ಭಾನುವಾರ, ಏಪ್ರಿಲ್ 27, 2025
HomeSportsIPL 2022 RCB : 3 ಮಂದಿ ಸ್ಟಾರ್‌ ಆಟಗಾರರನ್ನುಕೈಬಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು

IPL 2022 RCB : 3 ಮಂದಿ ಸ್ಟಾರ್‌ ಆಟಗಾರರನ್ನುಕೈಬಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು

- Advertisement -

ಬೆಂಗಳೂರು : ಐಪಿಎಲ್‌ 2022 (IPL 2022 RCB) ಸಿದ್ದತೆ ಜೋರಾಗಿದೆ. ಈಗಾಗಲೇ ತಂಡಗಳು ರಿಟೈನ್‌ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದೆ. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರು ತಂಡದಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಆರ್‌ಸಿಬಿ ನಾಯಕ ವಿರಾಟ್‌ ಕೊಯ್ಲಿ ತಂಡದ ನಾಯಕತ್ವ ತ್ಯೆಜಿಸಿದ್ದಾರೆ. ಇನ್ನೊಂದೆಡೆಯಲ್ಲಿ ಎಬಿ ಡಿವಿಲಿಯರ್ಸ್‌ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದರಿಂದಾಗಿ ಎಬಿಡಿ ಈ ಬಾರಿ ಲಭ್ಯರಾಗೋದಿಲ್ಲ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಸ್ಟಾರ್‌ ಆಟಗಾರರನ್ನು ತಂಡದಿಂದ ಕೈ ಬಿಡಲು ಮುಂದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ಸಮರ್ಥ ತಂಡವನ್ನು ಕಟ್ಟಲು ಟೀಂ ಮ್ಯಾನೇಜ್ಮೆಂಟ್‌ ಸಜ್ಜಾದಂತೆ ಕಾಣಿಸುತ್ತಿದೆ. ಸ್ಟಾರ್‌ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್ ಅಥವಾ ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸುಕೊಳ್ಳುವ ಸಾಧ್ಯತೆಯಿದೆ. ಇನ್ನು ತಂಡಕ್ಕೆ ಹೊಸ ನಾಯಕನ ಆಯ್ಕೆಯ ಹಿನ್ನೆಲೆಯಲ್ಲಿ ಸದ್ಯ ಇರುವ ಆಟಗಾರರನ್ನೇ ನಾಯಕನನ್ನಾಗಿ ನೇಮಕ ಮಾಡುತ್ತಾ, ಇಲ್ಲ ಹೊಸ ಆಟಗಾರನನ್ನು ಖರೀದಿ ಮಾಡುತ್ತಾ ಅನ್ನೋದು ಖಚಿತವಾಗಿಲ್ಲ. ಆದರೆ ರಾಯಲ್‌ ಚಾಲೆಂಜರ್ಸ್‌ ತಂಡದ ಭಾಗವಾಗಿದ್ದ ಈ ಮೂವರು ಪ್ರಮುಖ ಆಟಗಾರರಿಗೆ ಕೋಕ್‌ ಸಿಗುವುದು ಬಹುತೇಕ ಖಚಿತ.

ವಾಷಿಂಗ್ಟನ್ ಸುಂದರ್ :

ವಾಷಿಂಗ್ಟನ್ ಸುಂದರ್ RCB ತಂಡದ ಪ್ರಮುಖ ಆಲ್‌ರೌಂಡರ್.‌ ಹಲವು ಸೀಸನ್‌ಗಳಿಂದಲೂ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನೊಂದಡೆಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರೂ ಕೂಡ ತಂಡದಿಂದ ಹೊರ ನಡೆಯೋದು ಬಹುತೇಕ ಖಚಿತ. ಆರ್‌ಸಿಬಿ ತಂಡ ಪರ ಆಡಿದ್ದ ವಾಷಿಂಗ್ಟನ್‌ ಸುಂದರ ಸ್ಥಿರ ಪ್ರದರ್ಶನವನ್ನು ನೀಡಿಲ್ಲ. ಜೊತೆಗೆ ಸುಂದರ್ ಗಾಯದ ಕಾರಣ IPL 2021 UAE ಹಂತದಲ್ಲಿ ಭಾಗವಹಿಸಲಿಲ್ಲ ಮತ್ತು RCB ಅವರನ್ನು ಆಡುವ XI ನಲ್ಲಿಯೂ ಆಡಿಲ್ಲ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಕಷ್ಟಸಾಧ್ಯ.

ದೇವದತ್ ಪಡಿಕ್ಕಲ್:

2020 ರ ಹಿಂದಿನ ಐಪಿಎಲ್ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿತ್ತು. ಅಲ್ಲದೇ ಕಳೆದ ಎರಡು ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ ಹೊಂದಿದ್ದು, ತಂಡಕ್ಕೆ ಗೆಲುವನ್ನು ಧಕ್ಕಿಸಿಕೊಂಡಿದ್ದರು. ಎಡಗೈ ಯುವ ಆಟಗಾರ ದೇವದತ್ತ ಪಡಿಕ್ಕಲ್‌ ಅವರನ್ನು ಆರ್‌ಸಿಬಿ ತಂಡ ನಾಯಕನಾಗ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಅಷ್ಟೇ ಯಾಕೆ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಭವಿಷ್ಯದ ಆಟಗಾರ ಅಂತಾನೇ ಗುರುತಿಸಿಕೊಂಡಿದ್ದಾರೆ. ಆದರೆ ಈ ಬಾರಿ ಪಡಿಕ್ಕಲ್‌ ಅವರನ್ನು ಆರ್‌ಸಿಬಿ ಉಳಿಸಿಕೊಳ್ಳುವುದು ಅನುಮಾನ.

ಆಡಮ್ ಝಂಪಾ:

ಆಡಮ್ ಝಂಪಾ ವಿಶ್ವದ ಅಗ್ರಗಣ್ಯ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ T20 ವಿಶ್ವಕಪ್ 2021ರಲ್ಲಿ ಆಸ್ಟ್ರೇಲಿಯಾ ಪರ ಅತ್ಯುತ್ತಮ ಫಾರ್ಮ್‌ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಐಪಿಎಲ್‌ನಲ್ಲಿಯೂ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. ಆದರೆ ಯಜುವೇಂದ್ರ ಚಹಾಲ್‌ ಅವರನ್ನು ಉಳಿಸಿಕೊಳ್ಳಲು ಮುಂದಾಗಿರುವ ಆರ್‌ಸಿಬಿ ಆಡಂ ಝಂಪಾ ಅವರಿಗೆ ಕೋಕ್‌ ನೀಡಲು ಸಜ್ಜಾಗಿದೆ.

ಇದನ್ನೂ ಓದಿ : ಐಪಿಎಲ್‌ ಮೆಗಾ ಹರಾಜಿಗೆ ಸಿದ್ದತೆ : ಯಾವ ತಂಡದಲ್ಲಿ ಯಾರು ಉಳಿದುಕೊಂಡಿದ್ದಾರೆ : ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್‌

ಇದನ್ನೂ ಓದಿ : AB de Villiers : IPL ಸೇರಿ ಎಲ್ಲಾ ಮಾದರಿಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಎಬಿ ಡಿವಿಲಿಯರ್ಸ್‌

( IPL 2022 RCB : Royal Challengers Bangalore not Retained 3 Big Players )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular