ಅಹಮದಾಬಾದ್ : IPL 2023 Final CSK vs GT Live : ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಇಂದು ನಡೆಯಲಿದೆ. ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಸೆಣೆಸಾಡಲಿದೆ. ಆದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಮುಖಾಮುಖಿಯಾಗಲಿರುವ ಪಂದ್ಯಕ್ಕೆ ಮಳೆಯ ಭೀತಿ ಆವರಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಲಿದ್ದಾರೆ. ಕಳೆದ ಬಾರಿಯಷ್ಟೇ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಗುಜರಾತ್ ಟೈಟಾನ್ಸ್ ತಂಡ ಮೊದಲ ಸರಣಿಯಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಈ ಬಾರಿಯೂ ಫೈನಲ್ ಪ್ರವೇಶ ಪಡೆದುಕೊಂಡಿದೆ. ಚೆನ್ನೂ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದೆ. ಇದುವರೆಗೆ ಒಟ್ಟು 9 ಬಾರಿ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ಒಟ್ಟು 4 ಬಾರಿ ಐಪಿಎಲ್ ಟ್ರೋಪಿಯನ್ನು ಜಯಿಸಿದೆ. ಆದರೆ ಐದು ಬಾರಿ ಸೋಲನ್ನು ಕಂಡಿದೆ. ಇದೀಗ 10 ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲುವ ಫೇವರೇಟ್ ತಂಡವಾಗಿ ಹೊರಹೊಮ್ಮಿದೆ.
ಲೀಗ್ ಹಂತದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತ್ತು. ಎರಡನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ದ ಭರ್ಜರಿ ಆಟದ ಮೂಲಕ ಫೈನಲ್ ಪ್ರವೇಶಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 1 ಪಂದ್ಯಗಳಲ್ಲಿ ಗೆದ್ದಿದ್ರೆ ಗುಜರಾತ್ ಟೈಟಾನ್ಸ್ 3 ಪಂದ್ಯಗಳಲ್ಲಿ ಗೆಲುವು ಕಂಡಿದೆ.
IPL 2023 Final CSK vs GT : ಪಿಚ್ ರಿಪೋರ್ಟ್
ಅಹಮದಾಬಾದ್ ಕ್ರೀಡಾಂಗಣದಲ್ಲಿ ಈ ಬಾರಿ ಒಟ್ಟು ಎಂಟು ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಎಂಟು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಸೋಲನ್ನು ಕಂಡಿವೆ. ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಟಾಸ್ ಸೋತರು ನಾಲ್ಕು ಬಾರಿ ಗೆಲುವು ಕಂಡಿದೆ. ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿ ನೆರವಾಗಲಿದ್ದು, ಮೊದಲು ಬ್ಯಾಟಿಂಗ್ ನಡೆಸುವ ತಂಡ ಸರಾಸರಿ ೧೯೦ರನ್ ಬಾರಿಸಲಿದೆ. ಇನ್ನು ಈ ಮೈದಾನದಲ್ಲಿನ 207 ರನ್ ತಂಡವೊಂದರ ಗರಿಷ್ಠ ಮೊತ್ತವಾಗಿದೆ.
