IPL 2024 Points Table Orange Cap and Purple Cap Holders List : ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ (PBKS ಮತ್ತು RR) ನಡುವಿನ ಪಂದ್ಯದ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಅಂಕಪಟ್ಟಿ ಯಲ್ಲಿ ಅಗ್ರಸ್ಥಾನಕ್ಕೇರಿದೆ. ಸಂಜು ಸ್ಯಾಮ್ಸನ್ (sanju samson) ನೇತೃತ್ವದ ಆರ್‌ಆರ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸುತ್ತಿದೆ. ಈಗಾಗಲೇ ಆಡಿರುವ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 4 ಪಂದ್ಯಗಳನ್ನು ಆಡಿರುವ ಕೋಲ್ಕತ್ತಾ 3 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಅಂಕಪಟ್ಟಿಯಲ್ಲಿ 6 ಅಂಕಗಳನ್ನು ಪಡೆದುಕೊಂಡಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ 5ಪಂದ್ಯಗಳನ್ನು ಆಡಿದ್ದು, 3ರರಲ್ಲಿ ಗೆಲುವು ಕಂಡಿದೆ. ಅಲ್ಲದೇ ಸನ್‌ರೈಸಸ್ ಹೈದ್ರಾಬಾದ್ ತಂಡ ಕೂಡ 3 ಗೆಲುವು ದಾಖಲಿಸಿದ್ದು, ಐದನೇ ಸ್ಥಾನದಲ್ಲಿದೆ.
ಇದನ್ನೂ ಓದಿ : ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ : ಹಾರ್ದಿಕ್ ಪಾಂಡ್ಯ ಸಹೋದರ ಅರೆಸ್ಟ್
ಉಳಿದಂತೆ ಗುಜರಾತ್ ಟೈಟಾನ್ಸ್ 6 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ, ಮುಂಬೈ ಇಂಡಿಯನ್ಸ್ 2 ಪಂದ್ಯ, ಪಂಜಾಬ್ ಕಿಂಗ್ಸ್ 2, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ 2 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ. ಆದರೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ಪಂದ್ಯಗಳಲ್ಲಿ ಮಾತ್ರವೇ ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಆರೆಂಜ್ ಕ್ಯಾಪ್ : ವಿರಾಟ್ ಕೊಹ್ಲಿಗೆ ಅಗ್ರಸ್ಥಾನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಹೀನಾಯ ಸೋಲು ಕಾಣುತ್ತಿದ್ದರೂ ಕೂಡ ಆಟಗಾರ ವಿರಾಟ್ ಕೊಹ್ಲಿ (Virat Kohli) ಮಾತ್ರ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.ವಿರಾಟ್ ಕೊಹ್ಲಿ, ಹೆನ್ರಿಚ್ ಕ್ಲಾಸೆನ್ ಮತ್ತು ಅಭಿಷೇಕ್ ಶರ್ಮಾ ಅಗ್ರ ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವೈಫಲ್ಯದ ಹೊರತಾಗಿಯೂ, ವಿರಾಟ್ ಕೊಹ್ಲಿ ಆರು ಪಂದ್ಯಗಳಲ್ಲಿ 319 ರನ್ ಗಳಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಮುಂದುವರಿದಿದ್ದಾರೆ. ಇನ್ನು ಐದು ಪಂದ್ಯಗಳಲ್ಲಿ 284 ರನ್‌ಗಳೊಂದಿಗೆ ರಿಯಾನ್ ಪರಾಗ್ ಎರಡನೇ ಸ್ಥಾನದಲ್ಲಿದ್ದಾರೆ.
- ವಿರಾಟ್ ಕೊಹ್ಲಿ 319 ಅಂಕ
- ರಿಯಾನ್ ಪರಾಗ್ 261 ಅಂಕ
- ಶುಭಮನ್ ಗಿಲ್ 255 ಅಂಕ
- ಸಂಜು ಸ್ಯಾಮ್ಸನ್ 246 ಅಂಕ
- ಸಾಯಿ ಸುದರ್ಶನ್ 226 ಅಂಕ
ಇದನ್ನೂ ಓದಿ : ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕ ? RCB Vs MI ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬದಲು ರಣತಂತ್ರ ರೂಪಿಸಿದ ಶರ್ಮಾ
ಐಪಿಎಲ್ 2024 ಪರ್ಪಲ್ ಕ್ಯಾಪ್: ಯುಜ್ವೇಂದ್ರ ಚಹಾಲ್ ಅಗ್ರ ಸ್ಥಾನ

ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್ 2024 ರ ಪ್ರಮುಖ ವಿಕೆಟ್ ಟೇಕರ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಅವರು 11 ವಿಕೆಟ್ ಪಡೆದುಕೊಂಡಿದ್ರೆ, ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಜಸ್ಪ್ರಿತ್ ಬೂಮ್ರಾ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೇರಿದ್ದಾರೆ.
- ಯುಜುವೇಂದ್ರ ಚಾಹಲ್ 11 ವಿಕೆಟ್
- ಜಸ್ಪ್ರೀತ್ ಬುಮ್ರಾ 10 ವಿಕೆಟ್
- ಕಗಿಸೊ ರಬಾಡ 9 ವಿಕೆಟ್
- ಮುಸ್ತಫಿಜುರ್ ರೆಹಮಾನ್ 9 ವಿಕೆಟ್
- ಖಲೀಲ್ ಅಹಮದ್ 9 ವಿಕೆಟ್
ಇದನ್ನೂ ಓದಿ : ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ, ಈ ದಾಖಲೆಗಳಿದ್ರೆ ಇಂದೇ ಅರ್ಜಿ ಸಲ್ಲಿಸಿ
Indian Premier League 2024 IPL 2024 Points Table Orange Cap and Purple Cap Holders List