India Vs West Indies T20: ಸರಣಿ ಸೋಲಿನ ಭೀತಿಯಲ್ಲಿ ಟೀಮ್ ಇಂಡಿಯಾ, ಇವತ್ತು ಡೆಬ್ಯೂ ಮಾಡ್ತಾನಾ ಪಾನಿಪೂರಿ ಹುಡುಗ?

ಗಯಾನ: ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಪ್ರವಾಸಿ ಭಾರತ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ (India Vs West Indies T20) 3ನೇ ಪಂದ್ಯ ಇಂದು (ಮಂಗಳವಾರ) ಗಯಾನಾದಲ್ಲಿರುವ ಪ್ರೊವಿಡೆನ್ಸ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಮೊದಲರೆಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ, ಸರಣಿಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ 3ನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ಸತತ 3ನೇ ಟಿ20ಯನ್ನೂ ಗೆಲ್ಲುವ ಮೂಲಕ ಭಾರತ ವಿರುದ್ಧ ಐತಿಹಾಸಿಕ ಸರಣಿ ಗೆಲುವನ್ನು ಎದುರು ನೋಡುತ್ತಿದೆ.

ಭಾರತಕ್ಕೆ 3ನೇ ಟಿ20 ಪಂದ್ಯವನ್ನು ಗೆಲ್ಲಬೇಕಿರುವುದು ನಿರ್ಣಾಯಕ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸತತ ವೈಫಲ್ಯ ಕಂಡಿರುವ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಅವರ ಬದಲು ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವಾಡಿದ್ದ ಜೈಸ್ವಾಲ್, ಪದಾರ್ಪಣೆಯ ಟೆಸ್ಟ್’ನಲ್ಲೇ ಅಮೋಘ ಶತಕ ಬಾರಿಸಿದ್ದರು. ಇದೀಗ ಮುಂಬೈನ ಪಾನಿಪೂರಿ ಹುಡುಗು ಟಿ20 ಪದಾರ್ಪಣೆಯನ್ನು ಎದುರು ನೋಡುತ್ತಿದ್ದಾರೆ.

ಮತ್ತೊಬ್ಬ ಎಡಗೈ ಓಪನರ್, ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಗೆ ವಿಶ್ರಾಂತಿ ನೀಡಿದರೆ, ಆಗಲೂ ಜೈಸ್ವಾಲ್ ಆಡುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ಹೈದರಾಬಾದ್’ನ ಯುವ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ ಭಾರತದ ಬ್ಯಾಟಿಂಗ್ ಭರವಸೆಯಾಗಿದ್ದಾರೆ. ಇದೇ ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 21 ವರ್ಷದ ತಿಲಕ್ ವರ್ಮಾ, 2ನೇ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ಬಾರಿಸಿದ್ದರು. ಇದನ್ನೂ ಓದಿ : Daniel Vettori : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್ ಸನ್ ರೈಸರ್ಸ್ ತಂಡಕ್ಕೆ ನೂತನ ಹೆಡ್ ಕೋಚ್

ಭಾರತ Vs ವೆಸ್ಟ್ ಇಂಡೀಸ್ 3 ಟಿ20 ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಪ್ರೊವಿಡೆನ್ಸ್ ಮೈದಾನ, ಗಯಾನ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ, ಫ್ಯಾನ್ ಕೋಡ್

ವೆಸ್ಟ್ ಇಂಡೀಸ್ 3 ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI

  1. ಇಶಾನ್ ಕಿಶನ್(ವಿಕೆಟ್ ಕೀಪರ್)
  2. ಯಶಸ್ವಿ ಜೈಸ್ವಾಲ್
  3. ಸೂರ್ಯಕುಮಾರ್ ಯಾದವ್
  4. ತಿಲಕ್ ವರ್ಮಾ
  5. ಹಾರ್ದಿಕ್ ಪಾಂಡ್ಯ (ನಾಯಕ)
  6. ಸಂಜು ಸ್ಯಾಮ್ಸನ್
  7. ಅಕ್ಷರ್ ಪಟೇಲ್
  8. ಯುಜ್ವೇಂದ್ರ ಚಹಲ್
  9. ರವಿ ಬಿಷ್ಣೋಯ್
  10. ಅರ್ಷದೀಪ್ ಸಿಂಗ್
  11. ಉಮ್ರಾನ್ ಮಲಿಕ್

India Vs West Indies T20: Team India in fear of losing the series, will the Panipuri boy make his debut today?

Comments are closed.