ಡೊಮಿನಿಕಾ : ಭಾರತ ಮತ್ತು ವೆಸ್ಟ್ ಇಂಡೀಸ್ (India Vs West Indies test series) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಮುಂದಿನ ಸಾಲಿನ ನೂತನ 2023-25ನೇ ಸಾಲಿನ WTC ಋತುವನ್ನು ಆರಂಭಿಸಲಿದೆ. ವಿಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರೀಮ್11 (Dream11ಟೈಟಲ್ ಪ್ರಾಯೋಜಕತ್ವದ ಹೊಸ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಹೊಸ ಜರ್ಸಿಯಲ್ಲಿ ಭಾರತ ತಂಡದ ಆಟಗಾರರ ಫೋಟೋಶೂಟ್ ಮುಗಿದಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟೀಮ್ ಇಂಡಿಯಾ ಟೈಟಲ್ ಸ್ಪಾನ್ಸರ್’ಷಿಪ್ ಅನ್ನು ಡ್ರೀಮ್11 ಸಂಸ್ಥೆ 3 ವರ್ಷಗಳ ಅವಧಿಗೆ ಪಡೆದುಕೊಂಡಿದೆ. ಟೀಮ್ ಇಂಡಿಯಾದ ಟೈಟಲ್ ಸ್ಪಾನ್ಸರ್’ಷಿಪ್’ಗ ಬಿಸಿಸಿಐ 350 ಕೋಟಿ ರೂ.ಗಳ ಮೂಲಬೆಲೆ ನಿಗದಿ ಪಡಿಸಿತ್ತು. 2022ರಿಂದ 2023ರವರೆಗೆ ಬೈಜುಸ್ ಕಂಪನಿ ಟೀಮ್ ಇಂಡಿಯಾದ ಟೈಟಲ್ ಸ್ಪಾನ್ಸರ್ ಆಗಿತ್ತು. ದ್ವಿಪಕ್ಷೀಯ ಸರಣಿಯ ಪ್ರತೀ ಪಂದ್ಯಗಳಿಗೆ 5.5 ಕೋಟಿ ರೂ. ಹಾಗೂ ಐಸಿಸಿ ಆಯೋಜಿಸುವ ಟೂರ್ನಿಗಳ ಪಂದ್ಯಗಳಿಗೆ ಬೈಜುಸ್ 1.7 ಕೋಟಿ ರೂ.ಗಳನ್ನ ಐದು ವರ್ಷಗಳ ಕಾಲ ಬಿಸಿಸಿಐಗೆ ಬೈಜುಸ್ ಪಾವತಿ ಮಾಡಿತ್ತು.
ಆದರೆ ಈ ಬಾರಿ ಟೀಮ್ ಇಂಡಿಯಾ ಸ್ಪಾನ್ಸರ್’ಷಿಪ್ ಪಡೆಯಲು ಕಾರ್ಪೊರೆಟ್ ಕಂಪನಿಗಳು ನಿರಾಸಕ್ತಿ ತೋರಿದ ಕಾರಣ ಮೂಲಬೆಲೆಯನ್ನು 350 ಕೋಟಿಗೆ ಇಳಿಸಲಾಗಿತ್ತು. ಅದರಂತೆ ದ್ವಿಪಕ್ಷೀಯ ಸರಣಿಗಳ ಪ್ರತೀ ಪಂದ್ಯಗಳಿಗೆ 3 ಕೋಟಿ ರೂ. ಹಾಗೂ ಐಸಿಸಿ ಪಂದ್ಯಗಳಿಗೆ 1 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿತ್ತು. ಭಾರತದ ಫ್ಯಾಂಟಸಿ ಯೂನಿಕಾರ್ನ್ ಕಂಪನಿಯಾಗಿರುವ ಡ್ರೀಮ್11 2018ರಿಂದ ಐಪಿಎಲ್ ಪ್ರಾಯೋಜಕತ್ವ ಹೊಂದಿದೆ. 2020ರಲ್ಲಿ ಡ್ರೀಮ್11 ಐಪಿಎಲ್’ನ ಟೈಟಲ್ ಸ್ಪಾನ್ಸರ್’ಷಿಪ್ ಪಡೆದುಕೊಂಡಿತ್ತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ಗೂ ಮುನ್ನ ಟೀಮ್ ಇಂಡಿಯಾ ಕಿಟ್ ಸ್ಪಾನ್ಸರ್ ಆಗಿ ಖ್ಯಾತ ಅಂತರಾಷ್ಟ್ರೀಯ ಕಂಪನಿ ಅಡಿಡಾಸ್ ಜೊತೆ ಬಿಸಿಸಿಐ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು.
ಇದನ್ನೂ ಓದಿ : India Vs West Indies 1st test : ನಾಳೆಯಿಂದ ಇಂಡಿಯಾ Vs ವಿಂಡೀಸ್ ಪ್ರಥಮ ಟೆಸ್ಟ್, WTC ಸೈಕಲ್’ನಲ್ಲಿ ಭಾರತಕ್ಕೆ ಮೊದಲ ಚಾಲೆಂಜ್
ಭಾರತ ಕ್ರಿಕೆಟ್ ತಂಡದ ಟೈಟಲ್ ಸ್ಪಾನ್ಸರ್’ಗಳು
- ವಿಲ್ಸ್ (Wills): 1990s
- ಐಟಿಸಿ (ITC): 1999s
- ಸಹರಾ ಗ್ರೂಪ್ (Sahara Group): 2002-2023
- ಸ್ಟಾರ್ ಇಂಡಿಯಾ (Star India): 2014-2017
- ಒಪ್ಪೊ (OPPO): 2017-2022
- ಬೈಜುಸ್ (Byju’s): 2022-23
- ಡ್ರೀಮ್11 (Dream11): 2023-26
India Vs West Indies test series: Team India players who shined in Dream11 jersey, start a new journey from tomorrow