It all comes down to this. Are you ready, Superfans?#IPL2023 #WhistlePodu #Yellove 🦁💛 pic.twitter.com/cyUyHuDSf1
— Chennai Super Kings (@ChennaiIPL) May 28, 2023
CSK vs GT : ಆಟಗಾರರ ಬಲಾಬಲ
ಇನ್ನು ಚೆನ್ನೈ ಹಾಗೂ ಗುಜರಾತ್ ತಂಡಗಳ ನಡುವಿನ ಆಟಗಾರರ ಬಲಾಬಲ ನೋಡುವುದಾದ್ರೆ. ಚೆನ್ನೈ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ 4 ಪಂದ್ಯಗಳಲ್ಲಿ 237 ರನ್ ಗಳಿಸಿದ್ದು, 145 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಲ್ಲದೇ ಗರಿಷ್ಟ 62 ರನ್ ಬಾರಿಸಿದ್ದಾರೆ. ಇನ್ನು ಗುಜರಾತ್ ತಂಡ ಆರಂಭಿಕ ಆಟಗಾರ ಚೆನ್ನೈ ತಂಡದ ವಿರುದ್ದ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ 2 ಪಂದ್ಯಗಳಲ್ಲಿ 123 ರನ್ ಗಳಿಸಿದ್ದು, 133ರ ಸ್ಟ್ರೇಕ್ ರೇಟ್ ಹೊಂದಿದ್ದಾರೆ. ಅಲ್ಲದೇ ಗರಿಷ್ಟ 63 ರನ್ ಬಾರಿಸಿದ್ರೆ, ಮತ್ತೋರ್ವ ಆರಂಭಿಕ ಆಟಗಾರ ವೃದ್ದಿಮಾನ್ ಸಾಹ 4 ಪಂದ್ಯಗಳನ್ನು ಆಡಿದ್ದು 115 ರನ್ ಗಳಿಸಿದ್ದಾರೆ. 113ರ ಸ್ಟ್ರೇಕ್ ರೇಟ್ ಹೊಂದಿದ್ದು, ಗರಿಷ್ಟ 67 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ ಎ ಜೋಸೆಫ್ 3 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ್ರೆ, ರವೀಂದ್ರ ಜಡೇಜಾ 3 ಪಂದ್ಯಗಳಲ್ಲಿ 4 ವಿಕೆಟ್ ಪಡೆದುಕೊಂಡಿದ್ದಾರೆ.
ಶುಭಮನ್ ಗಿಲ್ ಗರಿಷ್ಠ ರನ್
ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ 16 ಪಂದ್ಯಗಳನ್ನು ಆಡಿದ್ದು, ೮೫೧ ರನ್ ಬಾರಿಸುವ ಮೂಲಕ ಗರಿಷ್ಟ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಾರಿ 3 ಶತಕ, 4 ಅರ್ಧ ಶತಕ ಬಾರಿಸಿದ್ದಾರೆ. ಗರಿಷ್ಟ 129 ರನ್ ಬಾರಿಸುವ ಮೂಲಕ ಐಪಿಲ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಪ್ ಡುಪ್ಲೆಸಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 14 ಇನ್ನಿಂಗ್ಸ್‌ಗಳ ಮೂಲಕ 730 ರನ್ ಬಾರಿಸಿದ್ರೆ, ವಿರಾಟ್ ಕೊಹ್ಲಿ 14 ಇನ್ನಿಂಗ್ಸ್ ಆಡಿದ್ದು 639 ರನ್ ಬಾರಿಸಿರುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಚೆನ್ನೈ ತಂಡದ ಡೆವೋನ್ ಕಾನ್ವೆ 15 ಇನ್ನಿಂಗ್ಸ್‌ಗಳಲ್ಲಿ 625 ರನ್ ಗಳಿಸುವ ಮೂಲಕ 5 ನೇ ಸ್ಥಾನದಲ್ಲಿದ್ದಾರೆ.
