ಸೋಮವಾರ, ಏಪ್ರಿಲ್ 28, 2025
HomeSportsCricketIndia vs West Indies : ವೆಸ್ಟ್‌ ಇಂಡಿಸ್‌ಗೆ ವೈಟ್‌ವಾಷ್‌ ಭೀತಿ : ಹೇಗಿದೆ...

India vs West Indies : ವೆಸ್ಟ್‌ ಇಂಡಿಸ್‌ಗೆ ವೈಟ್‌ವಾಷ್‌ ಭೀತಿ : ಹೇಗಿದೆ ಗೊತ್ತಾ ಟೀಂ ಇಂಡಿಯಾ ಪ್ಲೇಯಿಂಗ್‌ XI

- Advertisement -

ವೆಸ್ಟ್‌ ಇಂಡಿಸ್‌ ವಿರುದ್ದ ಭಾರತ (india vs West Indies) ಇಂದು ಅಂತಿಮ ಏಕದಿನ ಪಂದ್ಯವನ್ನು (IND vs WI T20) ಆಡಲಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ. ಸತತ ಎರಡು ಪಂದ್ಯಗಳನ್ನು ಜಯಿಸಿರುವ ಭಾರತ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವೈಟ್‌ವಾಷ್‌ ಮಾಡುವ ತವಕದಲ್ಲಿದೆ. ಆದರೆ ಅನುಭವಿ ಆಟಗಾರರಾಗಿರುವ ವಿರಾಟ್‌ ಕೊಹ್ಲಿ, ರಿಷಬ್‌ ಪಂತ್‌ ಅಂತಿಮ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ರುತುರಾಜ್‌ ಗಾಯಕ್ವಾಡ್‌ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.

ವೆಸ್ಟ್‌ ಇಂಡಿಸ್‌ ವಿರುದ್ದದ ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರಿಷಬ್‌ ಪಂತ್‌ ಅರ್ಧ ಶತಕ ಸಿಡಿಸಿದ್ದರು. ಕೆ.ಎಲ್.ರಾಹುಲ್‌ ಹಾಗೂ ಶಿಖರ್‌ ಧವನ್‌ ಅಲಭ್ಯರಾದ ಹಿನ್ನೆಲೆಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆಗೆ ಇಶನ್‌ ಕಿಶನ್‌ ಕಣಕ್ಕೆ ಇಳಿದಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಪಂತ್‌, ಕೊಹ್ಲಿ ಅಲಭ್ಯರಾದ ಬೆನ್ನಲ್ಲೇ ಭಾರತ ಆಡುವ ಬಳಗದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಿದೆ. ಆರಂಭಿಕರಾಗಿ ಕಿಶನ್‌ ಬದಲು ರುತುರಾಜ್‌ ಗಾಯಕ್ವಾಡ್‌ ರೋಹಿತ್‌ ಶರ್ಮಾ ಜೊತೆಗೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಕೊಹ್ಲಿ ಬದಲು ಒಂದನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಕಣಕ್ಕೆ ಇಳಿಯಲಿದ್ರೆ, ನಂತರದಲ್ಲಿ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ವೆಂಕಟೇಶ್‌ ಅಯ್ಯರ್‌ ಬ್ಯಾಟಿಂಗ್‌ ನಡೆಸಲಿದ್ದಾರೆ. ಇನ್ನು ಆವೇಶ್‌ ಖಾನ್‌ ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಟೀಂ ಇಂಡಿಯಾ ಆಯ್ಕೆ ಸಮಿತಿ ಹೊಸ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಈಗಾಗಲೇ ವೆಸ್ಟ್‌ ಇಂಡಿಸ್‌ ವಿರುದ್ದದ ಅಂತಿಮ ಪಂದ್ಯ ಹಾಗೂ ಶ್ರೀಲಂಕಾ ವಿರುದ್ದದ ಸರಣಿಗೆ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌, ಕೆ.ಎಲ್.ರಾಹುಲ್‌, ರಿಷಬ್‌ ಪಂತ್‌ ಅವರಿಗೆ ವಿಶ್ರಾಂತಿಯನ್ನು ನೀಡಿದೆ. ಜೊತೆಗೆ ರೋಹಿತ್‌ ಶರ್ಮಾ ಅವರೇ ಟೆಸ್ಟ್‌ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ವೆಸ್ಟ್‌ ಇಂಡಿಸ್‌ ವಿರುದ್ದದ ಪಂದ್ಯದ ವೇಳೆಯಲ್ಲಿ ಕೆ.ಎಲ್.ರಾಹುಲ್‌ ಗಾಯಗೊಂಡಿದ್ದರು. ಇದೀಗ ವಿಶ್ರಾಂತಿ ಪಡೆಯುತ್ತಿರುವ ರಾಹುಲ್‌, ಶ್ರೀಲಂಕಾ ವಿರುದ್ದದ ಸರಣಿಗೂ ಅಲಭ್ಯರಾಗಿದ್ದಾರೆ. ಹಿರಿಯ ಆಟಗಾರರ ಅಲಭ್ಯತೆಯ ನಡುವಲ್ಲೇ ಕಿರಿಯ ಆಟಗಾರರಿಗೆ ಅವಕಾಶ ದೊರೆಯಲಿದ್ದು, ಭವಿಷ್ಯದಲ್ಲಿ ಭಾರತ ತಂಡಕ್ಕೆ ಈ ಸರಣಿ ಉತ್ತಮ ವೇದಿಕೆಯಾಗಲಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI : ರುತುರಾಜ್ ಗಾಯಕ್ವಾಡ್, ರೋಹಿತ್ ಶರ್ಮಾ (ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ರವಿ ಬಿಷ್ಟೋಯ್, ಕುಲ್ದೀಪ್ ಯಾದವ್, ಆವೇಶ್ ಖಾನ್.

ಇದನ್ನೂ ಓದಿ : IPL 2022 RCB captain : ಆರ್‌ಸಿಬಿಗೆ ಯಾರು ನಾಯಕ : ಹೇಗಿರಲಿದೆ ಗೊತ್ತಾ ತಂಡ

ಇದನ್ನೂ ಓದಿ : ಭಾರತ ತಂಡ ಪ್ರಕಟ : ವಿರಾಟ್ ಕೊಹ್ಲಿ, ರಾಹುಲ್, ರಹಾನೆ, ಪೂಜಾರ, ಪಂತ್ ಗೆ ಕೋಕ್‌

(india vs West Indies 3rd T20 Playing XI Ruturaj Gaikwad and Avesh Khan to Play )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular