ಹರಾರೆ: (Sanju Samson) ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ತಮ್ಮದು ಮಾನವೀಯ ಮೌಲ್ಯಗಳಿಗೆ ಮಿಡಿಯುವ ಹೃದಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ತಂಡ (India Vs Zimbabwe ODI Series) ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದ್ದು, ಮೊದಲೆರಡು ಪಂದ್ಯಗಳನ್ನು ಈಗಾಗಲೇ ಗೆದ್ದಿರುವ ಟೀಮ್ ಇಂಡಿಯಾ 2-0 ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ.
ಶನಿವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 43 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್ ಭಾರತಕ್ಕೆ 5 ವಿಕೆಟ್’ಗಳ ಸುಲಭ ಜಯ ತಂದುಕೊಟ್ಟಿದ್ದರು. ವಿಕೆಟ್ ಕೀಪಿಂಗ್’ನಲ್ಲೂ ಮಿಂಚಿದ್ದ ಸ್ಯಾಮ್ಸನ್ 3 ಕ್ಯಾಚ್’ಗಳನ್ನು ಪಡೆಯುವುದರೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂದ್ಯದ ನಂತರ ನಡೆದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಸಂಜು ಸ್ಯಾಮ್ಸನ್, ಕ್ಯಾನ್ಸರ್ ಪೀಡಿತ ಸ್ಥಳೀಯ ಹುಡುಗನೊಬ್ಬನನ್ನು ಭೇಟಿ ಮಾಡಿದ್ದಾರೆ. ಪಂದ್ಯ ವೀಕ್ಷಿಸಲು ಬಂದಿದ್ದ ಪುಟ್ಟ ಹುಡುಗನನ್ನು ಭೇಟಿ ಮಾಡಿದ ಸ್ಯಾಮ್ಸನ್, ತಮ್ಮ ಆಟೋಗ್ರಾಫ್ ಇರುವ ಚೆಂಡನ್ನು ಆ ಹುಡುಗನಿಗೆ ಉಡುಗೊರೆಯಾಗಿ ನೀಡಿದರು.
Above all, this gesture won my heart ❤️ #SanjuSamson pic.twitter.com/T806YiDMBG
— Dr Anandu Raj (@ANANDUR41659214) August 20, 2022
ಸ್ಯಾಮ್ಸನ್ ಅವರಿಂದ ಚೆಂಡು ಗಿಫ್ಟ್ ಪಡೆದ ಹುಡುಗ, ಚೆಂಡಿಗೆ ಮುತ್ತಿಕ್ಕುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾನೆ. ಇದನ್ನು
ಜಿಂಬಾಬ್ವೆ ವಿರುದ್ಧದ 2ನೇ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದ 27 ವರ್ಷದ ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ 3 ಬೌಂಡರಿಗಳು ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 43 ರನ್ ಸಿಡಿಸಿದ್ದರು. ಜಗತ್ತಿನ ಶ್ರೇಷ್ಠ ಮ್ಯಾಚ್ ಫಿನಿಷರ್ ಎಂ.ಎಸ್ ಧೋನಿ ಅವರ ಶೈಲಿಯಲ್ಲೇ ಸಿಕ್ಸರ್ ಸಿಡಿಸಿದ್ದ ಸ್ಯಾಮ್ಸನ್ ಭಾರತಕ್ಕೆ ಜಯ ತಂದುಕೊಟ್ಟಿದ್ದರು.
3 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆಯಲ್ಲಿದ್ದು, ಸೋಮವಾರ ನಡೆಯುವ 3ನೇ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ಗುರಿಯಲ್ಲಿದೆ. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿರುವ ಮಹಾರಾಷ್ಟ್ರ ಆಟಗಾರ ರಾಹುಲ್ ತ್ರಿಪಾಠಿ ಮತ್ತು RCB ಆಟಗಾರ ಶಹಬಾಜ್ ಅಹ್ಮದ್ 3ನೇ ಪಂದ್ಯದಲ್ಲಿ ಅವಕಾಶ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : KL Rahul success in captaincy: ಬ್ಯಾಟಿಂಗ್‌ನಲ್ಲಿ ಫೆಲ್ಯೂರ್, ಕ್ಯಾಪ್ಟನ್ಸಿಯಲ್ಲಿ ಸಕ್ಸಸ್, ರಾಹುಲ್ ನಾಯಕತ್ವಕ್ಕೆ ಮೊದಲ ಸರಣಿ ಜಯ
ಇದನ್ನೂ ಓದಿ : Deepak Hooda : ದೀಪಕ್ ಹೂಡ ವಿನೂತನ ವಿಶ್ವದಾಖಲೆ, ಪ್ಲೇಯಿಂಗ್ XIನಲ್ಲಿದ್ದಾಗ ಸತತ 16 ಪಂದ್ಯಗಳಲ್ಲಿ ಗೆಲುವು
India Vs Zimbabwe ODI Series Sanju Samson gave courage to a boy with cancer