Indian Cricket Team Best Coach : ಬೆಂಗಳೂರು: ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ (Team India head coach Gautam Gambhir) ಅವರ ಕೋಚಿಂಗ್ ಅಭಿಯಾನ ಆರಂಭವಾಗಿದೆ. ಶ್ರೀಲಂಕಾ ವಿರುದ್ಧ ಪಲ್ಲಕೆಲೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲೇ ಭಾರತ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ಮೊದಲ ಪಂದ್ಯದಲ್ಲಿಯೇ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇನ್ನು ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಮಿಂಚು ಹರಿಸಿದ್ದಾರೆ. ಭಾರತ ತಂಡದ ಕೋಚ್‌ಗಳಲ್ಲೇ ರಾಹುಲ್ ದ್ರಾವಿಡ್ ಹೆಸರು ಅಗ್ರಸ್ಥಾನದಲ್ಲಿದೆ.

ಇಲ್ಲಿಂದ ಮೂರು ವರ್ಷಗಳ ಕಾಲ, ಅಂದ್ರೆ 2027ರವರೆಗೆ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಕೋಚ್ ಆಗಿರಲಿದ್ದಾರೆ. ಭಾರತ ತಂಡದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಉತ್ತರಾಧಿಕಾರಿಯಾಗಿ ಬಂದಿರುವ ಗಂಭೀರ್, ಕೋಚ್ ಆಗಿ ಯಶಸ್ವಿಯಾಗಲಿದ್ದಾರೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಆದರೆ 2000ನೇ ಇಸವಿಯಿಂದ ಇಲ್ಲಿವರೆಗೆ ಭಾರತ ತಂಡ ಫುಲ್ ಟೈಮ್ ಕೋಚ್ ಆಗಿ ನೇಮಕಗೊಂಡವರ ಪೈಕಿ ರಾಹುಲ್ ದ್ರಾವಿಡ್ ಅವರೇ ಅತ್ಯುತ್ತಮ ಕೋಚ್ ಎಂಬುದು ಅಂಕಿಅಂಶಗಳಿಂದ ರುಜುವಾತಾಗಿದೆ.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲೇ ಭಾರತ 17 ವರ್ಷಗಳ ನಂತರ ಐಸಿಸಿ ಟಿ20 ವಿಶ್ವಕಪ್ ಮತ್ತು 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದಿತ್ತು. 2000ನೇ ಇಸವಿಯಿಂದ ಇದುವರೆಗೆ ಭಾರತ ತಂಡಕ್ಕೆ ಒಟ್ಟು 7 ಮಂದಿ ಪೂರ್ಣಕಾಲಿಕ ಕೋಚ್’ಗಳಾಗಿ ನೇಮಕಗೊಂಡಿದ್ದಾರೆ. ಇದರಲ್ಲಿ ನಾಲ್ವರು ವಿದೇಶಿ ಕೋಚ್’ಗಳಾದರೆ, 3 ಮಂದಿ ಸ್ವದೇಶೀ ಕೋಚ್’ಗಳು.
ಇದನ್ನೂ ಓದಿ : Nostush Kenjige: ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾನೆ ಚಿಕ್ಕಮಗಳೂರಿನ ಪ್ರತಿಭೆ
2000-05ರವರೆಗೆ ನ್ಯೂಜಿಲೆಂಡ್’ನ ಜಾನ್ ರೈಟ್, 2005ರಿಂದ 2007ರವರೆಗೆ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್, 2008ರಿಂದ 2011ರವರೆಗೆ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್, 2011ರಿಂದ 2015ರವರೆಗೆ ಜಿಂಬಾಬ್ವೆಯ ಡಂಕನ್ ಫ್ಲೆಚರ್ ಟೀಮ್ ಇಂಡಿಯಾ ಕೋಚ್’ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಅನಿಲ್ ಕುಂಬ್ಳೆ, ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಭಾರತ ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿದ್ದು, ಈ ಪೈಕಿ ರಾಹುಲ್ ದ್ರಾವಿಡ್ ಅವರೇ ಬೆಸ್ಟ್ ಕೋಚ್ ಎಂಬುದನ್ನು ಈ ಕೆಳಗಿನ ಅಂಕಿ ಅಂಶಗಳು ಸಾಬೀತು ಪಡಿಸುತ್ತಿವೆ.

2000ನೇ ಇಸವಿಯಿಂದ ಭಾರತದ ಕೋಚ್’ಗಳ ಸಾಧನೆ
ಜಾನ್ ರೈಟ್
ಅವಧಿ: 2000-05, ಪಂದ್ಯ: 182, ಗೆಲುವು: 89, ಸೋಲು: 71, ವಿನ್ನಿಂಗ್%: 48.90%
ಗ್ರೆಗ್ ಚಾಪೆಲ್
ಅವಧಿ: 2005-07, ಪಂದ್ಯ: 81, ಗೆಲುವು: 40, ಸೋಲು: 31, ವಿನ್ನಿಂಗ್%: 49.40%
ಗ್ಯಾರಿ ಕರ್ಸ್ಟನ್
ಅವಧಿ: 2008-11, ಪಂದ್ಯ: 144, ಗೆಲುವು: 85, ಸೋಲು: 44, ವಿನ್ನಿಂಗ್%: 59.00%
ಇದನ್ನೂ ಓದಿ : KL Rahul: ಪೈಲಟ್ ಆದ ಕ್ರಿಕೆಟರ್, ಸ್ಟಂಟ್ ಜೆಟ್ ಓಡಿಸಿದ ಕೆಎಲ್ ರಾಹುಲ್
ಡಂಕನ್ ಫ್ಲೆಚರ್
ಅವಧಿ: 2011-15, ಪಂದ್ಯ: 171, ಗೆಲುವು: 92, ಸೋಲು: 62, ವಿನ್ನಿಂಗ್%: 53.80%
ಅನಿಲ್ ಕುಂಬ್ಳೆ
ಅವಧಿ: 2016-17, ಪಂದ್ಯ: 37, ಗೆಲುವು: 23, ಸೋಲು: 08, ವಿನ್ನಿಂಗ್%: 61.01%
ರವಿ ಶಾಸ್ತ್ರಿ
ಅವಧಿ: 2017-21, ಪಂದ್ಯ: 184, ಗೆಲುವು: 121, ಸೋಲು: 53, ವಿನ್ನಿಂಗ್%: 65.08%
ಇದನ್ನೂ ಓದಿ : Women’s Asia Cup 2024 : ಮಹಿಳಾ ಏಷ್ಯಾ ಕಪ್: ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ರಾಹುಲ್ ದ್ರಾವಿಡ್
ಅವಧಿ: 2021-24, ಪಂದ್ಯ: 144, ಗೆಲುವು: 103, ಸೋಲು: 36, ವಿನ್ನಿಂಗ್%: 71.50%
Indian Cricket Team Best Coach Rahul Dravid