ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 10 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಐಪಿಎಲ್‌ಗೆ ಸಿದ್ದವಾಗುತ್ತಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ತನ್ನ ನಾಯಕನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಘೋಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿಂದು ಬೆಂಗಳೂರಿನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ (RCB Unbox Live) ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಹೊಸ ನಾಯಕನನ್ನು ಆರ್‌ಸಿಬಿ ಆಡಳಿತ ಮಂಡಳಿ ಘೋಷಣೆ ಮಾಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 27 ರಂದು ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಆದರೆ ಆರ್‌ಸಿಬಿಯನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆರ್‌ಸಿಬಿ ನಾಯಕತ್ವ ವಿಚಾರದ ಎಲ್ಲಾ ಕುತೂಹಲಗಳಿಗೆ ಇಂದು ಮಧ್ಯಾಹ್ನ 3:45 ಕ್ಕೆ ತೆರೆ ಬೀಳಲಿದೆ.
ಐಪಿಎಲ್ 2021 ರ ನಂತರ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದರು ಮತ್ತು ಅಂದಿನಿಂದ ಹುದ್ದೆ ಖಾಲಿಯಾಗಿದೆ. ಏತನ್ಮಧ್ಯೆ, ಆರ್‌ಸಿಬಿಯ ಹೊಸ ನೇಮಕಾತಿ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನಾಗಿ ಘೋಷಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಮ್ಯಾಕ್ಸ್‌ವೆಲ್ ತಂಡದ ನಾಯಕನಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಆರಂಭಿಕ ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅಲಭ್ಯರಾಗಲಿದ್ದಾರೆ. ಹೀಗಾಗಿ ಡು ಪ್ಲೆಸಿಸ್‌ಗೆ ನಾಯಕತ್ವ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ ವಿರಾಟ್ ಕೊಹ್ಲಿಗೆ ನಾಯಕನಾಗಿ ಮುಂದುವರಿಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
RCB Unbox Live : ಐಪಿಎಲ್ 2022 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮಾ ಮಿಲಿಂದ್, ಕರ್ನ್‌ಹಾಲ್ ಪಟ್ಲ್ ಶರ್ಮಾ, ವಾನ್ಸಿಲ್ ಶರ್ಮಾ ಹಸರಂಗ, ಶಹಬಾಜ್ ಅಹ್ಮದ್, ಮಹಿಪಾಲ್ ಲೋಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್
ಇದನ್ನೂ ಓದಿ : ಆರ್‌ಸಿಬಿಗೆ ಯಾರು ನಾಯಕ ? ಆಶ್ಚರ್ಯಕರ ವಿಡಿಯೋ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ
ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್‌ಗೆ ಬಿಗ್ ಶಾಕ್ : ಖ್ಯಾತ ಆಟಗಾರ ತಂಡದಿಂದ ಔಟ್
(IPL 2022 RCB Unbox Live RCB to announce new captain)