KL Rahul Net worth 100 Cr : ಬೆಂಗಳೂರು: ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ (International Cricket) ’ಗೆ ಮರಳಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಎಷ್ಟು ಶ್ರೀಮಂತ ? ಕ್ರಿಕೆಟ್’ನಿಂದ ಅವರು ಇದುವರೆಗೆ ಗಳಿಸಿರುವ ಸಂಪತ್ತು ಎಷ್ಟು ಎಂಬ ಕುತೂಹಲ ರಾಹುಲ್ ಅಭಿಮಾನಿಗಳಿಗೆ ಇದ್ದೇ ಇದೆ. ಇದಕ್ಕೆ ಉತ್ತರ, ರಾಹುಲ್ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯ.

ಹಾಗಾದ್ರೆ ರಾಹುಲ್ ಶತಕೋಟಿ ಆಸ್ತಿಯ ಒಡೆಯನಾಗಿದ್ದು ಹೇಗೆ ?
ಬಿಸಿಸಿಐ ಕಾಂಟ್ರಾಕ್ಟ್ (BCCI Contract) , ಐಪಿಎಲ್ ಕಾಂಟ್ರಾಕ್ಟ್, ಪಂದ್ಯಗಳ ಸಂಭಾವನೆ, ಜಾಹೀರಾತುಗಳಿಂದ ಬಂದ ಹಣದಲ್ಲಿ ರಾಹುಲ್ ಇದುವರೆಗೆ ಒಟ್ಟಾರೆ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ರಾಹುಲ್ ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ‘ಎ’ ಗ್ರೇಡ್’ನಲ್ಲಿದ್ದು ವರ್ಷಕ್ಕೆ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. ಹಾಗೂ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ವೇತನ ಪಡೆಯುತ್ತಾರೆ. ಭಾರತ ಪರ ಟಿ20 ಪಂದ್ಯಗಳ ನ್ನಾಡುತ್ತಿದ್ದ ವೇಳೆ ಪ್ರತೀ ಪಂದ್ಯಕ್ಕೆ 3 ಲಕ್ಷ ರೂ. ವೇತನ ಪಡೆಯುತ್ತಿದ್ದರು.

ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?
ಇನ್ನು 2013ರಿಂದ ಐಪಿಎಲ್ ಆಡುತ್ತಿರುವ ರಾಹುಲ್ ಐಪಿಎಲ್’ನಿಂದ ಒಟ್ಟು 82.1 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. 2022ರಲ್ಲಿ ಲಕ್ನೋ ಸೂಪರ್ ಜಯಂಟ್ಸ್ ತಂಡ ಸೇರಿಕೊಂಡಿದ್ದ ರಾಹುಲ್ ವರ್ಷಕ್ಕೆ 17 ಕೋಟಿಗಳಂತೆ 3 ವರ್ಷಗಳಲ್ಲಿ 51 ಕೋಟಿ ರೂಪಾಯಿ ಪಡೆದಿದ್ದಾರೆ. 2013ರಲ್ಲಿ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಾಗ ರಾಹುಲ್ ಪಡೆದ ಹಣ ಕೇವಲ 10 ಲಕ್ಷ ರೂಪಾಯಿ.

ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದ ಭೀಮಾರ್ಜುನರು ಇನ್ನೆಂದೂ ಟಿ20ಯಲ್ಲಿ ಜೊತೆಯಾಗಿ ಆಡಲಾರರು..!
ಪ್ಯೂಮಾ, ಭಾರತ್ ಪೇ, ರೆಡ್ ಬುಲ್ ಸೇರಿದಂತೆ ಹಲವಾರು ಬ್ರ್ಯಾಂಡ್’ಗಳಿಗೆ ರಾಹುಲ್ ರಾಯಭಾರಿಯಾಗಿದ್ದು, ಅಲ್ಲಿಂದರೂ ಹಣ ಹರಿದು ಬರುತ್ತಿದೆ. ಇದೇ ತಿಂಗಳು ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು (India tour of Sri Lanka), ಸಿಂಹಳೀಯರ ವಿರುದ್ಧ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆ.ಎಲ್ ರಾಹುಲ್ ಭಾರತ ತಂಡದ ನಾಯಕತ್ವ ವಹಿಸುವ ಸಾಧ್ಯತೆಯಿದೆ.
ಇದನ್ನೂ ಓದಿ :Gautam Gambhir : ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ : ಜಯ್ ಶಾ
Indian Cricketer KL Rahul Net worth 100 Cr