ಭಾನುವಾರ, ಏಪ್ರಿಲ್ 27, 2025
HomeSportsCricketVinay Kumar: ಭಾರತದ ಬೌಲಿಂಗ್ ಕೋಚ್ ಸ್ಥಾನಕ್ಕೆ ವಿನಯ್ ಕುಮಾರ್ ಹೆಸರು ಸೂಚಿಸಿದ ಗಂಭೀರ್..!

Vinay Kumar: ಭಾರತದ ಬೌಲಿಂಗ್ ಕೋಚ್ ಸ್ಥಾನಕ್ಕೆ ವಿನಯ್ ಕುಮಾರ್ ಹೆಸರು ಸೂಚಿಸಿದ ಗಂಭೀರ್..!

- Advertisement -

Indian Cricket Team Bowling Coach Vinay Kumar : ಬೆಂಗಳೂರು: ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಆಗಿ ನಮ್ಮ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ ( R Vinaya Kumar)  ಅವರನ್ನು ಕೇಳಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದು ಸುದ್ದಿಯಷ್ಟೇ.. ಇನ್ನೂ ಖಚಿತತೆ ಇಲ್ಲ.. ಅಷ್ಟರಲ್ಲೇ ವಿನಯ್ ಕುಮಾರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅತೃಪ್ತ ಆತ್ಮಗಳು ಪ್ರಲಾಪ ಶುರು ಮಾಡಿವೆ.

Indian Cricket Team Bowling Coach Vinay Kumar Refer by Gautam Gambhir
Image Credit : Vinaya kumar / Instagram

ಯಾರು ಈ ವಿನಯ್ ಕುಮಾರ್..? ಏನು ಆತನ ಸಾಧನೆ..?

ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಆಗಲು ಅವನಿಗೆ ಅರ್ಹತೆ ಇದೆಯೇ ? ಟೀಂ ಇಂಡಿಯಾದ ಖ್ಯಾತ ಬೌಲರ್‌ ಜಸ್ಪ್ರೀತ್ ಬುಮ್ರಾನಂತಹ ದಿಗ್ಗಜ ಆಟಗಾರನಿಗೆ ಅದ್ಯಾವ ರೀತಿಯ ಬೌಲಿಂಗ್ ಪಾಠ ಹೇಳಿ ಕೊಡಬಲ್ಲ..? ಹೀಗೆಂದಷ್ಟು ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೇಳಿದ್ದಾರೆ. ವಿನಯ್ ಕುಮಾರ್ credibilityಯನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

Indian Cricket Team Bowling Coach Vinay Kumar Refer by Gautam Gambhir
Image Credit : Vinaya kumar / Instagram

ಅಂಥವರ ಗಮನಕ್ಕೆ..

ಮಹಾರಾಷ್ಟ್ರದ ಪರಾಸ್ ಮಾಂಬ್ರೆ (ಭಾರತ ಕ್ರಿಕೆಟ್ ತಂಡದ ನಿರ್ಗಮಿತ ಬೌಲಿಂಗ್ ಕೋಚ್) ಭಾರತ‌ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಲು ಯಾವ ಅರ್ಹತೆ‌ ಇತ್ತೋ. ಕನ್ನಡಿಗ ವಿನಯ್ ಕುಮಾರ್’ಗೆ ಕೂಡ ಇರುವುದೂ ಅದೇ ಅರ್ಹತೆ. ಪರಾಸ್ ಮಾಂಬ್ರೆ ಜಸ್ಪ್ರೀತ್ ಬುಮ್ರಾನಿಗೆ ಅದ್ಯಾವ ರೀತಿಯ ಬೌಲಿಂಗ್ ಪಾಠ ಹೇಳಿ ಕೊಟ್ಟರೋ, ಅದನ್ನೇ ವಿನಯ್ ಕೋಚ್ ಆದರೆ ಹೇಳಿಕೊಡುವುದು.

ವಿನಯ್ ಕುಮಾರ್ ಯಾರು ? ಆತನ ಸಾಧನೆಯೇನು ಎಂದು ಪ್ರಶ್ನಿಸುತ್ತಿರುವವರಿಗೆ ಇಲ್ಲಿದೆ ಉತ್ತರ

ಭರತದ ದೇಶೀಯ ಕ್ರಿಕೆಟ್’ನ ದಿಗ್ಗಜ ಕ್ರಿಕೆಟಿಗ, ಮೋಸ್ಟ್ ಸಕ್ಸಸ್’ಫುಲ್ ಮೀಡಿಯಂ ಪೇಸರ್ ಈ ವಿನಯ್ ಕುಮಾರ್. ರಣಜಿ ಟ್ರೋಫಿ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವ ವೇಗದ ಬೌಲರ್ ವಿನಯ್ ಕುಮಾರ್ (442 ವಿಕೆಟ್ಸ್). ಭಾರತದ ದೇಶೀಯ ಕ್ರಿಕೆಟ್’ನ ಚರಿತ್ರೆಯಲ್ಲೇ ಸತತ 2 ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ ಗೆದ್ದಿರುವ ದೇಶದ ಮೊದಲ ಮತ್ತು ಏಕೈಕ ನಾಯಕ ವಿನಯ್ ಕುಮಾರ್.