JUST 1️⃣ MORE HOUR TO GO! #CSKvGT | #PhariAavaDe | #TATAIPL 2023 Final pic.twitter.com/hgnb4zEze7
— Gujarat Titans (@gujarat_titans) May 28, 2023
ಮೊಹಮ್ಮದ್ ಸೆಮಿ ಬೆಸ್ಟ್ ಬೌಲರ್
ಇನ್ನು ಬೌಲಿಂಗ್ ವಿಭಾಗದಲ್ಲಿಯೂ ಗುಜರಾತ್ ತಂಡ ಬಲಿಷ್ಠವಾಗಿದ್ದು, ಗುಜರಾತ್ ತಂಡದ ಪ್ರಮಖ ಬೌಲರ್ ಮೊಹಮ್ಮದ್ ಸೆಮಿ 16 ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್ ಪಡೆದು ಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ತಂಡ ರಶೀದ್ ಖಾನ್ ಇದ್ದು,16 ಪಂದ್ಯಗಳಲ್ಲಿ 27 ವಿಕೆಟ್ ಉರುಳಿಸಿದ್ದಾರೆ. ಅಲ್ಲದೇ ಗುಜರಾತ್ ತಂಡದ ಮೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು 13 ಪಂದ್ಯಗಳನ್ನು ಆಡಿದ್ದು, 24 ವಿಕೆಟ್ ಕಬಳಿಸಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತುಷಾರ್ ದೇಶಪಾಂಡೆ 15 ಪಂದ್ಯಗಳಲ್ಲಿ 20 ವಿಕೆಟ್ ಹಾಗೂ ರವೀಂದ್ರ ಜಡೇಜಾ 15 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸುವ ಮೂಲಕ 6 ಮತ್ತು 8 ನೇ ಸ್ಥಾನದಲ್ಲಿದ್ದಾರೆ.
CSK vs GT : ಪಂದ್ಯಕ್ಕೆ ಮಳೆಯ ಭೀತಿ
ಹವಾಮಾನ ವರದಿಯ ಪ್ರಕಾರ ಅಹಮದಾಬಾದ್‌ನಲ್ಲಿ ಭಾನುವಾರ ಸಂಜೆಯ ವೇಳೆಗೆ ತುಂತುರು ಮಳೆ ಸುರಿಯುವ ಸಾಧ್ಯತೆಯಿದೆ. ಸಂಜೆಯ ವೇಳೆಯಲ್ಲಿ ಶೇ.40 ರಷ್ಟು ಮಳೆಯಾಗುವ ಸಾಧ್ಯತೆಗಳಿದ್ದು, ಸೂರ್ಯಾಸ್ತದ ನಂತರ ಮಳೆ ಬಂದಾಗ ಗಂಟೆಗೆ 50 ಕಿಮೀ ವೇಗದ ಗಾಳಿ ಬೀಸುವ ನಿರೀಕ್ಷೆಯಿದೆ. ಇದನ್ನೂ ಓದಿ : IPL 2023 Prize Money : ಐಪಿಎಲ್ ವಿಜೇತರಿಗೆ 20 ಕೋಟಿ, ರನ್ನರ್ ಅಪ್, ಆರೆಂಜ್ ಕ್ಯಾಪ್ – ಪರ್ಪಲ್ ಕ್ಯಾಪ್ ವಿಜೇತರಿಗೆ ಸಿಗುವ ಹಣವೆಷ್ಟು ?
IPL 2023 Final : ಫೈನಲ್ ವಿಜೇತರಿಗೆ ಬಹುಮಾನ
ಐಪಿಎಲ್ 2023 ರ ಫೈನಲ್‌ನ ವಿಜೇತರು 20 ಕೋಟಿ ರೂ. ಬಹುಮಾನ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ರನ್ನರ್ ಅಪ್ ತಂಡ 13 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ 7 ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ 6.5 ಕೋಟಿ ರೂ. ಬಹುಮಾನ ಪಡೆದುಕೊಳ್ಳಲಿದೆ. ಇದನ್ನೂ ಓದಿ : IPL 2023 Final : ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಿಂತ ಸೋತಿದ್ದೇ ಹೆಚ್ಚು
CSK vs GT : ಸಂಭಾವ್ಯ ತಂಡ
ಚೆನ್ನೈ ಸೂಪರ್ ಕಿಂಗ್ಸ್ (CSK) : ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಣ
ಗುಜರಾತ್ ಟೈಟಾನ್ಸ್ (GT) : ವೃದ್ಧಿಮಾನ್ ಸಹಾ(ವಿಕೆ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್