ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂದು ಪಂಜಾಬ್ ವಿರುದ್ದ ಪಂದ್ಯವನ್ನಾಡಲಿದೆ. ಫ್ಲೇ ಆಫ್ ಪ್ರವೇಶಕ್ಕೆ ಇಂದಿನ ಪಂದ್ಯ ಆರ್‌ಸಿಬಿ ತಂಡಕ್ಕೆ ಹೆಚ್ಚು ಮಹತ್ವದ್ದಾಗಿದೆ. ಈ ನಡುವಲ್ಲೇ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ (AB de Villiers) ಆರ್‌ಸಿಬಿ ತಂಡಕ್ಕೆ ಮರಳಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

RCB ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸ್ನೇಹಿತ ಮತ್ತು ದಕ್ಷಿಣ ಆಫ್ರಿಕಾದ ಸೂಪರ್‌ಸ್ಟಾರ್ ಎಬಿ ಡಿವಿಲಿಯರ್ಸ್ ಮುಂದಿನ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೊಸ ಪಾತ್ರದಲ್ಲಿ ಮರಳುತ್ತಾರೆ ಎಂದು ಭರವಸೆ ನೀಡಿದ್ದಾರೆ. ಎಬಿ ಡಿವಿಲಿಯರ್ಸ್ ಕಳೆದ ವರ್ಷ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೊದಲು ಆರ್‌ಸಿಬಿ ತಂಡದ ಸದಸ್ಯರಾಗಿದ್ದರು.

ನಾನು ಎಬಿ ಡಿವಿಲಿಯರ್ಸ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರೊಂದಿಗೆ ಸದಾ ಮಾತನಾಡುತ್ತಿರುತ್ತೇನೆ. ಅವರು ಇತ್ತೀಚೆಗೆ ಯುಎಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಗಾಲ್ಫ್ ವೀಕ್ಷಿಸುತ್ತಿದ್ದರು. ಆರ್‌ಸಿಬಿ ತಂಡದ ಆಟವನ್ನು ಗಮನಿಸುತ್ತಿದ್ದಾರೆ ಮತ್ತು ಮುಂದಿನ ವರ್ಷ ಅವರು ಆರ್‌ಸಿಬಿ ತಂಡಕ್ಕೆ ಮರಳಲಿದ್ದಾರೆ ಎಂದು ಆಶಿಸುತ್ತೇನೆ ಎಂದು ಆರ್‌ಸಿಬಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ಇದೀಗ ಕುತೂಹಲವನ್ನು ಮೂಡಿಸಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಹ ಆಟದ ಪ್ರದರ್ಶನವನ್ನು ನೀಡಿಲ್ಲ. 12 ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ 216 ರನ್ ಗಳಿಸಿರುವ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು ಮೂರು ಗೋಲ್ಡನ್ ಡಕ್‌ಗಳಿಗೆ ಔಟಾಗಿದ್ದಾರೆ.
Interview of the year! Catch Virat Kohli in a relaxed, honest and fun avatar, even as Mr. Nags tries to annoy him just like he’s done over the years. 😎🤙
— Royal Challengers Bangalore (@RCBTweets) May 11, 2022
Tell us what the best moment from this interview was for you, in the comments section. 👨💻#PlayBold #IPL2022 #RCB #ನಮ್ಮRCB pic.twitter.com/vV6MyRDyRt
ನನ್ನ ವೃತ್ತಿಜೀವನದಲ್ಲಿ ಇದು ನನಗೆ ಎಂದಿಗೂ ಸಂಭವಿಸಿಲ್ಲ ಎಂದು ನಾನು ಭಾವಿಸುತ್ತೇನೆ, ಹಾಗಾಗಿ ನಾನು ನಗುತ್ತಿದ್ದೆ. ಆಟದಲ್ಲಿ ತೋರಿಸಬೇಕಾದ ಎಲ್ಲವನ್ನೂ ನಾನು ನೋಡಿದ್ದೇನೆ ಎಂದು ನನಗೆ ಅನಿಸುತ್ತದೆ ಎಂದು ಆರ್‌ಸಿಬಿ ಮಾಜಿ ನಾಯಕ ಕೊಹ್ಲಿ ಹೇಳಿದ್ದಾರೆ. ಈ ಋತುವಿನ ಐಪಿಎಲ್‌ನಲ್ಲಿ ನಿರರ್ಗಳವಾಗಿ ಸ್ಕೋರ್ ಮಾಡಲು ಕೊಹ್ಲಿಯ ಅಸಮರ್ಥತೆಯನ್ನು ಇಯಾನ್ ಬಿಷಪ್ ಎತ್ತಿ ತೋರಿಸುವುದರೊಂದಿಗೆ ಅವರ ಕಳಪೆ ಫಾರ್ಮ್ ಕಳವಳವನ್ನು ಹುಟ್ಟುಹಾಕಿದೆ. ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಕೂಡ ಅವರು ವಿವಿಧ ರೀತಿಯ ಬೌಲರ್‌ಗಳಿಗೆ ಔಟ್ ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್ ಧೋನಿ
ಇದನ್ನೂ ಓದಿ : ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ತಂಡಕ್ಕೆ ಕೋಚ್ : ಕೆಕೆಆರ್ ತೊರೆಯುತ್ತಾರಾ ನ್ಯೂಜಿಲೆಂಡ್ ಮಾಜಿ ನಾಯಕ
IPL 2022 AB de Villiers will back to RCB, Virat Kohli makes big statement