Indian Cricket Team Bowling Coach Vinay Kumar Refer by Gautam Gambhir
Image Credit : Vinaya kumar / Instagram

ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ 

ಕರ್ನಾಟಕ ಕ್ರಿಕೆಟ್ ಕಂಡ ಅಪ್ರತಿಮ ನಾಯಕ ಮತ್ತು ಶ್ರೇಷ್ಠ ಮ್ಯಾಚ್ ವಿನ್ನರ್ ವಿನಯ್ ಕುಮಾರ್. ಬೆಣ್ಣೆ ನಗರಿ ದಾವಣಗೆರೆ ನಿವಾಸಿಯಾಗಿರುವ ಆಟೋ ಚಾಲಕರ ಮಗನಾಗಿ ಹುಟ್ಟಿ ಇಂದು ಭಾರತ ದೇಶದ ಪರ 41 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸಾಧಕ ಈ ವಿನಯ್ ಕುಮಾರ್. ವೃತ್ತಿಪರ ಕ್ರಿಕೆಟ್’ನಲ್ಲಿ ಒಟ್ಟು 923 ವಿಕೆಟ್’ಗಳನ್ನು ಪಡೆದಿರುವ ಅಸಾಮಾನ್ಯ ಕ್ರಿಕೆಟಿಗ ವಿನಯ್ ಕುಮಾರ್.

ಪರಾಸ್ ಮಾಂಬ್ರೆ, ಭರತ್ ಅರುಣ್ ಅಂಥವರು ಭಾರತ ತಂಡದ ಬೌಲಿಂಗ್ ಕೋಚ್’ಗಳಾಗಿ ಯಶಸ್ವಿಯಾಗಿದ್ದಾರೆ ಎಂದರೆ ವಿನಯ್ ಕುಮಾರ್ ಯಾಕಾಗಬಾರದು..? ಅಷ್ಟಕ್ಕೂ ಬೌಲಿಂಗ್ ಕೋಚ್ ಜವಾಬ್ದಾರಿಯೇನು..? ಬೌಲರ್’ಗಳಿಗೆ ಬೌಲಿಂಗ್ ಪಾಠ ಹೇಳಿ ಕೊಡುವುದಾ..? ಈ ರೀತಿಯಾಗಿ ತಿಳಿದಿದ್ದರೆ ಅದು ನಿಜವಲ್ಲ. ಅನುಭವಿ ಬೌಲರ್ ಗಳಿಗೆ ಹೀಗೆ ಬೌಲಿಂಗ್‌ ಮಾಡು, ಹಾಗೆ ಬೌಲಿಂಗ್‌ ಮಾಡಬೇಖು ಎಂದು ಬೌಲಿಂಗ್‌ನ ಎಬಿಸಿಡಿ ಕಲಿಸಿಕೊಡುವುದು ಬೌಲಿಂಗ್‌ ಕೋಚ್‌ ಕೆಲಸವಲ್ಲ.

Indian Cricket Team Bowling Coach Vinay Kumar Refer by Gautam Gambhir
Image Credit : Vinaya kumar / Instagram

ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?

ಯಾವ ಪಿಚ್’ನಲ್ಲಿ ಯಾವ ಲೆಂಗ್ತ್ ಹಾಕಿದರೆ ಉತ್ತಮ ? ಯಾವ ಸನ್ನಿವೇಶಕ್ಕೆ ಹೇಗೆ ಬೌಲಿಂಗ್ ಮಾಡಬೇಕು..? ಬ್ಯಾಟ್ಸ್’ಮನ್’ಗಳ ದೌರ್ಬಲ್ಯವೇನು..? ಯಾವ ರೀತಿಯ ಎಸೆತಗಳಿಂದ ಅವರನ್ನು ಔಟ್ ಮಾಡಬಹುದು..? ಇಂಥದ್ದನ್ನು study ಮಾಡಿ, ಬೌಲರ್’ಗಳಿಗೆ ನೆರವಾಗುವುದಷ್ಟೇ ಬೌಲಿಂಗ್ ಕೋಚ್’ಗಳ ಕೆಲಸ. Of course, skill improve ಮಾಡಿಕೊಳ್ಳುವ ಪ್ರಯತ್ನ ನಿರಂತರವಾಗಿ ಇದ್ದೇ ಇರುತ್ತದೆ.

ಕರ್ನಾಟಕ ರಣಜಿ ತಂಡ ನಾಯಕನಾಗಿ ಇದ್ದಾಗ ಅತ್ಯಂತ ಯಶಸ್ವಿಯಾಗಿ, ಸಮರ್ಥವಾಗಿ ತಂಡವನ್ನು ಮುನ್ನೆಡೆಸಿರುವ ಅನುಭವ ವಿನಯ್‌ ಕುಮಾರ್‌ ಅವರಿಗೆ ಇದೆ. ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ಕೋಚ್‌ ಆಗಿಯೂ ಪಳಗಿರುವ ವಿನಯ ಕುಮಾರ್‌ ಮುಂದೆ ಭಾರತ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ಆದ್ರೆ ಖಂಡಿತಾ ಯಶಸ್ವಿ ಆಗಬಲ್ಲರು. ಅವಕಾಶ ಸಿಕ್ಕರೇ ತಾನೆ ಸಾಮರ್ಥ್ಯ ತೋರಿಸೋದಕ್ಕೆ ಸಾಧ್ಯ.

ಇದನ್ನೂ ಓದಿ : KL Rahul net worth: ಕನ್ನಡಿಗ ಕೆ.ಎಲ್ ರಾಹುಲ್ ಬಳಿ ಇದೆ ಶತಕೋಟಿ ಆಸ್ತಿ!

Indian Cricket Team Bowling Coach Vinay Kumar Refer by Gautam Gambhir

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular