India Vs Sri Lanka 1st t20 : ಕ್ಯಾಂಡಿ: ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಟೀಮ್ ಇಂಡಿಯಾ ಪ್ರಯಾಣ ಇಂದು (ಶನಿವಾರ) ಕ್ಯಾಂಡಿಯಲ್ಲಿ ನಡೆಯುವ ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ (India Vs Sri Lanka T20) ಮೂಲಕ ಆರಂಭವಾಗಲಿದೆ.

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಾಳೆ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಇದು ಭಾರತ ಕ್ರಿಕೆಟ್ ತಂಡದ ಪೂರ್ಣಕಾಲಿಕ ಟಿ20 ನಾಯಕನಾಗಿ ಮೊದಲ ಪಂದ್ಯವಾಗಿದೆ.
ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಭಾರತ ತಂಡದ ಹೆಡ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಗೌತಮ್ ಗಂಭೀರ್, 2027ರವರೆಗೆ ಈ ಜವಾಬ್ದಾರಿಯಲ್ಲಿರಲಿದ್ದಾರೆ. ಗಂಭೀರ್ ಅವರ ಜೊತೆ ಅಸಿಸ್ಟೆಂಟ್ ಕೋಚ್’ಗಳಾಗಿ ಅಭಿಷೇಕ್ ನಾಯರ್, ನೆದರ್ಲೆಂಡ್ಸ್’ನ ರಯಾನ್ ಟೆನ್ ಡೊಸ್ಚೇಟ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಟಿ. ದಿಲೀಪ್ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ.
https://x.com/BCCI/status/1816677320905679179
ಟಿ20 ಸರಣಿಯ ನಂತರ ಭಾರತ ತಂಡ ಆತಿಥೇಯರ ವಿರುದ್ಧ 3ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಆಗಸ್ಟ್ 2ರಂದು ಕೊಲಂಬೋದಲ್ಲಿ ನಡೆಯಲಿದೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

https://x.com/BCCI/status/1816677320905679179
ಭಾರತ Vs ಶ್ರೀಲಂಕಾ ಮೊದಲ ಟಿ20
ಪಂದ್ಯ ಆರಂಭ: ಸಂಜೆ 7ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಪಲ್ಲೆಕೆಲೆ; ಕ್ಯಾಂಡಿ
ನೇರ ಪ್ರಸಾರ: ಸೋನಿ ಸ್ಟೋರ್ಟ್ಸ್ ನೆಟ್ವರ್ಕ್’ನಲ್ಲಿ (Sony Sports Network)
(ಸೋನಿ ಟೆನ್-5: ಇಂಗ್ಲಿಷ್ , ಸೋನಿ ಟೆನ್-3: ಹಿಂದಿ )
ಲೈವ್ ಸ್ಟ್ರೀಮಿಂಗ್: ಸೋನಿ ಲಿವ್ (Sony LIV)
ಇದನ್ನೂ ಓದಿ : ಮಹಾರಾಜ ಟ್ರೋಫಿ ಟಿ20 ಟೂರ್ನಿ: ಯಾವ ಆಟಗಾರ, ಯಾವ ತಂಡಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಯಾನ್ ಪರಾಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
ಭಾರತ Vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ (India Vs Sri Lanka t20 series schedule)
ಜುಲೈ 27: ಮೊದಲ ಟಿ20 ಪಂದ್ಯ (ಪಲ್ಲಕೆಲೆ)
ಜುಲೈ 28: ಎರಡನೇ ಟಿ20 ಪಂದ್ಯ (ಪಲ್ಲಕೆಲೆ)
ಜುಲೈ 30: ಮೂರನೇ ಟಿ20 ಪಂದ್ಯ (ಪಲ್ಲಕೆಲೆ)
ಇದನ್ನೂ ಓದಿ : Samit Dravid : ಮಹಾರಾಜ ಟ್ರೋಫಿ ಮೈಸೂರು ವಾರಿಯರ್ಸ್ ತಂಡ ಸೇರಿದ ರಾಹುಲ್ ದ್ರಾವಿಡ್ ಪುತ್ರ
India Vs Sri Lanka 1st t20 Match Suryakumar Leading Indian Cricket