Jhatka Meat : ಬಾಯ್ಕಾಟ್ ಹಲಾಲ್ ಎಫೆಕ್ಟ್ : ಒಂದೇ ದಿನ 7 ಕೋಟಿ ಮೊತ್ತದ ಜಟ್ಕಾ ಮಾಂಸ ಮಾರಾಟ

ಬೆಂಗಳೂರು : ಹಲಾಲ್ ಕಟ್ ನಿಷೇಧ ಅಭಿಯಾನದಿಂದ ರಾಜ್ಯದಲ್ಲಿ ಹಿಂದೂ ಮುಸ್ಲಿಂ ನಡುವಿನ ಬಾಂಧವ್ಯ ಹದಗೆಟ್ಟಿದೆ. 10 ರೂಪಾಯಿ ವ್ಯಾಪಾರ ಮಾಡೋರು ಜಾತಿ ಧರ್ಮದ ಆಧಾರದ ಮೇಲೆ ಅಂಗಡಿಗೆ ಎಂಟ್ರಿಕೊಡುವ ಸ್ಥಿತಿ ಎದುರಾಗಿದೆ. ಆದರೆ ಈ ಹಲಾಲ್ ಕಟ್ ಬಾಯ್ಕಾಟ್ (Boycott Halal)ಅಭಿಯಾನದಿಂದ ಜಟ್ಕಾ ಕಟ್ (Jhatka Meat) ಮಂದಿ ಸಖತ್ ಲಾಭ ಗಳಿಸಿದ್ದಾರೆ. ಹೌದು ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಹೊಸತೊಡಕು ನಿವಾರಣಾ ಬಾಡೂಟ ನಡೆದಿದೆ. ಆದರೆ ಹೊಸತೊಡಕಿನಲ್ಲಿ ಹಲಾಲ್ ಬ್ಯಾನ್ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿದ್ದರಿಂದ ಇದರ ಲಾಭವನ್ನು ಜಟ್ಕಾ ಕಟ್ ಅಂಗಡಿಗಳು ಪಡೆದಿವೆ. ಹಲಾಲ್ ಬಾಯ್ಕಾಟ್ ಅಭಿಯಾನದ ಹಿನ್ನೆಲೆಯಲ್ಲಿ ಹಿಂದವೀ ಮಾರ್ಟ್ ಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದ್ದು, ನಿನ್ನೆ ಒಂದೇ ದಿನ ಹಿಂದೂ ಜಟ್ಕಾ ಮಾಂಸದ ಅಂಗಡಿಗಳಲ್ಲಿ 7 ಕೋಟಿ ಆದಾಯ ಗಳಿಕೆಯಾಗಿದೆ.

ಉಳ್ಳಾಲ ಮತ್ತು ಜ್ಞಾನಭಾರತಿ ಹಿಂದವೀ ಮೀಟ್ ಮಾರ್ಟ್ ನಲ್ಲಿ ಒಟ್ಟು 3900 ಕೆಜಿ- ಮಟನ್ 950 ಕೆಜಿ- ಚಿಕನ್ ಮಾರಾಟವಾಗಿದ್ದು, ಅಂದಾಜು ಮೊತ್ತ- 21 ಲಕ್ಷದ 71 ಸಾವಿರ ರುಪಾಯಿ ವ್ಯಾಪಾರವಾಗಿದೆ. ಇಲ್ಲಿ 180 ರಿಂದ 200 ರುಪಾಯಿ ಕೆಜಿ ಚಿಕನ್ ಮಾರಾಟವಾಗಿದ್ದರೇ, 700 ರಿಂದ 750 ರುಪಾಯಿ ಮಟನ್ ದರದಲ್ಲಿ ಮಟನ ಮಾರಾಟವಾಗಿದೆ.
ಕಮ್ಮನಹಳ್ಳಿ ಹಿಂದವೀ ಮೀಟ್ ಮಾರ್ಟ್ ನಲ್ಲಿ 750 ಕೆಜಿ- ಮಟನ್ 600 ಕೆಜಿ – ಚಿಕನ್ ಮಾರಾಟವಾಗಿದ್ದು, ಇದರ ಅಂದಾಜು ಮೊತ್ತ- 6 ಲಕ್ಷದ 33 ಸಾವಿರ ರುಪಾಯಿ.

ಜಟ್ಕಾ ಮಾಂಸಕ್ಕೆ (Jhatka Meat) ಮುಗಿಬಿದ್ದ ಜನರು

ಇಂದಿರಾನಗರದ ಹಿಂದವೀ ಮೀಟ್ ಮಾರ್ಟ್ 400 ಕೆಜಿ – ಮಟನ್, 500 ಕೆಜಿ – ಮಟನ್ ಮಾರಾಟ ಮಾಡಿದ್ದು ಇದರ ಅಂದಾಜು ಮೊತ್ತ- 3 ಲಕ್ಷದ 70 ಸಾವಿರ ರುಪಾಯಿಗಳಾಗಿದೆ.
ಹೊರಮಾವು ಹಿಂದವೀ ಮಾರ್ಟ್ ನಲ್ಲಿ 300 ಕೆಜಿ ಮಟನ್ 400 ಕೆಜಿ – ಚಿಕನ್ ಇದರ ಅಂದಾಜು ಮೊತ್ತ- 2 ಲಕ್ಷದ 82 ಸಾವಿರ ರುಪಾಯಿಗಳಾಗಿದ್ದರೇ ನಾಗವಾರ 400 ಕೆಜಿ- ಮಟನ್, ಅಂದಾಜು ಮೊತ್ತ- 2 ಲಕ್ಷದ 80 ಸಾವಿರ ರುಪಾಯಿ ಗಳಿಕೆಯಾಗಿದೆ. ಇದಲ್ಲದೇ ಬನ್ನೇರುಘಟ್ಟ, ನೆಲಗದರನಹಳ್ಳಿ ಸೇರಿದಂತೆ ಒಟ್ಟು ಎಂಟು ಹಿಂದವೀ ಮೀಟ್ ಮಾರ್ಟ್ ನಲ್ಲಿ ನಿನ್ನೆ 43,20,800 ಮೊತ್ತದ ವ್ಯಾಪಾರವಾಗಿದೆ.

ನಗರದ ಹಲವೆಡೆ ಕೆಲವರು ಹಲಾಲ್ ಮಾಂಸ ಬೇಡವೇ ಬೇಡವೆಂದು ತಿರಸ್ಕರಿಸಿದ್ರೇ ಇನ್ನೂ ಹಲವರು ಅಯ್ಯೋ ನಮಗೆ ಯಾವ ಕಟ್ ಆದರೂ ಸರಿ ಒಳ್ಳೆ ಗುಣಮಟ್ಟದ ಮಾಂಸ ಸಿಕ್ಕರೇ ಸಾಕೆಂದು ಖರೀದಿಸಿದ ದೃಶ್ಯಗಳು ಕಂಡು ಬಂತು. ಒಟ್ನಲ್ಲಿ ಹಲಾಲ್‌‌ ಮತ್ತು ಜಟ್ಕಾ ಸಂಘರ್ಷದ ನಡುವೆ ಹೊಸತೊಡಕು ಸಂಪನ್ನಗೊಂಡಿದೆ.

ಇದನ್ನೂ ಓದಿ : ಆಹಾರ ಪ್ರಿಯರಿಗೆ ಕಾದಿದೆ ಶಾಕ್ : ದುಬಾರಿಯಾಗಲಿದೆ ಹೋಟೆಲ್‌ ಊಟ, ತಿಂಡಿ

ಇದನ್ನೂ ಓದಿ : ಐಎಂಎ ಗ್ರಾಹಕರಿಗೆ ಸಿಹಿಸುದ್ದಿ: ನಿಯಮ ಪಾಲಿಸಿದ್ರೇ ವಾಪಸ್ ಸಿಗುತ್ತೆ ನಿಮ್ಮ ಚಿನ್ನ

Boycott Halal Effect Jhatka Meat Sale for 7 crores in a single day

Comments are closed.