ಮುಂಬೈ : ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಪ್ರಸ್ತುತ ಋತುವಿನಲ್ಲಿ ತನ್ನ ಮೊದಲ ಏಳು ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಮುಂಬೈ (Mumbai Indians) ಪ್ಲೇ ಆಫ್ ಕನಸು ಸದ್ಯಕ್ಕಂತೂ ಕಷ್ಟಕರ. ಈ ನಡುವಲ್ಲೇ ಭಾರತ ತಂಡದ ಖ್ಯಾತ ವೇಗಿ, ಪ್ರಸ್ತುತ ವೀಕ್ಷಕ ವಿವರಣೆಗಾರನಾಗಿರುವ ಧವಳ್ ಕುಲಕರ್ಣಿ (Dhawal Kulkarni) ಮುಂಬೈ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆಯಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಧವಳ್ ಕುಲಕರ್ಣಿ ಅವರು ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ತಂಡದ ಕಳಪೆ ಪ್ರದರ್ಶನದ ನಡುವಲ್ಲೇ ಟೀಂ ಮ್ಯಾನೇಜ್ಮೆಂಟ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದಲೂ ಮುಂಬೈ ಇಂಡಿಯನ್ಸ್ ಪರ ಕಾಣಿಸಿಕೊಳ್ಳುತ್ತಿರುವ ಧವಳ್ ಕುಲಕರ್ಣಿ ಇದೀಗ ಮತ್ತೆ ಮುಂಬೈ ತಂಡವನ್ನು ಸೇರಲು ಸಜ್ಜಾಗಿದೆ.
ಈ ಋತುವಿನ ತಮ್ಮ ಮೊದಲ ಏಳು ಪಂದ್ಯಗಳನ್ನು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಹಂತದಲ್ಲಿದೆ. ಅಷ್ಟೇ ಅಲ್ಲ ತಂಡ ಒಂದೆರಡು ಸೋಲನ್ನು ಕಂಡಿದ್ದೇ ಆದ್ರೆ ಈ ಬಾರಿಯ ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವುದು ಬಹುತೇಕ ಖಚಿತ.
ವೇಗಿ ಜಸ್ಪ್ರೀತ್ ಬುಮ್ರಾ ಈ ಬಾರಿಯ ಐಪಿಎಲ್‌ನಲ್ಲಿ ಸಪ್ಪೆ ಎನಿಸಿದ್ದಾರೆ. ಬೂಮ್ರಾ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಲಭ್ಯವಾಗಿಲ್ಲ. 2008 ರಲ್ಲಿ ಮುಂಬೈಗಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕುಲಕರ್ಣಿ, ಎರಡು ಪ್ರತ್ಯೇಕ ಪಂದ್ಯಗಳಲ್ಲಿ (2008-2013 ಮತ್ತು 2020-2021) ಎಂಟು ಋತುಗಳಲ್ಲಿ ಅವರನ್ನು ಪ್ರತಿನಿಧಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ 35 ಪಂದ್ಯಗಳಲ್ಲಿ, ಕುಲಕರ್ಣಿ ಅವರ 36 ವಿಕೆಟ್‌ಗಳು ಸರಾಸರಿ 25.44, ಎಕಾನಮಿ ದರ 8.09 ಮತ್ತು ಸ್ಟ್ರೈಕ್ ರೇಟ್ 18.86. 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದ ಕುಲಕರ್ಣಿ, ಐಪಿಎಲ್‌ನಲ್ಲಿ ಇಂಡಿಯನ್ಸ್ ಮತ್ತು ಲಯನ್ಸ್ ಜೊತೆಗೆ ರಾಜಸ್ಥಾನ ರಾಯಲ್ಸ್ (2014-2015 ಮತ್ತು 2018-2019) ಅನ್ನು ಪ್ರತಿನಿಧಿಸಿದ್ದಾರೆ.
33 ವರ್ಷದ ಕುಲಕರ್ಣಿ ಅವರು ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ 75 ಲಕ್ಷದ ಬೆಲೆ ವರ್ಗದ ಅಡಿಯಲ್ಲಿ ನೋಂದಾಯಿಸಿ ಕೊಂಡಿದ್ದರು. ಆದರೆ ಯಾವೊಂದು ತಂಡವೂ ಅವರನ್ನು ಖರೀದಿ ಮಾಡಿರಲಿಲ್ಲ. ಆದರೆ ಕುಲಕರ್ಣಿ ದೇಶೀಯ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಿ ದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಧವಳ್ ಕುಲಕರ್ಣಿ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಮರಳಿ ಸೇರ್ಪಡೆ ಮಾಡಿಕೊಳ್ಳಲಿದೆ.
ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಚರ್ಚೆ ನಡೆಯುತ್ತಿದೆ. ಧವಳ್ ಕುಲಕರ್ಣಿ ದೇಶೀಯ ಪಂದ್ಯಗಳಲ್ಲಿ ಮಿಂಚಿದ್ದಾರೆ. ಅಲ್ಲದೇ ಧವಳ್ ಕುಲಕರ್ಣಿ ಅವರೇ ಖುದ್ದು ಪುನರಾಗಮನದ ಸೂಚನೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಕುಲಕರ್ಣಿ ಆಗಮನದ ನಂತರವಾದ್ರೂ ಮುಂಬೈಗೆ ಲಕ್ ಖುಲಾಯಿಸುತ್ತಾ ಅನ್ನುವುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕೀರಾನ್ ಪೊಲಾರ್ಡ್ ನಿವೃತ್ತಿ ಘೋಷಣೆ
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಕೋವಿಡ್ ಪಾಸಿಟಿವ್ : ಖ್ಯಾತ ಆಟಗಾರರು ಔಟ್
Indian pacer present commentator enter Mumbai Indians for IPL 2022