cm ibrahim : ಪಂಚ ರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ಗೆ ಶಾಕ್‌ : ಕೈಗೆ ಇಬ್ರಾಹಿಂ, ರೋಷನ್‌ ಬೇಗ್‌ ಗುಡ್‌ಬೈ

ಬೆಂಗಳೂರು : ಪಂಚ ರಾಜ್ಯದ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕಾಂಗ್ರೆಸ್ ಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು ಈಗಾಗಲೇ ಕಾಂಗ್ರೆಸ್ ಮುಕ್ತ ಭಾರತ ಎಂಬ ಟೀಕೆಗೆ ಕೈಪಡೆ ಗುರಿಯಾಗಿದೆ. ಈ ಮಧ್ಯೆ ಅಲ್ಪ ಸ್ವಲ್ಪ ಪ್ರಭಾವ ಉಳಿಸಿಕೊಂಡಿರೋ ಕರ್ನಾಟಕ ಕಾಂಗ್ರೆಸ್ ಗೂ ಶಾಕ್ ಎದುರಾಗಿದ್ದು, ರಾಜ್ಯದ ಇಬ್ಬರೂ ಪ್ರಭಾವಿ ಅಲ್ಪ ಸಂಖ್ಯಾತ ನಾಯಕರು (cm ibrahim ) ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲೂ ಒಳಜಗಳ ಬೇಕಷ್ಟಿದೆ. ಅಷ್ಟೇ ಅಲ್ಲ ಇಲ್ಲಿರೋ ಬಹುತೇಕ ನಾಯಕರು ಅಧಿಕಾರಕ್ಕಾಗಿಯೇ ಪಕ್ಷದ ಜೊತೆಗೆ ಉಳಿದುಕೊಂಡಿರೋದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಪಂಚ ರಾಜ್ಯ ಚುನಾವಣೆ ಸೋಲನ್ನೇ ಸಹಿಸಿಕೊಳ್ಳಲು ಕಷ್ಟ ಪಡ್ತಿರೋ ರಾಜ್ಯ ಕಾಂಗ್ರೆಸ್ ಗೆ ಈ ಹೊತ್ತಿನಲ್ಲಿಯೇ ಮತ್ತೊಂದು ಶಾಕ್‌ಎದುರಾಗಿದೆ. ರಾಜ್ಯದ ಇಬ್ಬರು ಕೈ ನಾಯಕರು ಜೆಡಿಎಸ್ ಸೇರ್ಪಡೆಗೆ ಸಜ್ಜಾಗಿದ್ದು, ಕೈ ಪಡೆಗೆ ಓಟ್ ಬ್ಯಾಂಕ್ ಆಗಿರೋ ಅಲ್ಪ ಸಂಖ್ಯಾತರ ಓಟ್ ಕೈತಪ್ಪೋ ಭಯ ಎದುರಾಗಿದೆ.

ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯಲು ಸಿದ್ಧವಾಗಿದ್ದಾರೆ. ಈಗಾಗಲೇ ಮಾನಸಿಕವಾಗಿ ಕಾಂಗ್ರೆಸ್ ನಿಂದ ಹೊರಕ್ಕೆ ಬಂದಿರೋ ಸಿ.ಎಂ.ಇಬ್ರಾಹಿಂ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಘೋಷಿಸೋದು ಮಾತ್ರ ಬಾಕಿ ಇದೆ. ಶನಿವಾರ ಸಿ.ಎಂ.ಇಬ್ರಾಹಿಂ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಈ ಸುದ್ದಿಗೋಷ್ಠಿಯಲ್ಲಿ ಆಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಲಿದ್ದಾರಂತೆ. ಮಾತ್ರವಲ್ಲ ವಿಧಾನಪರಿಷತ್ ಸ್ಥಾನಕ್ಕೂ ವಿದಾಯ ಹೇಳಲಿದ್ದಾರೆ.

ಸಿ.ಎಂ‌.ಇಬ್ರಾಹಿಂ ಆರಂಭದಿಂದಲೂ ವಿಧಾನಪರಿಷತ್ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಕೂಡ ಸ್ಥಾನಮಾನ ನೀಡುವ ಭರವಸೆ ನೀಡಿತ್ತು. ಆದರೆ ಬಳಿಕ ಪರಿಷತ್ ಸ್ಥಾನವನ್ನು ಬಿ.ಕೆ.ಹರಿಪ್ರಸಾದ್ ಗೆ ನೀಡಿತ್ತು. ಇದು ಸಿ.ಎಂ.ಇಬ್ರಾಹಿಂ ಗೌರವಕ್ಕೆ ಧಕ್ಕೆ ತಂದಂತಾಗಿದ್ದು, ಇದೇ ಕಾರಣಕ್ಕೆ ಇಬ್ರಾಹಿಂ ಕೈಸಾಂಗತ್ಯ ತೊರೆಯಲು ಮುಂದಾಗಿದ್ದಾರೆ.

ಇನ್ನೊಂದೆಡೆ ಸಿ.ಎಂ.ಇಬ್ರಾಹಿಂ ಜೊತೆ ಮತ್ತೊಬ್ಬ ಅಲ್ಪ ಸಂಖ್ಯಾತ ಪ್ರಬಲ ನಾಯಕ ರೋಷನ್ ಬೇಗ್ ಕೂಡ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ತೆನೆ ಹೊರಲಿದ್ದಾರಂತೆ. ಈಗಾಗಲೇ ಕಾಂಗ್ರೆಸ್ ನಿಂದ ಶಿಸ್ತುಕ್ರಮ ಎದುರಿಸಿ ಮುಜುಗರಕ್ಕೊಳಗಾಗಿರುವ ರೋಷನ್ ಬೇಗ್ ಈ ಹಿಂದಿನಿಂದಲೂ ಬಿಜೆಪಿ ಸೇರ್ಪಡೆಗೆ ಉತ್ಸುಕರಾಗಿದ್ದರು. ಆದರೆ ಐಎಂಎ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಬೇಗ್ ಸೇರ್ಪಡೆಗೆ ಮನಸ್ಸು ಮಾಡಿಲ್ಲ.‌ಹೀಗಾಗಿ ಈಗ ಬೇಗ್ ಗೆ ಜೆಡಿ ಎಸ್ ಮಾತ್ರ ಗತಿ ಎಂಬಂತಾಗಿದೆ. ಹೀಗಾಗಿ ಇಬ್ರಾಹಿಂ ಜೊತೆ ರೋಷನ್ ಬೇಗ್ ಕೂಡ ದಳಪತಿಗಳ ಜೊತೆ ಕೈಜೋಡಿಸಲಿದ್ದಾರಂತೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಲ್ಪಸಂಖ್ಯಾತ ಓಟುಗಳು ವಿಭಜನೆ ಆಗೋದು ಖಚಿತವಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ :  ಹಸ್ತಿನಾಪುರದಲ್ಲಿ ಠೇವಣಿ ಕಳೆದುಕೊಂಡ ಬಿಕನಿ ಸುಂದರಿ ಅರ್ಚನಾ ಗೌತಮ್

ಇದನ್ನೂ ಓದಿ : ಪಂಜಾಬ್‌ ಗೆಲುವು, ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ !

(cm ibrahim roshan baig announces resignation to congress )

Comments are closed.