ಭಾನುವಾರ, ಜೂನ್ 15, 2025
HomeSportsCricketIndia Vs Zimbabwe: ಭಾರತ Vs ಜಿಂಬಾಬ್ವೆ, ಇಂದು 4ನೇ ಟಿ20 ಪಂದ್ಯ, ಇಂದೇ ಸರಣಿ...

India Vs Zimbabwe: ಭಾರತ Vs ಜಿಂಬಾಬ್ವೆ, ಇಂದು 4ನೇ ಟಿ20 ಪಂದ್ಯ, ಇಂದೇ ಸರಣಿ ಗೆಲ್ಲುತ್ತಾ ಯಂಗ್ ಇಂಡಿಯಾ ?

- Advertisement -

India Vs Zimbabwe Series 4th T20 Match Playing XI : ಹರಾರೆ – ಆತಿಥೇಯ ಜಿಂಬಾಬ್ವೆ ಮತ್ತು ಪ್ರವಾಸಿ ಭಾರತ ಕ್ರಿಕೆಟ್ ತಂಡ‌ಗಳ (India Vs Zimbabwe) ನಡುವಿನ ಐದು ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯ ಇಂದು (ಶನಿವಾರ) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಸೋತಿದ್ದ ಶುಭಮನ್ ಗಿಲ್ (Shubman Gill) ನಾಯಕತ್ವದ ಭಾರತ, ನಂತರದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶನಿವಾರ ನಡೆಯುವ 4ನೇ ಪಂದ್ಯವನ್ನು ಗೆದ್ದರೆ ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಯಂಗ್ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳಲಿದೆ.

India Vs Zimbabwe Series 4th T20 Match Playing XI 
Image Credit to Original Source

ಆತಿಥೇಯ ವಿರುದ್ಧ ಮೊದಲ ಪಂದ್ಯದಲ್ಲಿ 13 ರನ್’ಗಳ ಸೋಲು ತಂಡಿದ್ದ ಟೀಮ್ ಇಂಡಿಯಾ, 2ನೇ ಪಂದ್ಯವನ್ನು 100 ರನ್’ಗಳಿಂದ ಭರ್ಜರಿಯಾಗಿ ಗೆದ್ದು ತಿರುಗೇಟು ಕೊಟ್ಟಿತ್ತು. ಬುಧವಾರ ನಡೆದ ಮೂರನೇ ಪಂದ್ಯದಲ್ಲಿ 23 ರನ್’ಗಳ ಗೆಲುವು ದಾಖಲಿಸಿರುವ ಶುಭಮನ್ ಗಿಲ್ ಬಳಗ ಶನಿವಾರವೇ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ಭಾರತ Vs ಜಿಂಬಾಬ್ವೆ 4ನೇ ಟಿ20 ಪಂದ್ಯ (India Vs Zimbabwe t20 series)
ಪಂದ್ಯ ಆರಂಭ: ಸಂಜೆ 4.30ಕ್ಕೆ
ಸ್ಥಳ: ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network)
ಲೈವ್ ಸ್ಟ್ರೀಮಿಂಗ್: ಸೋನಿ ವಿನ್ (SonyLIV app)

ಇದನ್ನೂ ಓದಿ : James Anderson: ಜೇಮ್ಸ್ ಆ್ಯಂಡರ್ಸನ್ ಟೆಸ್ಟ್‌ ಪಂದ್ಯಕ್ಕೆ ಪದಾಪರ್ಣೆ ಮಾಡಿದಾಗ ಈಗಿನ ಇಂಗ್ಲೆಂಡ್ ಆಟಗಾರರ ವಯಸ್ಸೆಷ್ಟು ಗೊತ್ತಾ?

4ನೇ ಟಿ20 ಪಂದ್ಯ : ಭಾರತದ ಸಂಭಾವ್ಯ XI:
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್.

India Vs Zimbabwe Series 4th T20 Match Playing XI 
Image Credit to Original Source

ಭಾರತ ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ರಿಯಾನ್ ಪರಾಗ್ , ಧ್ರುವ್ ಜುರೆಲ್

ಇದನ್ನೂ ಓದಿ : KL Rahul net worth: ಕನ್ನಡಿಗ ಕೆ.ಎಲ್ ರಾಹುಲ್ ಬಳಿ ಇದೆ ಶತಕೋಟಿ ಆಸ್ತಿ!

ಜಿಂಬಾಬ್ವೆ ತಂಡ: ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಸಿಕಂದರ್ ರಜಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ವೆಲ್ಲಿಂಗ್‌ಟನ್ ಮಸಕಡ್ಜಾ, ರಿಚರ್ಡ್ ನಾಗರವಾ, ಬ್ಲೆಸ್ಸಿಂಗ್ ಮುಜರಾಬಾನಿ, ಟೆಂಡೈ ಚಟಾರಾ, ಲ್ಯೂಕ್ ಜೊಂಗ್‌ವಿಯಾವುಟಾ, ಲ್ಯೂಕ್ ಜಾಂಗ್‌ವಿಯಾವುಟಾ , ಫರಾಜ್ ಅಕ್ರಮ್, ಅಂತುಮ್ ನಖ್ವಿ

ಇದನ್ನೂ ಓದಿ : James Anderson: ಟೆಸ್ಟ್ ಕ್ರಿಕೆಟ್’ನಲ್ಲಿ 40 ಸಾವಿರ ಎಸೆತಗಳನ್ನೆಸೆದ ಬೌಲಿಂಗ್ ಮಷಿನ್ ಜೇಮ್ಸ್ ಆ್ಯಂಡರ್ಸನ್ 

India Vs Zimbabwe Series 4th T20 Match Playing XI 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular