ಸೋಮವಾರ, ಏಪ್ರಿಲ್ 28, 2025
HomeSportsCricketಮಿಯಾಮಿ ಬೀಚ್‌ನಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬಿಂದಾಸ್ ಎಂಜಾಯ್

ಮಿಯಾಮಿ ಬೀಚ್‌ನಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬಿಂದಾಸ್ ಎಂಜಾಯ್

- Advertisement -

ಮಿಯಾಮಿ: (India vs West Indies T20 Series) ಭಾರತ ಕ್ರಿಕೆಟ್ ತಂಡದ ಸದ್ಯ ಅಮೆರಿಕದ ಫ್ಲೋರಿಡಾದಲ್ಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ 4 ಹಾಗೂ 5ನೇ ಟಿ20 ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ 3 ಪಂದ್ಯಗಳು ಕೆರಿಬಿಯನ್ ನಾಡಿನಲ್ಲಿ ನಡೆದಿದ್ದು, ಕೊನೆಯ 2 ಪಂದ್ಯಗಳನ್ನಾಡಲು ಟೀಮ್ ಇಂಡಿಯಾ ಅಮೆರಿಕದ ಫ್ಲೋರಿಡಾಗೆ ಬಂದಿಳಿದಿದೆ. 4 ಹಾಗೂ 5ನೇ ಪಂದ್ಯ ಶನಿವಾರ ಮತ್ತು ಭಾನುವಾರ ಲಾಡೆರ್’ಹಿಲ್ ಮೈದಾನದಲ್ಲಿ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲ ಆಟಗಾರರು ಫ್ಲೋರಿಡಾದ ಮಿಯಾಮಿ ಬೀಚ್’ನಲ್ಲಿ (Miami Beach) ಎಂಜಾಯ್ ಮಾಡಿದ್ದಾರೆ.

https://www.instagram.com/p/Cg1q7rNOZ6B/?igshid=YmMyMTA2M2Y=

ಮಿಯಾಮಿ ಬೀಚ್ ಜಗತ್ತಿನ ಖ್ಯಾತ ಪ್ರವಾಸಿ ತಾಣಗಳಲ್ಲೊಂದು. ಈ ಬೀಚ್”ನಲ್ಲಿ ಮುಳುಗೇಳಲು ವಿಶ್ವದ ನಾನಾ ಕಡೆಯಿಂದ ಪ್ರವಾಸಿಗರು ಬರುತ್ತದೆ. ಅಂತಹ ವಿಶ್ವವಿಖ್ಯಾತ ಬೀಚ್’ನಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಎಂಜಾಯ್ ಮಾಡಿದ್ದಾರೆ. ಈ ಚಿತ್ರಗಳನ್ನು ಸ್ವತಃ ಕ್ರಿಕೆಟಿಗರೇ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಮಿಯಾಮಿ ಬೀಚ್ ಪಕ್ಕದಲ್ಲಿ ವಾಕಿಂಗ್ ಮಾಡುತ್ತಿರುವ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2-1ರ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ 68 ರನ್’ಗಳಿಂದ ಗೆದ್ದಿದ್ರೆ, 2ನೇ ಪಂದ್ಯವನ್ನು ವೆಸ್ಟ್ ಇಂಡೀಸ್ 5 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು. 3ನೇ ಪಂದ್ಯವನ್ನು 7 ವಿಕೆಟ್’ಗಳಿಂದ ಭರ್ಜರಿಯಾಗಿ ಗೆದ್ದಿದ್ದ ರೋಹಿತ್ ಶರ್ಮಾ ಬಳಗ ಸರಣಿ ಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು.


ಫ್ಲೋರಿಡಾದಲ್ಲಿ ನಡೆಯುವ 4ನೇ ಪಂದ್ಯವನ್ನೂ ಟೀಮ್ ಇಂಡಿಯಾ ಗೆದ್ದಲ್ಲಿ, ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನೂ ಕೈವಶ ಮಾಡಿಕೊಳ್ಳಲಿದೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಶಿಖರ್ ಧವನ್ ನಾಯಕತ್ವದಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಇದನ್ನೂ ಓದಿ : KL Rahul set to India Comeback : ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ ಕೆ.ಎಲ್ ರಾಹುಲ್, ಮಹತ್ವದ ಮಾಹಿತಿ ಕೊಟ್ಟ ಬಿಸಿಸಿಐ

ಇದನ್ನೂ ಓದಿ : India Vs Pakistan : ಭಾರತ Vs ಪಾಕಿಸ್ತಾನ 3 ಪಂದ್ಯ.. ಕ್ರಿಕೆಟ್ ಪ್ರಿಯರಿಗೆ ಡಬಲ್ ಧಮಾಕಾ ಪಕ್ಕಾ

India vs West Indies T20 Series Hardik Pandya, Shreyas Iyer, Suryakumar Yadav Enjoy Bindas at Miami Beach

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular