India vs Sri Lanka : ಕೊಲಂಬೋ: ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ (India Vs Sri Lanka ODI series) ಸಜ್ಜಾಗಿದ್ದು, ಇವತ್ತು ಕೊಲಂಬೋದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ. ಇದು 2024ರಲ್ಲಿ ಭಾರತ ಆಡುತ್ತಿರುವ ಪ್ರಪ್ರಥಮ ಏಕದಿನ ಪಂದ್ಯ. ಈ ವರ್ಷದಲ್ಲಿ ಏಳು ತಿಂಗಳುಗಳು ಕಳೆದು ಹೋಗಿದ್ದರೂ ಭಾರತ ತಂಡ 2024ರಲ್ಲಿ ಇದುವರೆಗೆ ಒಂದೂ ಏಕದಿನ ಪಂದ್ಯವಾಡಿಲ್ಲ. ಶ್ರೀಲಂಕಾ ವಿರುದ್ಧ ಇಂದು ನಡೆಯಲಿರುವ ಪಂದ್ಯದ ಮೂಲಕ ಭಾರತ ವರ್ಷದ ಮೊದಲ ಏಕದಿನ ಪಂದ್ಯವಾಡಲಿದೆ.

ಹಾಗಾದರೆ ಏಕದಿನ ಕ್ರಿಕೆಟ್’ನಲ್ಲಿ ಈ ವರ್ಷ ಭಾರತ ಪರ ಮೊದಲ ಶತಕ ಬಾರಿಸುವವರು ಯಾರು? ನಾಯಕ ರೋಹಿತ್ ಶರ್ಮಾ? ಉಪನಾಯಕ ಶುಭಮನ್ ಗಿಲ್? ರನ್ ಮಷಿನ್ ವಿರಾಟ್ ಕೊಹ್ಲಿ? ಅಥವಾ ಕನ್ನಡಿಗ ಕೆ.ಎಲ್ ರಾಹುಲ್? ಯಾರೇ ಶತಕ ಬಾರಿಸಿದರೂ 2024ರಲ್ಲಿ ಭಾರತ ಪರ ಅದು ಮೊದಲ ಏಕದಿನ ಶತಕವಾಗಿ ದಾಖಲಾಗಲಿದೆ.
ಇದನ್ನೂ ಓದಿ : MS Dhoni IPL 2025 : ಐಪಿಎಲ್-2025ರಲ್ಲಿ ಆಡಲಿದ್ದಾರೆ ‘ತಲಾ’ ಧೋನಿ, ಆದರೆ ಕಂಡಿಷನ್ ಅಪ್ಲೈ
2010ರಿಂದ 2023ರವರೆಗೆ ವಿರಾಟ್ ಕೊಹ್ಲಿ ಒಟ್ಟು ಐದು ಬಾರಿ (2012, 2014, 2017, 2018, 2023) ಭಾರತ ಪರ ವರ್ಷದ ಮೊದಲ ಏಕದಿನ ಶತಕ ಬಾರಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ನಾಲ್ಕು ಬಾರಿ (2015, 2016, 2019, 2020) ಈ ಸಾಧನೆ ಮಾಡಿದ್ದರೆ, ಕನ್ನಡಿಗ ಕೆ.ಎಲ್ ರಾಹುಲ್ 2021ರಲ್ಲಿ ಭಾರತ ಪರ ವರ್ಷದ ಮೊದಲ ಏಕದಿನ ಶತಕ ಸಿಡಿಸಿದ್ದರು. ಕಳೆದ ಆರು ತಿಂಗಳುಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ದೂರ ಉಳಿದಿದ್ದ ಕೆ.ಎಲ್ ರಾಹುಲ್, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ : Rahul Dravid Paris Olympics 2024 : ಬಾಲ್ಯದಲ್ಲಿ ಆಡಿದ ಕ್ರೀಡೆಯನ್ನು ಒಲಿಂಪಿಕ್ಸ್’ನಲ್ಲಿ ವೀಕ್ಷಿಸಿದ ರಾಹುಲ್ ದ್ರಾವಿಡ್
2023ರ ಡಿಸೆಂಬರ್ 21ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಾರ್ಲ್’ನಲ್ಲಿ ನಡೆದ ಏಕದಿನ ಪಂದ್ಯದ ನಂತರ ರಾಹುಲ್ ಭಾರತ ಪರ ಯಾವುದೇ ಏಕದಿನ ಪಂದ್ಯವಾಡಿಲ್ಲ. ಇನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಕೂಡ 2023ರ ನವೆಂಬರ್ 19ರಂದು ಅಹ್ಮದಾಬಾದ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ನಂತರ ಮತ್ತೆ ಏಕದಿನ ಕ್ರಿಕೆಟ್’ನಲ್ಲಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
2010ರಿಂದ 2023: ಭಾರತ ಪರ ಏಕದಿನ ಕ್ರಿಕೆಟ್’ನಲ್ಲಿ ಮೊದಲ ಶತಕ ಬಾರಿಸಿದವರು
2010 – ಎಂ.ಎಸ್ ಧೋನಿ
2011 – ಯೂಸುಫ್ ಪಠಾಣ್
2012 – ವಿರಾಟ್ ಕೊಹ್ಲಿ
2013 – ಶಿಖರ್ ಧವನ್
2014 – ವಿರಾಟ್ ಕೊಹ್ಲಿ
2015 – ರೋಹಿತ್ ಶರ್ಮಾ
2016 – ರೋಹಿತ್ ಶರ್ಮಾ
2017 – ವಿರಾಟ್ ಕೊಹ್ಲಿ
2018 – ವಿರಾಟ್ ಕೊಹ್ಲಿ
2019 – ರೋಹಿತ್ ಶರ್ಮಾ
2020 – ರೋಹಿತ್ ಶರ್ಮಾ
2021 – ಕೆ.ಎಲ್ ರಾಹುಲ್
2022 – ರಿಷಭ್ ಪಂತ್
2023 – ವಿರಾಟ್ ಕೊಹ್ಲಿ
2024 – ???
India vs Sri Lanka Who scored the first century for India in ODIs this year 2024 ?