ದುಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 19 ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಒಟ್ಟು ಮೂರು ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯಲಿದ್ದು, ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಲೀಗ್ ಪಂದ್ಯಗಳು ನಡೆಯಲಿವೆ. ರಾತ್ರಿಯ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಂಜೆ ನಡೆಯಲಿರುವ ಪಂದ್ಯಗಳು 3.30ರಿಂದ ನಡೆಯಲಿವೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಪ್ಟೆಂಬರ್ 21 ರಂದು ಮಾಜಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ದುಬೈನಲ್ಲಿ ಎದುರಿಸಲಿದೆ. ಆರ್‌ಸಿಬಿ ತಂಡ 3 ಪಂದ್ಯಗಳನ್ನು ಮಧ್ಯಾಹ್ನದ ವೇಳೆ ಆಡಲಿದೆ. ಭಾರತದಲ್ಲಿ ನಡೆಯುವಂತೆ ಯುಎಇಯಲ್ಲೂ ತವರು ಹಾಗೂ ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಆರ್‌ಸಿಬಿ ವೇಳಾಪಟ್ಟಿ
ಸೆ.21, ಸನ್‌ರೈಸರ್ಸ್, ರಾ.7.30, ಸೆ.24, ಕಿಂಗ್ಸ್ ಇಲೆವೆನ್, ರಾ.7.30, ಸೆ.28, ಮುಂಬೈ ಇಂಡಿಯನ್ಸ್, ರಾ.7.30, ಅ.3, ರಾಜಸ್ಥಾನ್ ರಾಯಲ್ಸ್, ಮ.3.30, ಅ.5, ಡೆಲ್ಲಿ ಕ್ಯಾಪಿಟಲ್ಸ್, ರಾ.7.30, ಅ.10, ಸಿಎಸ್‌ಕೆ ರಾ.7.30, ಅ.12 ಕೆಕೆಆರ್ ರಾ 7.30, ಅ.15 ಕಿಂಗ್ಸ್ ಇಲೆವೆನ್ ರಾ.7.30, ಅ.17 ರಾಜಸ್ಥಾನ್ ರಾಯಲ್ಸ್ ಮ.3.30, ಅ.21 ಕೆಕೆಆರ್ ರಾ.7.30, ಅ.25 ಸಿಎಸ್‌ಕೆ ಮ.3.30, ಅ.28 ಮುಂಬೈ ಇಂಡಿಯನ್ಸ್ ರಾ.7.30, ಅ.31 ಸನ್‌ರೈಸರ್ಸ್ ರಾ.7.30, ನ.2 ಡೆಲ್ಲಿ ಕ್ಯಾಪಿಟಲ್ಸ್ ರಾ.7.30ಕ್ಕೆ ಅಂತಿಮ ಲೀಗ್ ಪಂದ್ಯ ನಡೆಯಲಿದೆ.
