ಬುಧವಾರ, ಏಪ್ರಿಲ್ 30, 2025
HomeSportsCricketIPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್...

IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

- Advertisement -

IPL 2023 RCB TEAM : ಇಂಡಿಯನ್ ಪ್ರೀಮಿಯರ್ ಲೀಗ್ ಗೆ (IPL 2023 ) ಸಕಲ ಸಿದ್ದತೆಗಳು ಜೋರಾಗಿ ನಡೆಯುತ್ತಿದೆ. ಅದ್ರಲ್ಲೂ ಆರ್ ಸಿಬಿ ( RCB TEAM) ಅಭಿಮಾನಿ ಗಳು ಈ ಬಾರಿಯೂ ಕಪ್ ನಮ್ಮದೇ ಅನ್ನೋದಕ್ಕೆ ಆರಂಭಿಸಿದ್ದಾರೆ. ಈ ನಡುವಲ್ಲೇ ಆರ್ ಸಿಬಿ ತಂಡ ಹಲವು ಬದಲವಣೆಗಳನ್ನು ಮಾಡಿಕೊಳ್ಳಲು ಸಜ್ಜಾಗಿದೆ. ಅದ್ರಲ್ಲೂ ಟೀಂ ಇಂಡಿಯಾದ ಮೂವರು ಖ್ಯಾತ ಆಟಗಾರರು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರುವುದು ಖಚಿತ.

ಐಪಿಎಲ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಟ್ರೋಫಿ ಗೆದ್ದಿಲ್ಲ. ಆದರೆ ಕೋಟ್ಯಾಂತರ ಅಭಿಮಾನಿಗಳನ್ನು ತಂಡ ಹೊಂದಿದೆ. ವಿರಾಟ್‌ ಕೊಹ್ಲಿ ನಾಯಕತ್ವವನ್ನು ತ್ಯೆಜಿಸಿ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನೆಡೆಸಿದ್ದರೂ ಕೂಡ ಆರ್ ಸಿಬಿ ಲಕ್ ಮಾತ್ರ ಬದಲಾಗಲೇ ಇಲ್ಲ. ಆದರೆ ಕಳೆದ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಆರ್ ಸಿಬಿ ಈ ಬಾರಿ ಶತಾಯಗತಾಯ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಇದೇ ಕಾರಣಕ್ಕೆ ತಂಡದಲ್ಲಿ ಕೆಲವು ಆಟಗಾರರನ್ನು ಕೈಬಿಟ್ಟು ಯುವ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಸಜ್ಜಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ,ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ ವೆಲ್ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೇ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಈ ನಾಲ್ವರು ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಅಬ್ಬರಿಸೋದು ಗ್ಯಾರಂಟಿ.

ಐಪಿಎಲ್ 2023 ರ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕರಣ್ ಶರ್ಮಾ, ಅನುಜ್ ರಾವತ್, ಸಿದ್ಧಾರ್ಥ್ ಕೌಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಸಜ್ಜಾಗಿದೆ.

ಕರರ್ಣ್ ಶರ್ಮಾ (Karn Sharma)

ಐಪಿಎಲ್ 2023 ರ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಡುಗಡೆ ಮಾಡಬಹುದಾದ ಆಟಗಾರರಲ್ಲಿ ಕರರ್ಣ್ ಶರ್ಮಾ ಕೂಡ ಒಬ್ಬರು. ಫ್ರಾಂಚೈಸಿ ಕರರ್ಣ್ ಶರ್ಮಾ ಅವರನ್ನು ವನಿಂದು ಹಸರಂಗಾಗೆ ಬ್ಯಾಕಪ್ ಲೆಗ್ ಸ್ಪಿನ್ನರ್ ಆಗಿ ಆಯ್ಕೆ ಮಾಡಿದೆ. ಆದರೆ ಕಳೆದ ಬಾರಿ ಕರಣ್ ಶರ್ಮಾ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಿಲ್ಲ. ಅಲ್ಲದೇ ಐಪಿಎಲ್ 2023ರಲ್ಲಿ ಮತ್ತೆ ಆಡಿಸಿದ್ರೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಇನ್ನೊಂದೆಡೆಯಲ್ಲಿ ವನಿಂದು ಹಸರಂಗ ಕೂಡ ನಿರೀಕ್ಷಿತ ಆಟವನ್ನು ಆಡಿಲ್ಲ. ಇದೇ ಕಾರಣಕ್ಕೆ ಉತ್ತಮ ಆಟಗಾರನನ್ನು ಆಯ್ಕೆ ಮಾಡಲು ಆರ್ ಸಿಬಿ ಪ್ಲ್ಯಾನ್‌ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಕರಣ್ ಶರ್ಮಾ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ.

ಅನುಜ್ ರಾವತ್ (Anuj Rawat)

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಅನುಜ್ ರಾವತ್‌ಗೆ RCB 3.4 ಕೋಟಿಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆರಂಭದಲ್ಲಿ ಉತ್ತಮ ಆಟವಾಡಿದ್ದರೂ ಕೂಡ ಕಳೆದ ಬಾರಿಯ ಐಪಿಎಲ್ ನಲ್ಲಿ ಅವರು 8 ಪಂದ್ಯಗಳಲ್ಲಿ 16.13 ರ ಸರಾಸರಿಯಲ್ಲಿ 129 ರನ್ ಗಳಿಸಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ ನಲ್ಲಿ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ತೀರಾ ಕಡಿಮೆ ಅನ್ನೋ ಕಾರಣಕ್ಕೆ ತಂಡದ ಆಡಳಿತ ಮಂಡಳಿ ಅನುಜ್ ರಾವತ್‌ ಅವರನ್ನು ತಂಡದಿಂದ ಕೈ ಬಿಡಲು ಮುಂದಾಗಿದೆ.

ಸಿದ್ಧಾರ್ಥ್ ಕೌಲ್ (Siddharth Kaul)

ಸಿದ್ಧಾರ್ಥ್ ಕೌಲ್ 2018 ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ಅವರು 2018 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು. ಕಳೆದ ಬಾರಿ ಆರ್‌ಸಿಬಿ ವೇಗದ ಬೌಲರ್‌ ಸಿದ್ದಾರ್ಥ್‌ ಕೌಲ್‌ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಅವರನ್ನು ಕೇವಲ ಒಂದು ಪಂದ್ಯಕ್ಕಷ್ಟೇ ಸೀಮಿತಗೊಳಿಸಿತ್ತು. ಮುಂಬರುವ ಐಪಿಎಲ್‌ ಮಿನಿ ಹರಾಜಿನಲ್ಲಿ ಸಿದ್ದಾರ್ಥ್‌ ಕೌಲ್‌ ಅವರನ್ನು ಆರ್‌ಸಿಬಿ ಹೊರಗಿಟ್ಟು ಬದಲಿ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ

. Follow us : ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : T20 World Cup 2022: ಭಾರತದ ಕೈಯಲ್ಲಿ ಪಾಕ್ ಭವಿಷ್ಯ, ಟೀಮ್ ಇಂಡಿಯಾ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ

ಇದನ್ನೂ ಓದಿ : Dinesh Karthik: ದಿನೇಶ್ ಕಾರ್ತಿಕ್ ಪವರ್ ಹಿಟ್ಟಿಂಗ್ ಸಕ್ಸಸ್ ಹಿಂದೆ ಬೆಂಗಳೂರು ಕೋಚ್ RX

IPL 2023 RCB TEAM : RCB release these 3 Indian players for IPL 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular