ಮುಂಬೈ : ಖ್ಯಾತ ಸ್ಪಿನ್ನರ್ ಕುಲದೀಪ್ ಯಾದವ್ ಸ್ಪಿನ್ ಮೋಡಿಯ ಜೊತೆಗೆ ಡೇವಿಡ್ ವಾರ್ನರ್ ಹಾಗೂ ಪ್ರಥ್ವಿ ಶಾ ಉತ್ತಮ ಆಟದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ (DC vs KKR) ವಿರುದ್ದ ಸೋಲು ಕಂಡಿದೆ.

ಮುಂಬೈನ ಬೋರ್ನ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ರಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಜೋಡಿ ಉತ್ತಮ ಜೊತೆಯಾಟ ನೀಡಿದ್ರು. ಮೊದಲ ವಿಕೆಟ್‌ಗೆ 93 ರನ್ ಸಿಡಿಸಿತ್ತು. ಪ್ರಥ್ವಿ ಶಾ 29 ಎಸೆತಗಳಲ್ಲಿ ಬರೋಬ್ಬರಿ 51 ರನ್ ಬಾರಿಸಿ ಔಟಾದ್ರೆ, ವಾರ್ನರ್ 45 ಎಸೆತಗಳಲ್ಲಿ 61 ರನ್ ಬಾರಿಸಿದ್ದಾರೆ. ನಂತರದಲ್ಲಿ ಪಂತ್ 27, ಅಕ್ಷರ್ ಪಟೇಲ್ 22 ಹಾಗೂ ಶಾರ್ದೂಲ್ ಠಾಕೂರ್ 29 ರನ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 5ವಿಕೆಟ್ ಕಳೆದುಕೊಂಡು 215 ರನ್ ಬಾರಿಸಿದೆ. ಕೆಕೆಆರ್ ಪರ ಸುನೀಲ್ ನರೇನ್ 2 ಹಾಗೂ ರಸೆಲ್, ಚಕ್ರವರ್ತಿ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಖಲೀಲ್ ಅಹಮದ್ ಆಘಾತ ನೀಡಿದ್ರು. ೧೮ರನ್ ಗಳಿಸಿ ಆಡುತ್ತಿದ್ದ ವೆಂಕಟೇಶ್ ಅಯ್ಯರ್ ಬಲಿ ಪಡೆದ ಖಲೀಲ್ ಅಹಮದ್, ನಂತರ ಅಜಿಂಕ್ಯಾ ರಹಾನೆಯನ್ನು ಔಟ್ ಮಾಡಿದ್ರು. ನಂತರ ಶ್ರೇಯಸ್ ಅಯ್ಯರ್ ಗೆ ಜೊತೆಯಾದ ನಿತೀಶ್ ರಾಣಾ ಜೋಡಿ ಉತ್ತಮ ಆಟದ ಭರವಸೆಯನ್ನು ನೀಡಿತ್ತು. ಶ್ರೇಯಸ್ ಅಯ್ಯರ್ 54 ರನ್ ಬಾರಿಸಿದ್ರೆ, ನಿತೀಶ್ ರಾಣಾ 30 ರನ್ ಸಿಡಿಸಿದ್ದಾರೆ.
April 10 2021 🤝 April 10 2022.
— Rishabh Pant (@RishabhPant17) April 10, 2022
Special day, special win. @DelhiCapitals 💙💙 #RP17 pic.twitter.com/ZMUOgWWLio
ನಂತರ ಆಂಡ್ರೆ ರೆಸೆಲ್ ಹಾಗೂ ಸ್ಯಾಮ್ ಬಿಲ್ಲಿಂಗ್ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸುವ ಸೂಚನೆ ನೀಡಿದ್ರೂ ಕೂಡ ಖಲೀಲ್ ಅಹಮದ್ ಹಾಗೂ ಶಾರ್ದೂಲ್ ಠಾಕೂರ್ ಅವಕಾಶವನ್ನೇ ನೀಡಲಿಲ್ಲ. ನಂತರದಲ್ಲಿ ಕುಲದೀಪ್ ಯಾದವ್ ಮಾರಕ ದಾಳಿ ಸಂಘಟಿಸಿದ್ದಾರೆ. ಪಾಟ್ ಕುಮ್ಮಿನ್ಸ್, ಸುನಿಲ್ ನರೇನ್, ಆರ್. ಸಲಾಂ ಅವರ ವಿಕೆಟ್ ಗಳನ್ನು ಸತತವಾಗಿ ಪಡೆಯುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವನ್ನು ತಂದು ಕೊಟ್ರು. ಅಂತಿಮವಾಗಿ ಕೆಕೆಆರ್ ತಂಡ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 171 ರನ್ ಬಾರಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲದೀಪ್ ಯಾದವ್ 4, ಖಲೀಲ್ ಅಹಮದ್ 3, ಶಾರ್ದೂಲ್ ಠಾಕೂರ್ 2 ಹಾಗೂ ಲಲಿತ್ ಯಾದವ್ 1 ವಿಕೆಟ್ ಪಡೆದುಕೊಂಡಿದ್ದಾರೆ.
🔥 Yeh Hai Nayi Dilli and The Josh Is Always 🅷🅸🅶🅷 🔥#IPL2022 | #KKRvDC #TATAIPL | #IPL | #DelhiCapitals pic.twitter.com/oPuTyrirDs
— Delhi Capitals (@DelhiCapitals) April 10, 2022
ಇದನ್ನೂ ಓದಿ : ಲಕ್ನೋ ವಿರುದ್ದ ಅನ್ರಿಚ್ ನಾಟ್ರೆಜ್ ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿದ್ದು ಯಾಕೆ ಗೊತ್ತಾ ?
ಇದನ್ನೂ ಓದಿ : Harshal Patel : ಹರ್ಷಲ್ ಪಟೇಲ್ ಸಹೋದರಿ ನಿಧನ : ಆರ್‌ಸಿಬಿ ತೊರೆದ ಖ್ಯಾತ ಆಟಗಾರ
IPL 2022 DC vs KKR Match DC Win by 44 runs, Kolkata Knight Riders vs Delhi Capitals