ಮಂಗಳವಾರ, ಏಪ್ರಿಲ್ 29, 2025
HomeSportsCricketTwitter hail KL Rahul : ರಾಷ್ಟ್ರಗೀತೆಗೂ ಮುನ್ನ ಬಾಯಲ್ಲಿದ್ದ ಚ್ಯುಯಿಂಗ್ ಗಮ್ ಉಗಿದ ರಾಹುಲ್,...

Twitter hail KL Rahul : ರಾಷ್ಟ್ರಗೀತೆಗೂ ಮುನ್ನ ಬಾಯಲ್ಲಿದ್ದ ಚ್ಯುಯಿಂಗ್ ಗಮ್ ಉಗಿದ ರಾಹುಲ್, ಟ್ವಿಟರ್‌ನಲ್ಲಿ ಕನ್ನಡಿಗನಿಗೆ ಶಹಬ್ಬಾಸ್‌ಗಿರಿ

- Advertisement -

ಹರಾರೆ: (Twitter hail KL Rahul) ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಎಲ್ಲೇ ಇದ್ರೂ, ಯಾವುದೇ ಸ್ಥಿತಿಯಲ್ಲಿದ್ರೂ ರಾಷ್ಟ್ರಗೀತೆ ಮೊಳಗುವ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸಲ್ಲಿಸಲಾಗುತ್ತದೆ. ಜಿಂಬಾಬ್ವೆ ಪ್ರವಾಸದಲ್ಲಿರುವ (India Vs Zimbabwe ODI Series) ಭಾರತ ತಂಡದ ನಾಯಕ ಕೆ.ಎಲ್ ರಾಹುಲ್ ರಾಷ್ಟ್ರಗೀತೆಗೂ ಮುನ್ನ ತೋರಿದ ನಡವಳಿಕೆ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಎರಡೂ ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಮೊಳಗಿಸಲಾಯಿತು. ಭಾರತದ ರಾಷ್ಟ್ರಗೀತೆ ಆರಂಭಕ್ಕೂ ಮೊದಲು ನಾಯಕ ರಾಹುಲ್ ಬಾಯಲ್ಲಿ ಚ್ಯುಯಿಂಗ್ ಗಮ್ ಹಾಕಿಕೊಂಡಿದ್ರು. ಆದ್ರೆ “ಈಗ ಭಾರತದ ರಾಷ್ಟ್ರಗೀತೆ ಮೊಳಗಲಿದೆ” ಎಂದ ಸಂದೇಶ ಕೇಳುತ್ತಲೇ, ಬಾಯಲ್ಲಿದ್ದ ಚ್ಯುಯಿಂಗ್ ಗಮ್ ಅನು ಉಗಿದ ರಾಹುಲ್, ನಂತರ ರಾಷ್ಟ್ರಗೀತೆ ಹಾಡಿದ್ದಾರೆ. ಆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/AryanMane45/status/1560163019421757441?s=20&t=aaVJlZzRWm4px6M52oLPLw

ಕೆ.ಎಲ್ ರಾಹುಲ್ ಅವರ ಈ ನಡವಳಿಕೆಗೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ನಿಜವಾದ ಜಂಟಲ್’ಮ್ಯಾನ್ ಎಂದು ಬಣ್ಣಿಸಿದ್ದಾರೆ.

ನಂತರ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ, ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 40.3 ಓವರ್’ಗಳಲ್ಲಿ 189 ರನ್ನಿಗೆ ಆಲೌಟಾಯಿತು. ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ ಬಲಗೈ ಸ್ವಿಂಗ್ ಬೌಲರ್ ದೀಪಕ್ ಚಹರ್ 27 ರನ್ನಿತ್ತು 3 ವಿಕೆಟ್ ಪಡೆದರೆ, ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ (3/50) ಹಾಗೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (3/24) ಕೂಡ ತಲಾ ಮೂರು ವಿಕೆಟ್ ಉರುಳಿಸಿದರು.

ಸುಲಭ ಗುರಿ ಬೆನ್ನಟ್ಟಿದ ಭಾರತ ಆರಂಭಿಕರಾದ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಅವರ ಅಮೋಘ ಆಟದ ನೆರವಿನಿಂದ 30.5 ಓವರ್’ಗಳಲ್ಲಿ 192 ರನ್ ಗಳಿಸಿ ನಿರಾಯಾಸದ ಗೆಲುವು ದಾಖಲಿಸಿತು. ಅನುಭವಿ ಓಪನರ್ ಶಿಖರ್ ಧವನ್ 113 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದ್ರೆ, ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಕೇವಲ 72 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು. ಸರಣಿಯ 2ನೇ ಪಂದ್ಯ ಶನಿವಾರ ನಡೆಯಲಿದೆ.

ಇದನ್ನೂ ಓದಿ : Virat Kohli Fitness Secret : “ಜಪ್ಪಯ್ಯ ಅಂದ್ರೂ ಅದನ್ನು ತಿನ್ನಲ್ಲ..” ಬಯಲಾಯ್ತು ವಿರಾಟ್ ಕೊಹ್ಲಿಯ ಫಿಟ್’ನೆಸ್ ಸೀಕ್ರೆಟ್

ಇದನ್ನೂ ಓದಿ : Sachin Tendulkar Vs Virat Kohli : ಸಚಿನ್‌ ತೆಂಡೂಲ್ಕರ್ ಮತ್ತು ವಿರಾಟ್‌ ಕೊಹ್ಲಿ 14 ವರ್ಷಗಳ ನಂತರ ಯಾರು ಗ್ರೇಟ್ ?

India Vs Zimbabwe ODI Series Twitter hail KL Rahul

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular