಿ ಅಭಿವೃದ್ದಿ ಯೋಜನೆಗೆ ಚಾಲನೆ : ಕಾಶ್ಮೀರಿ ಪಂಡಿತರ ಬೇಟಿ ಮಾಡಲಿರುವ ಅಮಿತ್‌ ಶಾ

ಜಮ್ಮು ಕಾಶ್ಮೀರ : ಮೂರು ದಿನಗಳ ಪ್ರವಾಸಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅಮಿತ್‌ ಶಾ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಡೆಸಿ ಭಾನುವಾರ ಇತರ ಹಲವು ಯೋಜನೆಗಳ ಶಂಕುಸ್ಥಾಪನೆಯನ್ನು ನೆರೆವೇರಿಸಲಿದ್ದಾರೆ.

ಅಮಿತ್‌ ಶಾ ಭಾನುವಾರ ಬೆಳಿಗ್ಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಘಟಿಕೋತ್ಸವದಲ್ಲಿ ಭಾಗವಹಿಸಲು ಜಮ್ಮವಿಗೆ ತೆರಳಲಿದ್ದಾರೆ. ಅಮಿತ್‌ ಶಾ ಭಗವತಿ ನಗರದ ಜೆಡಿಎ ಮೈದಾನದಲ್ಲಿ ಮಧ್ಯಾನ 12.30 ಕ್ಕೆ ಸಾರ್ವಜನಿಕ ರ‍್ಯೇಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: PM Narendra Modi : 100 ಕೋಟಿ ಕೊರೊನಾ ಲಸಿಕೆ : ಇದು ಹೊಸ ಅಧ್ಯಾಯದ ಆರಂಭ, ಹೊಸ ಭಾರತ ಎಂದ ಪ್ರಧಾನಿ ನರೇಂದ್ರ ಮೋದಿ

ಕಣಿವೆಯಲ್ಲಿ ಇತ್ತೀಚಿನ ದಿನದಲ್ಲಿ ನಾಗರೀಕರ ಹತ್ಯೆಗಳು ಹೆಚ್ಚುತ್ತಿದ್ದು. ಈ ಕುರಿತು ಪಂಡಿತರ ನಿಯೋಗದೊಂದಿಗೆ ಅಮಿತ್‌ ಶಾ ಸಭೆ ನಡೆಸಲಿದ್ದಾರೆ. ಜಮ್ಮುವಿನ ಹವಾಮಾನ ಸುಧಾರಣೆಯ ಹಿನ್ನಲೆಯಲ್ಲಿ ಭಗವತಿ ನಗರದ ಜೆಡಿಎ ಮೈದಾನದಲ್ಲಿ ಸಾರ್ವಜನಿಕ ರ‍್ಯೇಲಿಯನ್ನು ಆಯೋಜಿಸಲು ಬಿಜೆಪಿ ನಿರ್ಧರಿಸಿದೆ.

ಅಮಿತ್‌ ಶಾ ಬಾನುವಾರ ಸಂಜೆ ಶ್ರೀ ನಗರಕ್ಕೆ ಹಿಂತಿರುಗಲಿದ್ದಾರೆ. ಅಗಸ್ಟ್‌ 2019 ರಲ್ಲಿ 370 ನೇ ವಿಧಿಯನ್ನು ರದ್ದು ಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನ ಮಾನವನ್ನು ತೆಗೆದು ಹಾಕಿದ ನಂತರ ಅಮಿತ್‌ ಶಾ ಮೊದಲ ಕೇಂದ್ರಾಡಳಿತ  ಪ್ರದೇಶದ ಬೇಟಿಯಾಗಿದೆ.

ಇದನ್ನೂ ಓದಿ: YS Sharmila : 4000 ಕಿಮೀ ಪಾದಯಾತ್ರೆ ಕೈಗೊಂಡ ಆಂಧ್ರ ಸಿಎಂ ಸಹೋದರಿ YS ಶರ್ಮಿಳಾ

(Amit Shah to launch development project in Kashmir: Amit Shah to be tasked with Kashmiri Pandits)

Comments are closed.