ಐಪಿಎಲ್ 2022 ರ ಹೊಸ ತಂಡ ಗುಜರಾತ್ ಟೈಟಾನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಕ್ತ ಋತುವಿನಲ್ಲಿ ಹೊಸದಾಗಿ ಎಂಟ್ರಿ ಕೊಟ್ಟಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲಿನ ರುಚಿ ತೋರಿಸುವ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದೆ. ಇದೀಗ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಖ್ಯಾತ ಆಟಗಾರ ಶುಭಮನ್ ಗಿಲ್ (Shubman Gill) ಅವರನ್ನು ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ಗುಣಗಾನ ಮಾಡಿದ್ದಾರೆ. ಅಲ್ಲದೇ ಈತ ವಿಶ್ವದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ ಎಂದು ಎಂದಿದ್ದಾರೆ ರವಿಶಾಸ್ತ್ರಿ.

ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಗುಜರಾತ್ ಟೈಟಾನ್ಸ್ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಶ್ಲಾಘಿಸಿದ್ದಾರೆ. 22 ವರ್ಷ ವಯಸ್ಸಿನ ಗಿಲ್ ಗುಜರಾತ್ ತಂಡದ ಪರ ಕಾಣಿಸಿಕೊಂಡಿದ್ದಾರೆ. ಪ್ರಸಕ್ತ ಋತುವಿ ಮೊದಲ ಪಂದ್ಯದಲ್ಲಿ ಡಕ್‌ಗೆ ಔಟಾಗಿದ್ದರು. ಆದರೆ ರವಿಶಾಸ್ತ್ರಿ ಅವರನ್ನು “ಶುದ್ಧ ಪ್ರತಿಭೆ” ಎಂದು ಶ್ಲಾಘಿಸಿದ್ದಾರೆ. ಭಾರತ ಮತ್ತು ವಿಶ್ವದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಹೇಳಿದ್ದಾರೆ. ಶುಭಮನ್ ಗಿಲ್ ಶುದ್ಧ ಪ್ರತಿಭೆ. ಆ ವ್ಯಕ್ತಿ ಈ ದೇಶ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಡಿಸಿ ವಿರುದ್ಧ ಗಿಲ್ 84 ರನ್ ಗಳಿಸಿದ ನಂತರ ಶಾಸ್ತ್ರಿ ಆತಿಥೇಯ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ಗಿಲ್ ಒಮ್ಮೆ ಕ್ರೀಸ್‌ಗೆ ಇಳಿದ್ರೆ ಸಾಕು, ಅವನು ಸ್ಕೋರ್ ಮಾಡುತ್ತಾನೆ. ಗುಜರಾತ್ ಟೈಟಾನ್ಸ್ ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಆ ಪಂಚ್ ಸಿಕ್ಕಿದೆ, ಅವರಿಗೆ ಸಮಯ ಸಿಕ್ಕಿದೆ ಮತ್ತು ಮೈದಾನವನ್ನು ತೆರವುಗೊಳಿಸುವ ಶಕ್ತಿ ಅವರಿಗೆ ಸಿಕ್ಕಿದೆ. ಅವರನ್ನು ಈ ಆಟದ ಸ್ವರೂಪಕ್ಕಾಗಿ ಮಾಡಲಾಗಿದೆ ಎಂದೆಲ್ಲಾ ಹೇಳಿದ್ದಾರೆ. ಕೆಲವೊಂದು ಡಾಟ್ ಬಾಲ್‌ಗಳು ಗಿಲ್ ಅವರನ್ನು ಒತ್ತಡಕ್ಕೆ ಸಿಲುಕಿಸಿತ್ತು. ಆದರೆ ಕೆಟ್ಟ ಚೆಂಡುಗಳ ಜೊತೆಗೆ ಎಂದೂ ಆಟವಾಡಲಾರ. ಆದರೆ ಶಾರ್ಟ್ ಬಾಲ್‌ನಲ್ಲಿ ತುಂಬಾ ಚೆನ್ನಾಗಿ ಆಡುತ್ತಾರೆ ಎಂದಿದ್ದಾರೆ.

IPL 2022 ಗಾಗಿ ಗುಜರಾತ್ ಟೈಟಾನ್ಸ್ ತಂಡ :
ಹಾರ್ದಿಕ್ ಪಾಂಡ್ಯ (c), ಮ್ಯಾಥ್ಯೂ ವೇಡ್ (wk), ರಶೀದ್ ಖಾನ್ (vc), ಶುಭಮನ್ ಗಿಲ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ಮೊಹಮ್ಮದ್ ಶಮಿ, ವರುಣ್ ಆರೋನ್, ಲಾಕಿ ಫರ್ಗುಸನ್, ಜಯಂತ್ ಯಾದವ್, ಡೊಮಿನಿಕ್ ಡ್ರೇಕ್ಸ್, ವೃದ್ಧಿಮಾನ್ ಸಹಾ (wk) , ರಹಮಾನುಲ್ಲಾ ಗುರ್ಬಾಜ್ (ವಾರ), ಗುರುಕೀರತ್ ಸಿಂಗ್ ಮಾನ್, ಪ್ರದೀಪ್ ಸಾಂಗ್ವಾನ್, ಅಲ್ಜಾರಿ ಜೋಸೆಫ್, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ಅಭಿನವ್ ಮನೋಹರ್, ಸಾಯಿ ಸುದರ್ಶನ್, ಯಶ್ ದಯಾಳ್.

ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಸೋಲು : ಎಂಎಸ್ ಧೋನಿಯನ್ನು ಟೀಕಿಸಿದ ಅಜಯ್ ಜಡೇಜಾ
ಇದನ್ನೂ ಓದಿ : RCB ಪಾಳಯ ಸೇರಿಕೊಂಡ ವಿಶ್ವ ಶ್ರೇಷ್ಟ ಆಲ್‌ರೌಂಡರ್ ಮ್ಯಾಕ್ಸ್‌ವೆಲ್
IPL 2022 : Gujarat Titans player most talented cricketer in World, Says Ravi Shastri